ಆ್ಯಪ್ನಗರ

21 ದಿನದಲ್ಲೇ ಅತ್ಯಾಚಾರಿಗೆ ಶಿಕ್ಷೆ ನೀಡುವ ದಿಶಾ ವಿಧೇಯಕ ಅಂಗೀಕರಿಸಿದ ಆಂಧ್ರ ಸರಕಾರ

ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ಅಪರಾಧಿಗಳಿಗೆ 21 ದಿನಗಳಲ್ಲಿಯೇ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ 'ದಿಶಾ ವಿಧೇಯಕ-2019' ಅನ್ನು ಆಂಧ್ರಪ್ರದೇಶ ವಿಧಾನಸಭೆ ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಿದೆ.

Vijaya Karnataka Web 13 Dec 2019, 10:00 pm
ಅಮರಾವತಿ: ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ, ಹಲ್ಲೆ, ಲೈಂಗಿಕ ಕಿರುಕುಳ, ಆ್ಯಸಿಡ್‌ ದಾಳಿ ಪ್ರಕರಣಗಳಲ್ಲಿಎಫ್‌ಐಆರ್‌ ದಾಖಲಾದ ನಂತರ 21 ದಿನಗಳಲ್ಲಿಯೇ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ 'ದಿಶಾ ವಿಧೇಯಕ-2019' ಅನ್ನು ಆಂಧ್ರಪ್ರದೇಶ ವಿಧಾನಸಭೆ ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಅಪರಾಧ ಸಾಬೀತಾದರೆ 21 ದಿನದಲ್ಲಿಮರಣದಂಡನೆ ಶಿಕ್ಷೆ ವಿಧಿಸಲು ಸಹ ಇದರಿಂದ ಹಾದಿ ಸುಗಮವಾಗಿದೆ.
Vijaya Karnataka Web jagan mohan reddy


ಉದ್ದೇಶಿತ ಕಾನೂನಿಗೆ 'ಆಂಧ್ರಪ್ರದೇಶ ದಿಶಾ ಕಾಯಿದೆ-2019' ಎಂದು ನಾಮಕರಣ ಮಾಡುವ ಮೂಲಕ ಇತ್ತೀಚೆಗೆ ಅತ್ಯಾಚಾರ ಪ್ರಕರಣದಲ್ಲಿಮೃತಪಟ್ಟ ಪಶುವೈದ್ಯೆಗೆ ಆಂಧ್ರ ಸರಕಾರ ಗೌರವ ಸಲ್ಲಿಸಿದೆ.

'ರೇಪ್‌ ಇನ್‌ ಇಂಡಿಯಾ' ಹೇಳಿಕೆಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ರಾಹುಲ್‌ ಗಾಂಧಿ

ಶುಕ್ರವಾರ ವಿಧಾನಸಭೆಯಲ್ಲಿದಿಶಾ ಮಸೂದೆ ಮಂಡಿಸಿ ಮಾತನಾಡಿದ ಗೃಹ ಸಚಿವೆ ಮೆಕತೋಟಿ ಸುಚರಿತ ಅವರು, ''ಈ ಕಾಯಿದೆಯು ಮಹಿಳೆಯರ ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ತ್ವರಿತ ತನಿಖೆ, ವಿಚಾರಣೆ ಮತ್ತು ಶಿಕ್ಷೆಯನ್ನು ಖಾತರಿಪಡಿಸಲಿದೆ.'' ಎಂದರು.

ಅಲ್ಲದೆ, ಪೋಕ್ಸೊ ಕಾಯಿದೆ ಅಡಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆಗೆ ಅವಕಾಶ ನೀಡುವ ಮತ್ತೊಂದು ವಿಧೇಯಕಕ್ಕೂ ಆಂಧ್ರ ಸಂಪುಟ ಅನುಮೋದನೆ ನೀಡಿದೆ.

ಪೌರತ್ವ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ, ಕಾಯ್ದೆ ಜಾರಿ

ದಿಶಾ ಪ್ರಕರಣದ ಬಳಿಕ ಮಹಿಳೆಯ ಸುರಕ್ಷತೆ ಭುಗಿಲೆದ್ದ ಜನಾಕ್ರೋಶದ ಬೆನ್ನಲ್ಲೇ, ಸಿಎಂ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ಸರಕಾರ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿಈ ಸಂಬಂಧ ವಿಧೇಯಕಕ್ಕೆ ಅನುಮೋದನೆ ನೀಡಿತ್ತು. ಅದನ್ನು ಶುಕ್ರವಾರ ವಿಧಾನಸಭೆಯಲ್ಲಿಮಂಡಿಸಿ, ಅನುಮೋದಿಸಲಾಗಿದೆ. ರಾಜ್ಯಪಾಲರ ಅಂಕಿತದ ಬಳಿಕ ಅದು ಕಾನೂನಾಗಿ ರಾಜ್ಯಾದ್ಯಂತ ಜಾರಿಯಾಗಲಿದೆ.

3 ಹೊಸ ಸಕ್ಷೆನ್‌ ಸೇರ್ಪಡೆ: ಭಾರತೀಯ ದಂಡ ಸಂಹಿತೆಗೆ 354 ಇ, 354 ಎಫ್‌ ಮತ್ತು 354 ಜಿ ಎಂಬ ಮೂರು ಹೊಸ ಸಕ್ಷೆನ್‌ಗಳನ್ನು ಸೇರಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಹೊಸ ವ್ಯಾಖ್ಯಾನವನ್ನು ನೀಡಲಾಗಿದೆ. ಕಾಯಿದೆಯ 376 (ಅತ್ಯಾಚಾರ), 376 'ಡಿಎ'ಗೆ ತಿದ್ದುಪಡಿ ತಂದು, ಮರಣ ದಂಡನೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.


ಕಾಯಿದೆಯ ಮುಖ್ಯಾಂಶಗಳು
  • * ಹೊಸ ಕಾಯಿದೆ ಪ್ರಕಾರ ಅಪರಾಧ ನಡೆದ 7 ದಿನಗಳಲ್ಲಿಮತ್ತು ಆರೋಪಪಟ್ಟಿ ದಾಖಲಾಗಿ 14 ದಿನದೊಳಗೆ ತನಿಖೆ ಪೂರ್ಣಗೊಳ್ಳಬೇಕು.
  • * 21 ದಿನದೊಳಗೆ ವಿಚಾರಣೆ ಪೂರ್ಣಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
  • * ಹೊಸ ಕಾಯಿದೆ ಅಡಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗುವ ಮೇಲ್ಮನವಿಗಳನ್ನೂ 6 ತಿಂಗಳೊಳಗೆ ಇತ್ಯರ್ಥಗೊಳಿಸಬೇಕು.
  • * ಮಹಿಳೆಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿಅಶ್ಲೀಲವಾಗಿ ಕಾಮೆಂಟ್‌ ಮಾಡಿದರೂ ಅವರ ವಿರುದ್ಧವೂ ಕಠಿಣ ಕ್ರಮಕ್ಕೆ ಅವಕಾಶ; ಮೊದಲ ಬಾರಿಗೆ ಈ ಅಪರಾಧ ಎಸಗುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ಎರಡನೇ ಬಾರಿ ಮಾಡುವವರಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ.
  • * ತ್ವರಿತ ವಿಚಾರಣೆಗಾಗಿ ಪ್ರತಿ ಜಿಲ್ಲೆಯಲ್ಲೂಸರಕಾರ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗಳ ಸ್ಥಾಪನೆ.
  • *ಪ್ರಕರಣಗಳ ವಿಚಾರಣೆಗೆ ಡಿಎಸ್‌ಪಿ ಶ್ರೇಣಿಯ ಅಧಿಕಾರಿಗಳನೇತೃತ್ವದ ವಿಶೇಷ ಪೊಲೀಸ್‌ ತಂಡವನ್ನು ರಚಿಸಲು ಸರಕಾರಕ್ಕೆ ಅಧಿಕಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ