ಆ್ಯಪ್ನಗರ

5 ಡಿಸಿಎಂಗಳನ್ನು ನೇಮಕ ಮಾಡಿದ್ದಾಯ್ತು, ಈಗ ಆಂಧ್ರಕ್ಕೆ 4 ರಾಜಧಾನಿ ಮಾಡ್ತಾರಂತೆ ಜಗನ್!

ಐವರು ಡಿಸಿಎಂಗಳನ್ನು ನೇಮಿಸಿ, ಇಡೀ ದೇಶವೇ ಹುಬ್ಬೇರಿಸುವಂತೆ ಮಾಡಿದ ಆಂಧ್ರ ಪ್ರದೇಶದ ಸಿಎಂ, ರಾಜಶೇಖರ ರೆಡ್ಡಿ ಅವರ ಪುತ್ರ ಜಗನ್ಮೋಹನ ರೆಡ್ಡಿ, ಇದೀಗ ಮತ್ತೊಂದು ಅಚ್ಚರಿಯ ನಿಲುವಿನಿಂದಾಗಿ ಸುದ್ದಿಯಲ್ಲಿದ್ದಾರೆ. ಆಂಧ್ರಪ್ರದೇಶಕ್ಕೆ ಒಂದಲ್ಲ, ಎರಡಲ್ಲ 4 ರಾಜಧಾನಿಗಳನ್ನು ನಿರ್ಮಿಸಲು ಜಗನ್ ಮುಂದಾಗಿದ್ದಾರೆ ಅನ್ನೋ ಸುದ್ದಿ ಬಹಿರಂಗವಾಗಿದೆ. ಅದೂ ಕೂಡಾ ಬಿಜೆಪಿ ನಾಯಕರೊಬ್ಬರು ಈ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.

TIMESOFINDIA.COM 26 Aug 2019, 5:27 pm
ತಿರುಪತಿ: ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯನ್ನಾಗಿ ಮಾಡಬೇಕು ಅನ್ನೋದು ಟಿಡಿಪಿ ವರಿಷ್ಠ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕನಸಾಗಿತ್ತು. ಆದ್ರೆ, ಇದೀಗ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ರಾಜಧಾನಿಯನ್ನು ಅಮರಾವತಿಯಿಂದ ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ ಅನ್ನೋ ವದಂತಿ ಕೇಳಿ ಬರ್ತಿತ್ತು. ಇದೀಗ ಆ ವದಂತಿಯನ್ನೂ ಮೀರಿಸುವಂತಾ ಸುನಾಮಿಯೊಂದು ಎದುರಾಗಿದೆ. ಆಂಧ್ರಕ್ಕೆ 4 ರಾಜಧಾನಿಗಳನ್ನು ನಿರ್ಮಿಸಲು ಜಗನ್ ನಿರ್ಧರಿಸಿದ್ದಾರೆ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಟಿಜಿ ವೆಂಕಟೇಶ್ ಹೇಳಿದ್ದಾರೆ.
Vijaya Karnataka Web jagan


ಕರ್ನೂಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್, ಅಮರಾವತಿಯಿಂದ ರಾಜಧಾನಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಜಗನ್ ನಿರ್ಧರಿಸಿದ್ದಾರೆ. ಇದಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರದ ನೆರವು ಪಡೆಯಲಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ, ಅಧಿಕಾರ ವಿಕೇಂದ್ರೀಕರಣ ಹಾಗೂ ಎಲ್ಲ ಪ್ರಾಂತ್ಯಗಳಿಗೂ ನ್ಯಾಯ ದೊರಕಿಸುವ ಉದ್ದೇಶದಿಂದಾಗಿ ನಾಲ್ಕು ರಾಜಧಾನಿಗಳನ್ನು ನಿರ್ಮಿಸಲು ಉದ್ದೇಶಿಸಿಲಾಗಿದ್ದು, ವಿಜಯನಗರಂ, ಕಾಕಿನಾಡ, ಗುಂಟೂರು ಹಾಗೂ ಕಡಪ ಜಿಲ್ಲೆಗಳು ರಾಜ್ಯ ರಾಜಧಾನಿಯಾಗಿ ಬದಲಾಗಲಿವೆ ಎಂದು ವಿವರಿಸಿದ್ದಾರೆ.

ಅಮರಾವತಿಯನ್ನು ರಾಜಧಾನಿ ಮಾಡಬೇಕೆಂಬ ಟಿಡಿಪಿ ನಿರ್ಧಾರವನ್ನು ಈ ಹಿಂದೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಬಲವಾಗಿ ವಿರೋಧಿಸಿತ್ತು. ಇದೇ ಕಾರಣಕ್ಕಾಗಿ ರಾಜ್ಯದ ಜನ ಹಾಗೂ ರೈತರು ಟಿಡಿಪಿ ವಿರುದ್ಧ ನಿಂತರು ಎಂದು ಬಿಜೆಪಿ ಸಂಸದ ಟಿಜಿ ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ