ಆ್ಯಪ್ನಗರ

ಬೇಟೆಗಾರನಾಗಿದ್ದವನು, ಸುಂದರಬನದಲ್ಲಿ 70 ಹುಲಿಗಳನ್ನು ರಕ್ಷಿಸಿದ!

ಬೇಟೆಯಾಡುವ ವೇಳೆ ಮರಿಗಳನ್ನು ಹೊಂದಿದ್ದ ತಾಯಿ ಮೊಲವನ್ನು ಬೇಟೆಯಾಡಿದ ನಂತರ ಪಾಪಪ್ರಜ್ಞೆ ಕಾಡಿದ್ದು, ವನ್ಯಜೀವಿಗಳ ಸಂರಕ್ಷಣೆ ಪಣತೊಟ್ಟ ಅನಿಲ್‌ ಮಿಸ್ತ್ರಿ ಸುಂದರಬನದಲ್ಲಿ ಸುಮಾರು 70 ಹುಲಿಗಳನ್ನು ರಕ್ಷಿಸಿದ್ದಾರೆ.

Indiatimes 13 Feb 2019, 11:54 am
ಸುಂದರಬನ: ಅನಿಲ್‌ ಮಿಸ್ತ್ರಿ ಎಂಬುವವರ ಪರಿವರ್ತನೆ ಕತೆಯಿಂದು. ಬೇಟೆಗಾರನಾಗಿ ಪ್ರಾಣಿಗಳನ್ನು ನಿರ್ದಯವಾಗಿ ಕೊಲ್ಲುತ್ತಿದ್ದ ಅನಿಲ್‌ ಮಿಸ್ತ್ರಿ ವನ್ಯಜೀವಿಗಳ ಸಂರಕ್ಷಕನಾಗಿ, ಸುಮಾರು 60 ಹುಲಿಗಳನ್ನು ರಕ್ಷಣೆ ಮಾಡುವ ಮೂಲಕ ರಿಯಲ್‌ ಹೀರೋ ಆಗಿದ್ದಾರೆ.
Vijaya Karnataka Web Anil Mistri


52 ವರ್ಷದ ಮಿಸ್ತ್ರಿ, ಒಂದು ಬಾರಿ ಸ್ನೇಹಿತನ ಜತೆ ಬೇಟೆಯಾಡುತ್ತಿದ್ದ ಸಂದರ್ಭ ಹೆಣ್ಣು ಮೊಲವನ್ನು ಬೇಟೆಯಾಡಿದ್ದಾರೆ. ಮರಿಗಳಿಂದ ಸುತ್ತುವರಿದಿದ್ದ ತಾಯಿ ಮೊಲ ಗಾಯಗೊಂಡು ನೋವಿನಿಂದ ನರಳಿದೆ ಸಾವನ್ನಪ್ಪಿದೆ. ಇದನ್ನು ಕಣ್ಣಾರೆ ಕಂಡು ಮರುಗಿದ ಮಿಸ್ತ್ರಿ ಪ್ರಾಣಿಗಳನ್ನು ಹತ್ಯೆ ಮಾಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ತಾಯಿ ಮೊಲವನ್ನು ಹತ್ಯೆ ಮಾಡಿ ಮರಿಗಳನ್ನು ಅನಾಥವನ್ನಾಗಿಸಿದ ಪಾಪಪ್ರಜ್ಞೆ ಇಬ್ಬರಿಗೂ ಕಾಡಿದೆ. ನಂತರ ನೇರವಾಗಿ ಸುಂದರಬನ ಹುಲಿ ಸಂರಕ್ಷಣಾ ಇಲಾಖೆಗೆ ಭೇಟಿ ನೀಡಿದ ಅನಿಲ್‌ ತಮ್ಮ ತಪ್ಪನ್ನು ಮನ್ನಿಸುವಂತೆ ಕೋರಿದ್ದಾರೆ.

ಬಾಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಸಂಸ್ಥೆಯನ್ನು ಕಟ್ಟಿದ ಅನಿಲ್‌ ವನ್ಯಜೀವಿಗಳ ರಕ್ಷಣೆಗೆ ಪಣ ತೊಟ್ಟಿದ್ದಾರೆ. ಭಾರತೀಯ ವನ್ಯಜೀವಿ ಸಂರಕ್ಷಣಾ ಇಲಾಖೆ ಅನಿಲ್‌ ಅವರ ಕಾರ್ಯವನ್ನು ಗುರುತಿಸಿತು. ನಂತರ ಡಬ್ಳ್ಯುಪಿಎಸ್‌ಐ ಜತೆ ಕೆಲಸ ಮಾಡುವ ಅವಕಾಶವನ್ನು ನೀಡಿತು.

ಕಳೆದ 15-20 ವರ್ಷಗಳಿಂದ ಅನಿಲ್‌ ವನ್ಯಜೀವಿ ಸಂರಕ್ಷಣೆಗಾಗಿ ದುಡಿಯುತ್ತಿದ್ದು, ತಮ್ಮ ಸುತ್ತಲಿನ ಪ್ರದೇಶದಲ್ಲಿ ಯಾವುದೇ ಬೇಟೆ ಪ್ರಕರಣಗಳು ಕೇಳಿ ಬರದಂತೆ ನೋಡಿಕೊಂಡಿದ್ದಾರೆ.

ಅನಿಲ್‌ ಮಿಸ್ತ್ರಿ, ಮಾನವ ಮತ್ತು ಹುಲಿ ಸಂಘರ್ಷದ ನಡುವೆ ಪರಿಹಾರದ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಕಾಡಿನಿಂದ ಊರಿಗೆ ಬಂದಿದ್ದ ಸುಮಾರು 70 ಹುಲಿಗಳನ್ನು ಹಿಡಿದು ಕಾಡಿಗೆ ಮರಳಿ ಬಿಟ್ಟಿದ್ದಾರೆ. ಮಾನವ ಅಥಲಾ ಹುಲಿ ಹತ್ಯೆಯಾಗದಂತೆ ನಿಗಾ ವಹಿಸಿದ್ದಾರೆ. ಹುಲಿಯೊಂದನ್ನು ಹತ್ಯೆ ಮಾಡಬೇಕು ಎಂಬ ಆದೇಶವಿದ್ದರೂ ಅದರ ಕಾಲಿಗೆ ಗುಂಡು ಹೊಡೆದು ರಕ್ಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ