ಆ್ಯಪ್ನಗರ

ಉ.ಪ್ರದಲ್ಲಿ ಮತ್ತೊಂದು ದುರಂತ: ಫರೂಕಾಬಾದ್‌ನಲ್ಲಿ 50 ಮಕ್ಕಳ ಸಾವು!

ಗೋರಖಪುರ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 62 ಮಕ್ಕಳು ಸಾವೀಗಿಡಾದ ಘಟನೆ ಮಾಸುವ ಮುನ್ನವೇ ಫಾರೂಖಾಬಾದ್ ಸರಕಾರಿ ಆಸ್ಪತ್ರೆಯಲ್ಲಿ ಇನ್ನೊಂದು ಸಂಭವಿಸಿದೆ.

TNN 4 Sep 2017, 2:47 pm
ಆಗ್ರಾ: ಗೋರಖಪುರ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 62 ಮಕ್ಕಳು ಸಾವೀಗಿಡಾದ ಘಟನೆ ಮಾಸುವ ಮುನ್ನವೇ ಫರೂಕಾಬಾದ್ ಸರಕಾರಿ ಆಸ್ಪತ್ರೆಯಲ್ಲಿ ಇನ್ನೊಂದು ದುರಂತ ಸಂಭವಿಸಿದೆ.
Vijaya Karnataka Web another gorakhpur like tragedy in up lack of oxygen claims 49 lives in farrukhabad
ಉ.ಪ್ರದಲ್ಲಿ ಮತ್ತೊಂದು ದುರಂತ: ಫರೂಕಾಬಾದ್‌ನಲ್ಲಿ 50 ಮಕ್ಕಳ ಸಾವು!


ಫರೂಕಾಬಾದ್‍‌ನ ರಾಮ್ ಮನೋಹರ್ ಲೋಹಿಯಾ ಚಿಕಿತ್ಸಾಲಯದ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಆಕ್ಸಿಜನ್ ಕೊರತೆಯಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ 50 ನವಜಾತ ಶಿಶುಗಳು ಮೃತಪಟ್ಟಿವೆ. ಈ ದುರಂತದ ಬಗ್ಗೆ ತನಿಖೆ ನಡೆಸುವಂತೆ ಫರೂಕಾಬಾದ್‍‌ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ನೀಡಿದ್ದಾರೆ.

'ಸಿಟಿ ಮ್ಯಾಜಿಸ್ಟ್ರೇಟ್ ಸಲ್ಲಿಸಿದ ಲಿಖಿತ ದೂರನ್ನು ಆಧರಿಸಿ ನಾಗರ್ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಉಮಾಕಾಂತ್ ಪಾಂಡೆ ಹಾಗೂ ಮುಖ್ಯ ವೈದ್ಯಕೀಯ ಅಧೀಕ್ಷಕ ಬಿಪಿ ಪುಷ್ಕರ್ ಸೇರಿದಂತೆ ಆರ್‌ಎಂಎಲ್ ಆಸ್ಪತ್ರೆಯ ಕೆಲ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ' ಎಂದು ಪೊಲೀಸ್ ಅಧೀಕ್ಷಕ ದಯಾನಂದ್ ಮಿಶ್ರಾ ಹೇಳಿದ್ದಾರೆ.

ಕಳೆದ ತಿಂಗಳು ಆಕ್ಸಿಜನ್ ಕೊರತೆಯಿಂದ 62ಕ್ಕೂ ಹೆಚ್ಚು ಮಕ್ಕಳು ಗೋರಖಪುರದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಸುನೀಗಿದ್ದರು.

AGRA: After Gorakhpur hospital tragedy, in yet another similar case, 49 newborns reportedly lost their lives at the Special Newborn Care Unit (SNCU) ward of Dr Ram Manohar Lohia (RML) government hospital in Farrukhabad in the last one month.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ