ಆ್ಯಪ್ನಗರ

ಪಾಕಿಸ್ತಾನ ವಿರುದ್ಧ ಭಾರತೀಯ ಯುವಕನ ಸರ್ಜಿಕಲ್ ಸ್ಟ್ರೈಕ್

ಎಥಿಕಲ್ ಹ್ಯಾಕರ್ ಆಗಿರುವ ಅಂಶುಲ್ ಈ ಕುರಿತು ಟ್ವೀಟ್ ಮತ್ತು ಫೇಸ್‌ಬುಕ್ ಪೋಸ್ಟ್‌ ಮಾಡಿದ್ದು, ಪಾಕಿಸ್ತಾನ ವಿರುದ್ಧ ಯುದ್ಧಭೂಮಿಯಲ್ಲಿ ಸೈನಿಕನಂತೆ ನಾನು ಹೋರಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ಸೈನಿಕರ ಮಾರಣಹೋಮಕ್ಕೆ ತಕ್ಕ ಪ್ರತೀಕಾರ ಆಗಲೇಬೇಕಿದೆ. ಅದಕ್ಕಾಗಿ ಇದು ನನ್ನ ಸಣ್ಣ ಪ್ರಯತ್ನ. ಈಗಷ್ಟೇ ಆರಂಭ, ಪಾಪಿ ಪಾಕಿಸ್ತಾನಕ್ಕೆ ಇನ್ನೂ ಇದೆ ಎಂದಿದ್ದಾನೆ.

Vijaya Karnataka Web 16 Feb 2019, 10:39 pm
ಹೊಸದಿಲ್ಲಿ: ಉಗ್ರದಾಳಿಗೆ ಪ್ರತೀಕಾರದ ಉರಿ ದೇಶದೆಲ್ಲೆಡೆ ಕೇಳಿಬರುತ್ತಿದ್ದರೆ ಅಂಶುಲ್ ಸಕ್ಸೇನಾ ಎಂಬ ಯುವಕನೋರ್ವ ಸದ್ದಿಲ್ಲದೇ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದಾನೆ.
Vijaya Karnataka Web hacker

ಪಾಕ್ ವಿರುದ್ಧ ಸೈಬರ್ ಯುದ್ಧ ನಡೆಸುತ್ತಿರುವ ಅಂಶುಲ್, ಗುರುವಾರದಿಂದಲೇ ಕಾರ್ಯಪ್ರವೃತ್ತನಾಗಿದ್ದು, ಪಾಕಿಸ್ತಾನ ಸರಕಾರಕ್ಕೆ ಸಂಬಂಧಪಟ್ಟ ಕೆಲವು ಪ್ರಮುಖ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾನೆ.

ಎಥಿಕಲ್ ಹ್ಯಾಕರ್ ಆಗಿರುವ ಅಂಶುಲ್ ಈ ಕುರಿತು ಟ್ವೀಟ್ ಮತ್ತು ಫೇಸ್‌ಬುಕ್ ಪೋಸ್ಟ್‌ ಮಾಡಿದ್ದು, ಪಾಕಿಸ್ತಾನ ವಿರುದ್ಧ ಯುದ್ಧಭೂಮಿಯಲ್ಲಿ ಸೈನಿಕನಂತೆ ನಾನು ಹೋರಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ಸೈನಿಕರ ಮಾರಣಹೋಮಕ್ಕೆ ತಕ್ಕ ಪ್ರತೀಕಾರ ಆಗಲೇಬೇಕಿದೆ. ಅದಕ್ಕಾಗಿ ಇದು ನನ್ನ ಸಣ್ಣ ಪ್ರಯತ್ನ. ಈಗಷ್ಟೇ ಆರಂಭ, ಪಾಪಿ ಪಾಕಿಸ್ತಾನಕ್ಕೆ ಇನ್ನೂ ಇದೆ ಎಂದಿದ್ದಾನೆ.

ಪಾಕಿಸ್ತಾನದ ವೆಬ್‌ಸೈಟ್ ಹ್ಯಾಕ್ ಜತೆಗೆ ಸರಕಾರಕ್ಕೆ ಸಂಬಂಧಪಟ್ಟ ಕೆಲವೊಂದು ಪ್ರಮುಖ ದಾಖಲೆಗಳು ಕೂಡ ಅಂಶುಲ್ ಕೈಸೇರಿವೆ. ಹ್ಯಾಕ್ ಆಗಿರುವ ವೆಬ್‌ಸೈಟ್ ಸರಿಪಡಿಸಲು ಪಾಕಿಸ್ತಾನ ಹೆಣಗಾಡುತ್ತಿದೆ.

ಅಷ್ಟೇ ಅಲ್ಲದೆ ನಮ್ಮ ಯೋಧರ ಸಾವನ್ನು ಸಂಭ್ರಮಿಸಿ ಫೇಸ್‌ಬುಕ್ ಪೋಸ್ಟ್‌ ಮತ್ತು ಟ್ವೀಟ್ ಮಾಡಿದವರ ಖಾತೆಯನ್ನು ಕೂಡ ಅಂಶುಲ್ ಹ್ಯಾಕ್ ಮಾಡಿದ್ದು, ಅವರ ಖಾತೆ ವಿವರವನ್ನು ಪೊಲೀಸ್ ಮತ್ತು ಸಂಬಂಧಿತ ಇಲಾಖೆಗೆ ನೀಡಿದ್ದಾನೆ. ಇದರಿಂದ ಖಾತೆದಾರರ ಮಾಹಿತಿ ಸುಲಭದಲ್ಲಿ ದೊರೆತಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ