ಆ್ಯಪ್ನಗರ

ಎಲ್‌ಎಸಿಯಲ್ಲಿ ಫೈರಿಂಗ್‌: ರಾಜನಾಥ್‌ ಸಿಂಗ್‌ಗೆ ಸೇನಾ ಮುಖ್ಯಸ್ಥರಿಂದ ಮಾಹಿತಿ, ಸಂಜೆ ನಡೆಯಲಿದೆ ಮಹತ್ವದ ಸಭೆ!

ಎಲ್‌ಎಸಿಯಲ್ಲಿ ನಡೆದ ಫೈರಿಂಗ್‌ಗೆ ಸಂಬಂಧಪಟ್ಟಂತೆ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬೆನ್ನಲ್ಲೆ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅಲ್ಲಿನ ಕಮಾಂಡರ್‌ಗಳ ಜೊತೆಗೆ ಮಾತುಕತೆ ನಡೆಸಿದ್ದು, ಸಮಗ್ರ ಮಾಹಿತಿಯನ್ನ ಕಲೆ ಹಾಕಿದ್ದರು. ಇದೀಗ ಈ ವಿಚಾರವನ್ನ ರಕ್ಷಣಾ ಸಚಿವರ ಗಮನಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.

Agencies 8 Sep 2020, 2:46 pm
ಹೊಸದಿಲ್ಲಿ: ಲಡಾಕ್‌ನಲ್ಲಿರುವ ಭಾರತ - ಚೀನಾ ಗಡಿಯಲ್ಲಿ ನಡೆದಿರುವ ಗುಂಡಿನ ದಾಳಿಗೆ ಸಂಬಂಧಪಟ್ಟಂತೆ ಭಾರೀ ಚರ್ಚೆಗಳು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಚೀನಾ ಪದೇ ಪದೇ ಗಡಿಯಲ್ಲಿ ಇಂತಹ ಕುಕೃತ್ಯ ನಡೆಸುತ್ತಿರುವ ಬಗ್ಗೆ ಇದೀಗ ಪ್ರಮುಖ ದೇಶಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
Vijaya Karnataka Web Rajnath Singh


ಇದೀಗ ಎಲ್‌ಎಸಿಯಲ್ಲಿ ನಡೆದ ಫೈರಿಂಗ್‌ಗೆ ಸಂಬಂಧಪಟ್ಟಂತೆ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬೆನ್ನಲ್ಲೆ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅಲ್ಲಿನ ಕಮಾಂಡರ್‌ಗಳ ಜೊತೆಗೆ ಮಾತುಕತೆ ನಡೆಸಿದ್ದು, ಸಮಗ್ರ ಮಾಹಿತಿಯನ್ನ ಕಲೆ ಹಾಕಿದ್ದರು. ಇದೀಗ ಈ ವಿಚಾರವನ್ನ ರಕ್ಷಣಾ ಸಚಿವರ ಗಮನಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.

ಸೇನಾ ಮುಖ್ಯಸ್ಥರು ಹಾಗೂ ರಕ್ಷಣಾ ಸಚಿವರು ಸುದೀರ್ಘ ಚರ್ಚೆ ನಡೆಸಿದ್ದು, ಯಾಕಾಗಿ ಈ ಘಟನೆ ನಡೆಯಿತು. ಸದ್ಯದ ಪರಿಸ್ಥಿತಿ ಬಗ್ಗೆಯು ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. 1975ರ ಬಳಿಕ ಇದೆ ಮೊದಲ ಬಾರಿಗೆ ಎಲ್‌ಎಸಿ ಗಡಿಯಲ್ಲಿ ಗುಂಡಿನ ಸದ್ದು ಕೇಳಿದೆ. ಇದರ ಅಪಾದನೆಯನ್ನ ಚೀನಾ ಭಾರತದ ಮೇಲೆ ಹಾಕಲು ಪ್ಲಾನ್‌ ರೂಪಿಸಿತ್ತಾದರು, ಭಾರತೀಯ ಸೇನೆ ಚೀನಾವೆ ಗುಂಡಿನ ದಾಳಿ ನಡೆಸಿರುವುದಾಗಿ ಸ್ಪಷ್ಟೀಕರ ನೀಡಿದೆ.

ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಮಂಗಳವಾರ ಸಂಜೆ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ಮೂರು ಸೇನೆಯ ಮುಖ್ಯಸ್ಥರುಗಳು, ಜನರಲ್‌ ಬಿಪಿನ್‌ ರಾವತ್‌ ಭಾಗಿಯಾಗಲಿದ್ದಾರೆ.

ಸದ್ಯ ಎಲ್‌ಎಸಿ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಈ ಎಲ್ಲಾ ಬೆಳವಣಿಗೆ ಮಧ್ಯೆಯೂ ಕಾಲಾ ಟಾಪ್‌, ಹೆಲ್ಮೆಟ್‌ ಟಾಪ್‌ ಹಾಗೂ ಪ್ಯಾಂಗೊಂಗ್‌ ಸರೋವರದ ಆಯಕಟ್ಟಿನ ಪ್ರದೇಶಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ