ಆ್ಯಪ್ನಗರ

ಸಿಒಎಸ್‌ಸಿ ಮುಖ್ಯಸ್ಥರಾಗಿ ಇಂದು ರಾವತ್‌ ಅಧಿಕಾರ ಸ್ವೀಕಾರ

ಭಾರತೀಯ ಸಶಸ್ತ್ರ ದಳದ ಮೂರು ಪಡೆಗಳ (ಭೂ, ವಾಯು, ನೌಕೆ) ಮುಖ್ಯಸ್ಥರು ಚೀಫ್ಸ್‌ ಆಫ್‌ ಸ್ಟಾಫ್‌ ಕಮಿಟಿ (ಸಿಒಎಸ್‌ಸಿ)ಯಲ್ಲಿರುತ್ತಾರೆ. ಇವರ ಪೈಕಿ ಸೇವಾ ಹಿರಿತನ ಹೊಂದಿರುವವರು ಸಮಿತಿ ಅಧ್ಯಕ್ಷರಾಗುತ್ತಾರೆ.

PTI 27 Sep 2019, 6:49 am
ಹೊಸದಿಲ್ಲಿ: ಸೇನಾಪಡೆಗಳ 'ಚೀಫ್ಸ್ ಆಫ್‌ ಸ್ಟಾಪ್‌ ಕಮಿಟಿ' ಮುಖ್ಯಸ್ಥರಾಗಿ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಮೇ 29ರಂದು ಅಂದಿನ ನೌಕಾಪಡೆ ಮುಖ್ಯಸ್ಥ ಸುನಿಲ್‌ ಲಂಬಾ ಅವರಿಂದ ಹಾಲಿ ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ ಅವರು ಅಧಿಕಾರ ಸ್ವೀಕರಿಸಿದ್ದರು.
Vijaya Karnataka Web rawat


ಆಪರೇಷನ್ POK’ ಪ್ಲಾನ್ ರೆಡಿ!: ಭಾರತೀಯ ಸೇನೆ ಟಾರ್ಗೆಟ್ ‘ಪಾಕ್ ಆಕ್ರಮಿತ ಕಾಶ್ಮೀರ’

ಧನೋವಾ ಈ ಮಾಸಾಂತ್ಯಕ್ಕೆ ನಿವೃತ್ತಿ ಹೊಂದಲಿದ್ದಾರೆ. ಭಾರತೀಯ ಸಶಸ್ತ್ರ ದಳದ ಮೂರು ಪಡೆಗಳ (ಭೂ, ವಾಯು, ನೌಕೆ) ಮುಖ್ಯಸ್ಥರು ಚೀಫ್ಸ್‌ ಆಫ್‌ ಸ್ಟಾಫ್‌ ಕಮಿಟಿ (ಸಿಒಎಸ್‌ಸಿ)ಯಲ್ಲಿರುತ್ತಾರೆ. ಇವರ ಪೈಕಿ ಸೇವಾ ಹಿರಿತನ ಹೊಂದಿರುವವರು ಸಮಿತಿ ಅಧ್ಯಕ್ಷರಾಗುತ್ತಾರೆ.

ಭಾರತದೊಳಗೆ ಉಗ್ರರ ನುಗ್ಗಿಸಲು ಕಳ್ಳದಾರಿ!: ಪಾಕಿಸ್ತಾನ ಸೇನೆಯ ಹೊಸ ಕುತಂತ್ರ ಬಯಲು

ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಸವಾಲುಗಳನ್ನು ಮಟ್ಟಹಾಕಲು ಮೂರು ಪಡೆಗಳ ನಡುವೆ ಸಾಮರಸ್ಯ ಸಾಧಿಸಿ ಒಗ್ಗಟ್ಟಿನ ರಣತಂತ್ರ ರೂಪಿಸುವುದು ಸಮಿತಿ ಮುಖ್ಯಸ್ಥರ ಹೊಣೆ. ಜನರಲ್‌ ರಾವತ್‌ ಡಿ.31ಕ್ಕೆ ನಿವೃತ್ತರಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ