ಆ್ಯಪ್ನಗರ

ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನ: ಪೈಲಟ್‌ಗಳಿಬ್ಬರ ಸಾವು

ಇತ್ತೀಚೆಗೆ ಮಿಗ್‌ ಯುದ್ಧ ವಿಮಾನಗಳ ಪತನ ಸುದ್ದಿ ಕೇಳಿಬರುತ್ತಲೇ ಇವೆ. ಪ್ರಸಕ್ತ ಸಾಲಿನಲ್ಲಿ 10ಕ್ಕೂ ಹೆಚ್ಚು ವಿಮಾನ ಪತನಗೊಂಡಿವೆ. ಈಗ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನಗೊಂಡಿದೆ.

Vijaya Karnataka Web 27 Sep 2019, 5:32 pm
ಹೊಸದಿಲ್ಲಿ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಭೂತಾನ್‌ನಲ್ಲಿ ಅಪಘಾತಕ್ಕೀಡಾಗಿದ್ದು, ದುರಂತದಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
Vijaya Karnataka Web ಹೆಲಿಕಾಪ್ಟರ್‌ ಅವಶೇಷ
ಹೆಲಿಕಾಪ್ಟರ್‌ ಅವಶೇಷ


ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತೀಯ ಸೇನಾ ತರಬೇತಿ ತಂಡದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಇವರಿಬ್ಬರೂ ಲೆಫ್ಟಿನೆಂಟ್ ಕರ್ನಲ್‌ ಶ್ರೇಣಿಯ ಅಧಿಕಾರಿಗಳು ಎಂದು ತಿಳಿಸಿದ್ದಾರೆ.


ಪೂರ್ವ ಭೂತಾನ್‌ನಲ್ಲಿ ಹೆಲಿಕಾಪ್ಟರ್‌ ಪತನಗೊಂಡಿದ್ದು, ಅವಶೇಷಗಳು ಪತ್ತೆಯಾಗಿವೆ.

ಇತ್ತೀಚೆಗಷ್ಟೇ ಗ್ವಾಲಿಯರ್‌ನಲ್ಲಿ ಭಾರತೀಯ ವಾಯ ಪಡೆಯ ಮಿಗ್‌ 21 ತರಬೇತಿ ಯುದ್ಧ ವಿಮಾನ ಪತಗನೊಂಡಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ.

ಪ್ರಸಕ್ತ ವರ್ಷದಲ್ಲಿ ಇದುವರೆಗೆ 1೦ ಕ್ಕೂ ಹೆಚ್ಚು ಇಂಥ ದುರಂತ ಪ್ರಕರಣಗಳು ವರದಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ