ಆ್ಯಪ್ನಗರ

ಸೇನಾ ಯೋಧನ ಕಪಾಳ ಮೋಕ್ಷಕ್ಕೆ ತತ್ತರಿಸಿದ್ದ ಮೌಲಾನಾ ಮಸೂದ್ ಅಜರ್‌

1999ರಲ್ಲಿ ಭಾರತ ವಿಮಾನ ಹೈಜಾಕ್‌ ಮಾಡಿದ ನಂತರ ಉಗ್ರರ ಬೇಡಿಕೆಯಂತೆ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಲಾಯಿತು. ಆ ನಂತರವೇ ಅಜರ್‌ ಜೈಷೆ ಮೊಹಮದ್ ಉಗ್ರ ಸಂಘಟನೆ ಸ್ಥಾಪಿಸಿ ಯುವಕರನ್ನು ಜಿಹಾದ್‌ಗೆ ಸೇರಿಸಿಕೊಳ್ಳುತ್ತಿದ್ದ.

Vijaya Karnataka Web 18 Feb 2019, 9:57 pm
ಹೊಸದಿಲ್ಲಿ: ದೇಶದಲ್ಲಿ ಹಲವಾರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ, ಇತ್ತೀಚಿನ ಪುಲ್ವಾಮಾದಲ್ಲಿ 44 ಯೋಧರ ಬಲಿ ತೆಗೆದುಕೊಂಡ ಜೈಷೆ ಮೊಹಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಅಸಲಿಗೆ ಭಯಸ್ತ ಎಂಬುದು ಬಹಿರಂಗಗೊಂಡಿದೆ.
Vijaya Karnataka Web ಮಸೂದ್‌ ಅಜರ್‌
ಮಸೂದ್‌ ಅಜರ್‌


1994ರಲ್ಲಿ ಈತನನ್ನು ವಿಚಾರಣೆ ನಡೆಸಿದ್ದ ಅಧಿಕಾರಿಯೊಬ್ಬರು ಮಾಹಿತಿ ನಿಡಿದ್ದಾರೆ.

ನಕಲಿ ಪಾಸ್‌ಪೋರ್ಟ್‌ ಬಳಸಿ ಬಾಂಗ್ಲಾದೇಶ ಮೂಲಕ ಭಾರತಕ್ಕೆ ಆಗಮಿಸಲು ಪ್ರಯತ್ನಿಸಿದ್ದ ಮಸೂದ್‌ ಅಜರ್‌ನನ್ನು ಅನಂತನಾಗ್‌ನಲ್ಲಿ ಬಂಧಿಸಲಾಗಿತ್ತು.

ಈ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತಿದ್ದ ಯೋಧನೊಬ್ಬ ಅಜರ್‌ ಮಸೂದ್‌ ಕೆನ್ನೆಗೆ ಸರಿಯಾಗಿ ಬಾರಿಸಿದ್ದ. ಇದರಿಂದ ಪತರಗುಟ್ಟಿ, ನಡುಗಿದ ಮಸೂದ್‌ ಅಜರ್‌ ಎಲ್ಲ ಮಾಹಿತಿಯನ್ನು ಬಾಯ್ಬಿಟ್ಟ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಭಯೋತ್ಪಾದಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈತ ನೀಡಿದ ಎಂದು ಅಧಿಕಾರಿಯೊಬ್ಬರು ನೆನಪಿಸಿಕೊಂಡರು.

ಅಜರ್‌ ಮಸೂದ್‌ನನ್ನು ಅತ್ಯಂತ ಸುಲಭವಾಗಿ ವಿಚಾರಣೆ ನಡೆಸಬಹುದು. ಆತ ಒಂದು ರೀತಿ ಪುಕ್ಕಲ ಎನ್ನುತ್ತಾ ಸಿಕ್ಕಿಂನ ಮಾಜಿ ಪೊಲೀಸ್‌ ಪ್ರಧಾನ ನಿರ್ದೇಶಕ ಅವಿನಾಶ್‌ ಮೊಹನಾನಿ.

1999ರಲ್ಲಿ ಭಾರತ ವಿಮಾನ ಹೈಜಾಕ್‌ ಮಾಡಿದ ನಂತರ ಉಗ್ರರ ಬೇಡಿಕೆಯಂತೆ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಲಾಯಿತು. ಆ ನಂತರವೇ ಅಜರ್‌ ಜೈಷೆ ಮೊಹಮದ್ ಉಗ್ರ ಸಂಘಟನೆ ಸ್ಥಾಪಿಸಿ ಯುವಕರನ್ನು ಜಿಹಾದ್‌ಗೆ ಸೇರಿಸಿಕೊಳ್ಳುತ್ತಿದ್ದ.

ಸಂಸತ್‌ ಮೇಲೆ ದಾಳಿ, ಅಕ್ಷರಧಾಮ ಮೇಲೆ ದಾಳಿ, ಪಠಾಣ್‌ಕೋಟ್‌, ಉರಿ ಹಾಗೂ ಇತ್ತೀಚಿನ ಪುಲ್ವಾಮಾ ಉಗ್ರ ದಾಳಿಯನ್ನು ಈತನ ಸೂಚನೆಯಂತೆ ಎಲ್ಲವೂ ನಡೆದಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ