ಆ್ಯಪ್ನಗರ

ಬ್ರಹ್ಮೋಸ್ ಭೂ-ದಾಳಿ ಕ್ಷಿಪಣಿ ಯಶಸ್ವಿ ಪರೀಕ್ಷೆ

ಭೂ ಪ್ರದೇಶದ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಮುಂದುವರಿದ ಆವೃತ್ತಿಯನ್ನು ಭಾರತೀಯ ಸೇನೆ ಮಂಗಳವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ.

ಟೈಮ್ಸ್ ಆಫ್ ಇಂಡಿಯಾ 2 May 2017, 9:42 pm
ಹೊಸದಿಲ್ಲಿ: ಭೂ ಪ್ರದೇಶದ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಮುಂದುವರಿದ ಆವೃತ್ತಿಯನ್ನು ಭಾರತೀಯ ಸೇನೆ ಮಂಗಳವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ.
Vijaya Karnataka Web army successfully test fires brahmos land attack missile
ಬ್ರಹ್ಮೋಸ್ ಭೂ-ದಾಳಿ ಕ್ಷಿಪಣಿ ಯಶಸ್ವಿ ಪರೀಕ್ಷೆ


ಕ್ಷಿಪಣಿಯ ಸಾಮರ್ಥ್ಯವನ್ನು ಮತ್ತೊಮ್ಮೆ ಪರೀಕ್ಷಿಸುವ ಸಲುವಾಗಿ ಈ ಪರೀಕ್ಷೆ ಮಾಡಲಾಗಿದೆ. ಭೂಪ್ರದೇಶದಿಂದ ಭೂಪ್ರದೇಶಕ್ಕೆ ದಾಳಿ ಮಾಡಬಹುದಾದ ಬ್ರಹ್ಮೋಸ್ ಕ್ಷಿಪಣಿಯನ್ನು ಮೊಬೈಲ್ ಸ್ವನಿಯಂತ್ರಣ ಲಾಂಚರ್ ಮೂಲಕ (ಎಂಎಎಲ್) ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಕ್ಷಿಪಣಿಯು ನಿಗದಿತ ಗುರಿಯನ್ನು ಯಶಸ್ವಿಯಾಗಿ ತಲುಪಿದ್ದು, ಈ ಸೂಪರ್ ಸಾನಿಕ್ (ಶಬ್ದಾತೀತ ವೇಗ) ಕ್ರೂಸ್ ಕ್ಷಿಪಣಿಯು ಎಲ್ಲಾ ಮಾನದಂಡಗಳನ್ನೂ ಯಶಸ್ವಿಯಾಗಿ ಪೂರೈಸಿ ನಿಗದಿತ ಗುರಿಯನ್ನು ಮುಟ್ಟಿದೆ. ಉನ್ನತ ಮಟ್ಟದ ಮತ್ತು ಸಂಕೀರ್ಣ ಪರೀಕ್ಷೆಗಳಲ್ಲಿ ಕ್ಷಿಪಣಿಯನ್ನು ಪರೀಕ್ಷಿಸಲಾಯಿತು ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

The Indian Army on Tuesday successfully test fired an advanced version of the Brahmos land-attack cruise missile in the Andaman and Nicobar Islands, revalidating the weapon's strike capability.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ