ಆ್ಯಪ್ನಗರ

ಅನಗತ್ಯ ವಸ್ತುಗಳ ಆಮದಿಗೆ ಕಡಿವಾಣ: ರೂಪಾಯಿ ಬಲವೃದ್ಧಿಗೆ ಕೇಂದ್ರದ ಪಂಚ ಕ್ರಮ

ರೂಪಾಯಿ ಮೌಲ್ಯ ಕುಸಿತ ಮತ್ತು ಇಂಧನ ಬೆಲೆ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಇದರ ನಿಯಂತ್ರಣಕ್ಕೆ ಪಂಚ ಕ್ರಮಗಳನ್ನು ಪ್ರಕಟಿಸಿದೆ.

Vijaya Karnataka 15 Sep 2018, 7:59 am
ಹೊಸದಿಲ್ಲಿ: ರೂಪಾಯಿ ಮೌಲ್ಯ ಕುಸಿತ ಮತ್ತು ಇಂಧನ ಬೆಲೆ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಇದರ ನಿಯಂತ್ರಣಕ್ಕೆ ಪಂಚ ಕ್ರಮಗಳನ್ನು ಪ್ರಕಟಿಸಿದೆ.
Vijaya Karnataka Web arun j


ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆರಂಭಿಸಿದ ಎರಡು ದಿನಗಳ ಆರ್ಥಿಕ ಪರಾಮರ್ಶನ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ. ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

ಮೊದಲ ದಿನದ ಸಭೆಯಲ್ಲಿ ಚಾಲ್ತಿ ಖಾತೆ ಕೊರತೆಯ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಅದು ನಿಗದಿತ ಗುರಿ ಮೀರದಂತೆ ನೋಡಿಕೊಳ್ಳಲು ಹಲವು ಕ್ರಮಗಳನ್ನು ಪ್ರಕಟಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ. ಅದರೆ, ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಅಬಕಾರಿ ತೆರಿಗೆ ಕಡಿತ ಮಾಡಬೇಕೆಂಬ ಬೇಡಿಕೆಗೆ ಶುಕ್ರವಾರ ಬೆಂಬಲ ದೊರೆಯಲಿಲ್ಲ. ಶನಿವಾರ ಇನ್ನಷ್ಟು ಹೊಸ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಪ್ರಮುಖ ಕ್ರಮಗಳು

* ಅನಗತ್ಯ ವಸ್ತುಗಳ ಆಮದಿಗೆ ಕಡಿವಾಣ.

* ರಫ್ತಿನ ಪ್ರಮಾಣ ಹೆಚ್ಚಿಸಲು ಕ್ರಮ

* ಉತ್ಪಾದಕ ಕಂಪನಿಗಳಿಗೆ ವಿದೇಶಿ ವಾಣಿಜ್ಯ ಸಾಲ ಪಡೆಯುವ ನಿಯಮ ಸರಳ

* ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಸಂಬಂಧಿಸಿದ ಸಾಲ ನಿಯಮ ಪರಿಷ್ಕರಣೆ

* ವಿತ್ತೀಯ ಕೊರತೆ ಗಡಿ ಮೀರದಂತೆ ಎಲ್ಲ ಕ್ರಮ

ಗಡಿ ಮೀರುತ್ತಿದೆ ಚಾಲ್ತಿ ಖಾತೆ ಕೊರತೆ

ದೇಶದ ಚಾಲ್ತಿ ಖಾತೆ ಕೊರತೆಗೆ ಇಡೀ ವರ್ಷದ ಗುರಿ 6.24 ಲಕ್ಷ ಕೋಟಿ. ಆದರೆ, ಈ ವರ್ಷ ಈಗಾಗಲೇ ಅದರ 86.5 ಶೇಕಡಾ ಭಾಗವನ್ನು ಅದು ದಾಟಿದೆ. ಏಪ್ರಿಲ್‌ನಿಂದ ಜುಲೈ ಅವಧಿಯಲ್ಲೇ ಅದು 5.40 ಲಕ್ಷ ಕೋಟಿ ಆಗಿತ್ತು. ಲೆಕ್ಕಪತ್ರ ನಿಯಂತ್ರಕರು ಕೂಡಾ ಈ ಬಗ್ಗೆ ಎಚ್ಚರಿಕೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ