ಆ್ಯಪ್ನಗರ

ರಾಜ್ಯ ಸ್ಥಾನಮಾನಕ್ಕಾಗಿ ಮಾರ್ಚ್‌ 1ರಿಂದ ಕೇಜ್ರಿವಾಲ್‌ ಉಪವಾಸ ಸತ್ಯಾಗ್ರಹ

ಸ್ವಾತಂತ್ರ್ಯ ಬಂದಾಗಿನಿಂದಲೂ ದಿಲ್ಲಿಗೆ ಅನ್ಯಾಯವಾಗುತ್ತಿದೆ. ಜನರಿಗೆ ನ್ಯಾಯ ಸಲ್ಲಿಸಲು ಹಾಗೂ ಅವರಿಗಾಗಿ ಕೆಲಸ ಮಾಡಲು ಇಲ್ಲಿನ ಚುನಾಯಿತ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲ ಅಧಿಕಾರ ಕೇಂದ್ರ ಸರಕಾರದ ಬಳಿಯೇ ಇರುವುದರಿಂದ ರಾಜ್ಯ ಸರಕಾರದ ಕಾರ್ಯನಿರ್ವಹಣೆಗೆ ಕೇಂದ್ರ ಸದಾ ಅಡ್ಡಗಾಲು ಹಾಕುತ್ತದೆ ಎಂದು ಕೇಜ್ರಿವಾಲ್‌ ಆರೋಪಿಸಿದರು.

Vijaya Karnataka 24 Feb 2019, 5:00 am
ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ನಿರಾಕರಿಸಿದ ಬಳಿಕ, ಜನರ ಅನುಕಂಪ ಗಳಿಸಲು ಅರವಿಂದ ಕೇಜ್ರಿವಾಲ್‌ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ದಿಲ್ಲಿಗೆ ರಾಜ್ಯದ ಸ್ಥಾನಮಾನವನ್ನು ನೀಡುವಂತೆ ಆಗ್ರಹಿಸಿ ಮಾರ್ಚ್‌ 1ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಘೋಷಿಸಿದ್ದಾರೆ.
Vijaya Karnataka Web kejriwal


ಶನಿವಾರ ವಿಧಾನಸಭೆಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ''ದಿಲ್ಲಿಯ ಜನ ನಮಗೆ ಎಲ್ಲವನ್ನೂ ನೀಡಿದ್ದಾರೆ. ಅವರಿಗಾಗಿ ನಾವು ಪ್ರಾಣತ್ಯಾಗ ಮಾಡಿದರೂ ಅದು ಕಡಿಮೆಯೇ. ದಿಲ್ಲಿಗೆ ರಾಜ್ಯದ ಸ್ಥಾನಮಾನ ಸಿಗುವವರೆಗೂ ಧರಣಿ ನಿಲ್ಲಿಸುವುದಿಲ್ಲ,'' ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದಾಗಿನಿಂದಲೂ ದಿಲ್ಲಿಗೆ ಅನ್ಯಾಯವಾಗುತ್ತಿದೆ. ಜನರಿಗೆ ನ್ಯಾಯ ಸಲ್ಲಿಸಲು ಹಾಗೂ ಅವರಿಗಾಗಿ ಕೆಲಸ ಮಾಡಲು ಇಲ್ಲಿನ ಚುನಾಯಿತ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ಅಧಿಕಾರದ ಕೊರತೆ. ಎಲ್ಲ ಅಧಿಕಾರ ಕೇಂದ್ರ ಸರಕಾರದ ಬಳಿಯೇ ಇರುವುದರಿಂದ ರಾಜ್ಯ ಸರಕಾರದ ಕಾರ್ಯನಿರ್ವಹಣೆಗೆ ಕೇಂದ್ರ ಸದಾ ಅಡ್ಡಗಾಲು ಹಾಕುತ್ತದೆ ಎಂದು ಆರೋಪಿಸಿದರು.

ಅಕ್ಕಪಕ್ಕದ ರಾಜ್ಯಗಳು ಯಾವುದಕ್ಕೂ ಕೇಂದ್ರ ಸರಕಾರದ ಮರ್ಜಿಗೆ ಕಾಯಬೇಕಿಲ್ಲ. ದಿಲ್ಲಿಗೂ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ಸಿಕ್ಕರೆ ಇಲ್ಲಿನ ಜನರಿಗೆ ಉದ್ಯೋಗ, ಮನೆ, ಭದ್ರತೆ, ನ್ಯಾಯ ಎಲ್ಲವೂ ಸಿಗುತ್ತದೆ ಎಂದು ಪ್ರತಿಪಾದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ