ಆ್ಯಪ್ನಗರ

ಮೋದಿ ನರ್ವಸ್ ಆಗಿದ್ದಾರೆ: ಟ್ವೀಟರ್‌ನಲ್ಲಿ ಪ್ರಧಾನಿ ಕಾಲೆಳೆದ ಕೇಜ್ರಿ

'ಪಂಚ ರಾಜ್ಯ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ 'ನರ್ವಸ್' ಆದಂತೆ ಕಾಣುತ್ತಿದ್ದಾರೆ,' ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟರ್‌ನಲ್ಲಿ ನರೇಂದ್ರ ಮೋದಿ ಕಾಲೆಳೆದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 17 Feb 2017, 12:03 pm
ಹೊಸದಿಲ್ಲಿ: 'ಪಂಚ ರಾಜ್ಯ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ 'ನರ್ವಸ್' ಆದಂತೆ ಕಾಣುತ್ತಿದ್ದಾರೆ,' ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟರ್‌ನಲ್ಲಿ ನರೇಂದ್ರ ಮೋದಿ ಕಾಲೆಳೆದಿದ್ದಾರೆ.
Vijaya Karnataka Web arvind kejriwal trolls narendra modi on twitter says he appears nervous
ಮೋದಿ ನರ್ವಸ್ ಆಗಿದ್ದಾರೆ: ಟ್ವೀಟರ್‌ನಲ್ಲಿ ಪ್ರಧಾನಿ ಕಾಲೆಳೆದ ಕೇಜ್ರಿ


Sir, u are looking nervous https://t.co/6F9aBzVmAn — Arvind Kejriwal (@ArvindKejriwal) 16 February 2017 ಉತ್ತರ ಪ್ರದೇಶದಲ್ಲಿ ಚುನಾವಣೆ ಸಭೆಯಲ್ಲಿ ಮೋದಿ ಗುರುವಾರ ಮಾತನಾಡಿದ್ದರು. ಈ ಭಾಷಣದ ತುಣುಕುಗಳ ವೀಡಿಯೋವನ್ನು ಮೋದಿ ಟ್ವೀಟ್ ಮಾಡಿದ್ದರು. ಇದರಲ್ಲೊಂದು ಟ್ವೀಟ್‌ಗೆ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದು, ಪಂಚ ರಾಜ್ಯ ಚುನಾವಣೆಯ ಫಲಿತಾಂಶದ ಬಗ್ಗೆ ಮೋದಿ ಆತಂಕಿತರಾದಂತೆ ಕಾಣುತ್ತಿದ್ದಾರೆಂದು ಹೇಳಿದ್ದಾರೆ.

दलितों पर अत्याचार की घटना यूपी में ज्यादा है और उत्तरप्रदेश सरकार इसे लेकर बिल्कुल गंभीर नहीं है। इसकी सीधी ज़िम्मेदारी यूपी सरकार की है। pic.twitter.com/3OwmR8zwak — Narendra Modi (@narendramodi) 16 February 2017 ಪಂಜಾಬ್ ಹಾಗೂ ಗೋವಾ ರಾಜ್ಯದಲ್ಲಿ ಮಾತ್ರ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸ್ಪರ್ಧಿಸಿದ್ದು, ಉತ್ತರಪ್ರದೇಶ, ಮಣಿಪುರ ಹಾಗೂ ಉತ್ತರಾಖಂಡ್‌ನಲ್ಲಿ ಸ್ಪರ್ಧಿಸಿಲ್ಲ.

ಈಗಾಗಲೇ ಐದು ರಾಜ್ಯಗಳ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಗೋವಾ, ಪಂಜಾಬ್ ಹಾಗೂ ಉತ್ತರಾಖಂಡ್‌ ಮತದಾನ ಮುಗಿದಿದ್ದು, ಉತ್ತರ ಪ್ರದೇಶದಲ್ಲಿ ಈಗಾಗಲೇ ಮೊದಲ ಹಂತದ ಮತದಾನ ಮುಗಿದಿದೆ. ಮಣಿಪುರದಲ್ಲಿನ್ನೂ ಚುನಾವಣೆ ನಡೆಯಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ