ಆ್ಯಪ್ನಗರ

ಕೇಜ್ರಿ ಪತ್ನಿ, ಮಿಶ್ರಾ ನಡುವೆ ಟ್ವೀಟ್‌ ಸಮರ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಹಾಗೂ ಉಚ್ಚಾಟಿತ ಆಪ್‌ ಸಚಿವ ಕಪಿಲ್ ಮಿಶ್ರಾ ನಡುವೆ ಸೋಮವಾರ ವಾಕ್ಸಮರ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 15 May 2017, 7:44 pm
ಹೊಸದಿಲ್ಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಹಾಗೂ ಉಚ್ಚಾಟಿತ ಆಪ್‌ ಸಚಿವ ಕಪಿಲ್ ಮಿಶ್ರಾ ನಡುವೆ ಸೋಮವಾರ ವಾಕ್ಸಮರ ನಡೆದಿದೆ.
Vijaya Karnataka Web arvind kejriwals wife sunita and kapil mishra in a war of words
ಕೇಜ್ರಿ ಪತ್ನಿ, ಮಿಶ್ರಾ ನಡುವೆ ಟ್ವೀಟ್‌ ಸಮರ


ಟ್ವಿಟರ್ ಮೂಲಕ ಮಿಶ್ರಾ ವಿರುದ್ಧ ಹರಿಹಾಯ್ದ ಸುನೀತಾ, ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಪ್ರತಿಪಾದಿಸಿದ್ದಾರೆ.

'ಮೇ 5ರಂದು ನೀವು ನಮ್ಮ ಮನೆಗೆ ಬಂದಿದ್ದು ಎಷ್ಟು ಹೊತ್ತಿಗೆ? ನೀವು ಬಂದಿದ್ದೇ ನನಗೆ ಗೊತ್ತಾಗಲಿಲ್ಲ; ನಿಮಗೆ ನಾನು ಯಾವತ್ತೂ ಚಹಾ ಕೂಡ ಕೊಟ್ಟಿಲ್ಲ' ಎಂದು ಮಿಶ್ರಾ ಆರೋಪಗಳ ವಿರುದ್ಧ ಸುನೀತಾ ಕಟಕಿಯಾಡಿದ್ದಾರೆ.

@KapilMishraAAP मुझे दीदी बोलते थे और घर में 2 करोड़ आए, बताते तो। अच्छा 5तारीख को कब आए? पता ही नही लगा। चाय पूछती थी ना आपसे हर बार। — Sunita Kejriwal (@KejriwalSunita) May 15, 2017 ಕಪಿಲ್ ಮಿಶ್ರಾರನ್ನು ವಂಚಕ ಎಂದು ಜರಿದಿರುವ ಕೇಜ್ರಿವಾಲ್ ಪತ್ನಿ, ನಿಮ್ಮ ಕೃತ್ಯಗಳಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

'ನಿಸರ್ಗದ ನಿಯಮ ಎಂದೂ ತಪ್ಪಾಗುವುದಿಲ್ಲ. ವಂಚನೆ, ಸುಳ್ಳು ಆರೋಪಗಳ ಬೀಜ ಬಿತ್ತಿದರೆ ನಿಮಗೆ ದೊರಕುವ ಫಲವೂ ಅದೇ ಆಗಿರುತ್ತದೆ' ಎಂದು ಸುನೀತಾ ಟ್ವೀಟ್‌ ಮಾಡಿದ್ದಾರೆ.

Law of Nature never errs. Seeds of विश्वासघात, झूठे आरोप sown, so shall he @KapilMishraAAP reap.Inevitable. — Sunita Kejriwal (@KejriwalSunita) May 15, 2017 ಸುನೀತಾ ವಾಗ್ದಾಳಿಗೆ ಮಿಶ್ರಾ ಪ್ರತಿಕ್ರಿಯಿಸಿದರೂ ಅವರ ವಿರುದ್ಧ ಪ್ರತಿದಾಳಿಗೆ ನಿರಾಕರಿಸಿದ್ದಾರೆ.

सुनीता केजरीवाल जी साधना में रत पत्नी हैं। उन्हें अंदाजा भी नहीं उन्ही के घर मे कैसे कैसे कुचक्र रचे जाते है। वो अपना धर्म निभा रहीं हैं 1/2 — Kapil Mishra (@KapilMishraAAP) May 15, 2017 'ನನ್ನ ಆರೋಪಗಳ ಹಿಂದಿನ ಸತ್ಯಾಂಶ ಅವರಿಗೆ ತಿಳಿದಿಲ್ಲ. ತಮ್ಮ ಪತಿಯ ಭವಿಷ್ಯ ಮಂಕಾಗುತ್ತಿದೆಯಲ್ಲ ಎಂಬುದಷ್ಟೇ ಅವರ ಚಿಂತೆ' ಎಂದು ಮಿಶ್ರಾ ಮರು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಮೊದಲು ಮಿಶ್ರಾರ ತಾಯಿ ಕೇಜ್ರಿವಾಲ್‌ಗೆ ಬಹಿರಂಗಪತ್ರ ಬರೆದು ಟೀಕಿಸಿದ್ದರು.

सुनीता केजरीवाल जी सच से अनजान हैं। वो अपने पति के पतन से परेशान हैं। उनकी हर गाली सिर माथे। उनके खिलाफ कभी कुछ नहीं कहूंगा। 2/2 — Kapil Mishra (@KapilMishraAAP) May 15, 2017 ನಕಲಿ ಕಂಪನಿಗಳ ಮೂಲಕ ದೇಣಿಗೆ ಸಂಗ್ರಹಿಸಿರುವ ಆಮ್‌ ಆದ್ಮಿ ಪಕ್ಷ ಚುನಾವಣೆ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದೆ ಎಂದು ಮಿಶ್ರಾ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಸುನೀತಾ ವಾಗ್ದಾಳಿ ನಡೆಸಿದ್ದರು.

Arvind Kejriwal's wife Sunita and Kapil Mishra in a war of words

NEW DELHI: Arvind Kejriwal's wife Sunita and sacked AAP minister Kapil Mishra engaged in a war of words on Monday.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ