ಆ್ಯಪ್ನಗರ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹರಿದು ಬಂದ ಹಣವೆಷ್ಟು? ಇಲ್ಲಿದೆ ಉತ್ತರ..!

ರಾಮನ ಸನ್ನಿಧಾನಕ್ಕೆ ಹರಿದು ಬಂದ ಹಣವೆಷ್ಟು? ರಾಮಮಂದಿರ ನಿರ್ಮಾಣಕ್ಕಾಗಿ ಜನರು ನೀಡಿರು ದೇಣಿಗೆಯ ಮೊತ್ತ ಎಷ್ಟು ಎನ್ನುವ ಪ್ರಶ್ನೆ ಬಹುತೇಕ ಜನರನ್ನು ಕಾಡಿಯೇ ಇರುತ್ತೆ. ಹೀಗಾಗಿ ಈ ಪ್ರಶ್ನೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ ಉತ್ತರ ನೀಡಿದ್ದಾರೆ.

TIMESOFINDIA.COM 5 Aug 2020, 9:43 am
ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲು ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಸೇರಿದಂತೆ ಅನೇಕ ಗಣ್ಯರು ಮಂದಿರದ ಶಿಲಾನ್ಯಾಸಕ್ಕೆ ಸಾಕ್ಷಿಯಾಗಲಿದ್ದಾರೆ.
Vijaya Karnataka Web Swami govind dev giri


ಮಂದಿರ ನಿರ್ಮಾಣದ ಮೂಲಕ ಭಾರತದಲ್ಲಿ ರಾಮ ರಾಜ್ಯ ಸ್ಥಾಪನೆ: ಬಾಬಾ ರಾಮ್‌ದೇವ್‌

ಜನರು ನೀಡಿರುವ ದೇಣಿಗೆಯಲ್ಲಿ ತಲೆಯೆತ್ತಲಿರುವ ಶ್ರೀರಾಮನ ಭವ್ಯ ಮಂದಿರದ ಸಹಜವಾಗೇ ದೇಶದ ಕೋಟ್ಯಂತರ ಮನಸ್ಸುಗಳಲ್ಲಿ ಕುತೂಹಲ ಇದ್ದೇ ಇದೆ. ಈ ಮಧ್ಯೆ ರಾಮನ ಸನ್ನಿಧಾನಕ್ಕೆ ಹರಿದು ಬಂದ ಹಣವೆಷ್ಟು? ರಾಮಮಂದಿರ ನಿರ್ಮಾಣಕ್ಕಾಗಿ ಜನರು ನೀಡಿರು ದೇಣಿಗೆಯ ಮೊತ್ತ ಎಷ್ಟು ಎನ್ನುವ ಪ್ರಶ್ನೆ ಬಹುತೇಕ ಜನರನ್ನು ಕಾಡಿಯೇ ಇರುತ್ತೆ. ಹೀಗಾಗಿ ಈ ಪ್ರಶ್ನೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ ಉತ್ತರ ನೀಡಿದ್ದಾರೆ.

LIVE ಅಪ್ಡೇಟ್ಸ್: ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ಕ್ಷಣಗಣನೆ

ಸ್ವಾಮಿ ಗೋವಿಂದ ದೇವ ಗಿರಿ ಹೇಳುವ ಪ್ರಕಾರ, ಅವರ ಅಂದಾಜಿನಲ್ಲಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಗಸ್ಟ್ 4 ವೇಳೆಗೆ ಸುಮಾರು 30 ಕೋಟಿ ರೂಪಾಯಿ ಗಳಿಸಿದೆ. ಧಾರ್ಮಿಕ ನಾಯಕ ಮೊರಾರಿ ಬಾಪು ಭಾರತೀಯ ನಿವಾಸಿಗಳಿಂದ ಸಂಗ್ರಹಿಸಿರುವ ರೂ.11 ಕೋಟಿ ಹಣ ಆಗಸ್ಟ್ 5ರಂದು ಟ್ರಸ್ಟ್‌ಗೆ ಬಂದು ಸೇರಲಿದೆ ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಕೇಂದ್ರ ಸರ್ಕಾರ ಸಾಂಕೇತಿಕವಾಗಿ ₹1 ರೂಪಾಯಿ ದೇಣಿಗೆ ನೀಡಿತ್ತು. ಮಹಾರಾಷ್ಟ್ರದ ಶಿವಸೇನೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದೆ.



ಹೀಗಿದೆ ಅಯೋಧ್ಯೆ ಭೂಮಿ ಪೂಜೆ ಭವ್ಯ ವೇದಿಕೆ: ಪ್ರಧಾನಿ ಮೋದಿ ಬರುವಿಕೆಗಾಗಿ ಕಾಯುತ್ತಿದೆ ದೇಶ!

ಮುಖ್ಯವಾಗಿ ಅನಿವಾಸಿ ಭಾರತೀಯರಿಂದಲೂ ಏಳು ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಆದರೆ ಟ್ರಸ್ಟ್‌ ಅದನ್ನು ಇಲ್ಲಿಯವರೆಗೆ ಸಂಗ್ರಹಿಸಿಲ್ಲ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪ್ರಮಾಣ ಪತ್ರ ಟ್ರಸ್ಟ್‌ಗೆ ಸಿಕ್ಕ ಬಳಿಕ ಆ ಏಳು ಕೋಟಿ ಹಣವನ್ನು ಸ್ವೀಕರಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ