ಆ್ಯಪ್ನಗರ

ಚೀನಾ ನಮ್ಮ ನೆಲ ಕಬಳಿಸುತ್ತಿದ್ದರೂ ಪ್ರಧಾನಿ ಮಾತ್ರ ಮೌನವಾಗಿದ್ದಾರೆ: ಒವೈಸಿ ಕಿಡಿ!

ಚೀನಾ ನಿರಂತರವಾಗಿ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಭಾರತದ ನೆಲಕವನ್ನು ಕಬಳಿಸುತ್ತಿದ್ದು, ಪ್ರಧಾನಿ ಮೋದಿ ಈ ಕುರಿತು ಮೌನವಾಗಿರುವುದು ಅಕ್ಷಮ್ಯ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.

Vijaya Karnataka Web 19 Jan 2021, 8:33 pm
ಹೈದರಾಬಾದ್: ಚೀನಾ ನಿರಂತರವಾಗಿ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಭಾರತದ ನೆಲಕವನ್ನು ಕಬಳಿಸುತ್ತಿದ್ದು, ಪ್ರಧಾನಿ ಮೋದಿ ಈ ಕುರಿತು ಮೌನವಾಗಿರುವುದು ಅಕ್ಷಮ್ಯ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.
Vijaya Karnataka Web Asaduddin Owaisi
ಸಂಗ್ರಹ ಚಿತ್ರ


ಅರುಣಾಚಲ ಪ್ರದೇಶ, ಲಡಾಖ್, ಸಿಕ್ಕಿಂನ ಎಲ್ಎಸಿ ಬಳಿ ಚೀನಾದ ಪಿಎಲ್‌ಎ ಸೇನೆ ನಿರಂತರವಾಗಿ ಭಾರತದ ಭೂಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಿದೆ. ಆದರೆ ಪ್ರಧಾನಿ ಮೋದಿ ಮಾತ್ರ ಏನೂ ಆಗಿಲ್ಲವೆಂಬಂತೆ ಮೌನಕ್ಕೆ ಶರಣಾಗಿರುವುದು ಖಂಡನೀಯ ಎಂದು ಒವೈಸಿ ಹರಿಹಾಯ್ದರು.

ಅರುಣಾಚಲ ಪ್ರದೇಶದಲ್ಲಿ ಶಾಶ್ವತ ಗಡಿ ಗ್ರಾಮಗಳನ್ನು ಚೀನಾ ನಿರ್ಮಿಸುತ್ತಿದೆ. ಇದು ಚೀನಿ ಸೇನೆಯ ಚಟುವಟಿಕೆಗಳಿಗೂ ಅನುಕೂಲ ಕಲ್ಪಿಸುತ್ತದೆ. ಈ ಕುರಿತು ನಾವು ಎಚ್ಚರಿಕೆಯಿಂಧ ಇರಬೇಕು ಎಂದು ಒವೈಸಿ ಹೇಳಿದರು.

ಅರುಣಾಚಲದಲ್ಲಿ ನೂರಕ್ಕೂ ಹೆಚ್ಚು ಮನೆಗಳಿರುವ ಗ್ರಾಮ ನಿರ್ಮಿಸಿದ ಚೀನಾ!

ಚೀನಾದ ಪಿಎಲ್‌ಎ ಸೇನೆ ಭಾರತೀಯ ಭೂ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಿದ್ದು, ಪ್ರಧಾನಿ ಮೋದಿ ಈ ಕುರಿತು ದೇಶಕ್ಕೆ ಸತ್ಯ ಸಂಗತಿಯನ್ನು ತಿಳಿಸಬೇಕು. ಈಗಲಾದರೂ ಪ್ರಧಾನಿ ತಮ್ಮ ಮೌನವನ್ನು ಬಿಟ್ಟು ಗಡಿ ಘರ್ಷಣೆ ಕುರಿತು ಮಾತನಾಡಬೇಕು ಎಂದು ಒವೈಸಿ ಒತ್ತಾಯಿಸಿದ್ದಾರೆ.


ಇಂದು(ಜ.19-ಮಂಗಳವಾರ) ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ, ಗಡಿ ವಿಷಯದಲ್ಲಿ ಪ್ರಧಾನಿ ಮೋದಿ ಮೌನವನ್ನು ಟೀಕಿಸಿದ್ದರು.

ಜೆಪಿ ನಡ್ಡಾ ಯಾರು, ನಾನ್ಯಾಕೆ ಅವರ ಪ್ರಶ್ನೆಗಳಿಗೆ ಉತ್ತರಿಸಲಿ?: ರಾಹುಲ್ ಗಾಂಧಿ ಕೆಂಡಾಮಂಡಲ!

ಚೀನಾದೊಂದಿಗಿನ ಗಡಿ ಘರ್ಷಣೆಯ ನೈಜ ಸಂಗತಿಯನ್ನು ಪ್ರಧಾನಿ ಮೋದಿ ದೇಶದ ಜನತೆಯ ಮುಂದಿಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ