ಆ್ಯಪ್ನಗರ

ಭಾರತ-ಪಾಕ್‌ ವಿದ್ಯಾರ್ಥಿಗಳಿಗೆ ಒಂದೇ ಕ್ಲಾಸ್‌ರೂಮ್‌

ಇಲ್ಲಿನ ತರಗತಿಯೊಂದರಲ್ಲಿ ಭಾರತ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕುಳಿತುಕೊಳ್ಳುತ್ತಾರೆ. ಅವರಿಗೆ ಅಫ್ಘಾನಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಭೂತಾನ್‌ನ ವಿದ್ಯಾರ್ಥಿಗಳು ಸಾಥ್ ನೀಡುತ್ತಾರೆ.

TOI.in 12 Jun 2018, 5:01 pm
ಹೊಸದಿಲ್ಲಿ: ಇಲ್ಲಿನ ತರಗತಿಯೊಂದರಲ್ಲಿ ಭಾರತ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕುಳಿತುಕೊಳ್ಳುತ್ತಾರೆ. ಅವರಿಗೆ ಅಫ್ಘಾನಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಭೂತಾನ್‌ನ ವಿದ್ಯಾರ್ಥಿಗಳು ಸಾಥ್ ನೀಡುತ್ತಾರೆ. ಈ ರೀತಿಯ ವೈಶಿಷ್ಟ್ಯ ಕಂಡುಬರುವುದು ರಾಷ್ಟ್ರರಾಜಧಾನಿಯಲ್ಲಿನ ದಕ್ಷಿಣ ಏಷ್ಯಾ ಯೂನಿವರ್ಸಿಟಿಯಲ್ಲಿ..
Vijaya Karnataka Web IND PAK Std


ದಕ್ಷಿಣ ಏಷ್ಯಾ ಯೂನಿವರ್ಸಿಟಿಯಲ್ಲಿ ವಿವಿಧ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ. ಇಲ್ಲಿ ಏಷ್ಯಾದ ಎಲ್ಲ ದೇಶಗಳ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಬೋಧಕ ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿದೆ.

ಭಾರತ ಈ ಕ್ಯಾಂಪಸ್‌ಗೆ ಅವಕಾಶ ಕಲ್ಪಿಸಿದ್ದು, ಯೂನಿವರ್ಸಿಟಿಯ ನಿರ್ವಹಣಾ ವೆಚ್ಚದ ಅರ್ಧದಷ್ಟನ್ನು ಭರಿಸುತ್ತದೆ. ಈ ವಿಶ್ವವಿದ್ಯಾನಿಲಯದಲ್ಲಿನ ಅರ್ಧದಷ್ಟು ವಿದ್ಯಾರ್ಥಿಗಳು ವಿವಿಧ ರಾಷ್ಟ್ರಗಳಿಂದ ಬಂದವರಾಗಿದ್ದಾರೆ.

ಈ ಬಾರಿ ನಡೆದ ಘಟಿಕೋತ್ಸವದಲ್ಲಿ 21 ಅಪ್ಘಾನಿಸ್ತಾನ, 17 ಬಾಂಗ್ಲಾದೇಶ, 11 ನೇಪಾಳ ಮತ್ತು ಭೂತಾನ್‌ ಹಾಗೂ ಪಾಕಿಸ್ತಾನದಿಂದ ತಲಾ 5, ಶ್ರೀಲಂಕಾದ ಓರ್ವ ಮತ್ತು ಭಾರತದ 99 ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದಾರೆ.

ವಿವಿಧ ರಾಷ್ಟ್ರಗಳ ಸಂಸ್ಕೃತಿ, ಭಾಷೆ, ಸಾಹಿತ್ಯ ಮತ್ತು ಆಚರಣೆ, ಆಹಾರ ಶೈಲಿಯನ್ನು ತಿಳಿದುಕೊಳ್ಳಲು ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇಲ್ಲಿ ದಾಖಲಾಗುವ ವಿದೇಶದ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ವೀಸಾ ನೀಡಲಾಗಿದೆ. ಪಾಕಿಸ್ತಾನದ ವಿದ್ಯಾರ್ಥಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಆಗಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ