ಆ್ಯಪ್ನಗರ

ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಅರಿತು ಸಾಮಾಜಿಕ ಏಳ್ಗೆಗೆ ಶ್ರಮಿಸಬೇಕು: ಅಸ್ಸಾಂ ಸಿಎಂ

ಅಸ್ಸಾಂ ಸಿಎಂ ಸರ್ಬಾನಂದ ಸೋನವಾಲ ಅವರು ಯುವ ಸಮ್ಮೇಳನದಲ್ಲಿ "ಯಶಸ್ಸು ಗಳಿಸಲು ವಿದ್ಯಾರ್ಥಿಗಳು ದಿನಕ್ಕೆ 10 ಗಂಟೆಗಳ ಕಾಲ ಓದಬೇಕು. ಇಚ್ಛಾಶಕ್ತಿ, ಪ್ರಾಮಾಣಿಕತೆ, ಆತ್ಮವಿಶ್ವಾಸ ಮತ್ತು ನಂಬಿಕೆ - ಇವುಗಳೇ ಯಶಸ್ಸಿನ ಮೂಲ ಮಂತ್ರಗಳು'' ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

Vijaya Karnataka Web 22 Jan 2020, 11:37 am
ದಿಸ್ಪುರ್‌: ಜಗತ್ತಿನಲ್ಲಿ ಇಂದು ಮೌಲ್ಯಾಧಾರಿತ ಸೇವೆಗಳು ಅತ್ಯಂತ ಪ್ರಮುಖ್ಯವಾಗಿವೆ. ವೈಯಕ್ತಿಕ ಯಶಸ್ಸಿಗಾಗಿ ಕೆಲಸ ಮಾಡುವುದರಿಂದ ಹೆಚ್ಚು ತೃಪ್ತಿ ಸಿಗುವುದಿಲ್ಲ. ಯುವಕರು ಇದನ್ನು ಅರ್ಥ ಮಾಡಿಕೊಂಡು ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ ಹೇಳಿದರು.
Vijaya Karnataka Web Youth Conclave 2020.


ಸರುಸಜಾಯ್‌ ಕ್ರೀಡಾಂಗಣದ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನತೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಜ್ಯ ಮಟ್ಟದ ಸಲಹಾ ಸಮಿತಿ ಹಮ್ಮಿಕೊಂಡಿದ್ದ 'ಯೂತ್‌ ಕಾಂಕ್ಲೇವ್‌ 2020'ನಲ್ಲಿ ಮಾತನಾಡಿದ ಸಿಎಂ ಸರ್ಬಾನಂದ ಸೋನೊವಾಲ, ಈಶಾನ್ಯ ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳ ಬಗ್ಗೆ ಗಮನ ಸೆಳೆದರು. ಯುವಕರು ತಮ್ಮ ಜ್ಞಾನ ಮತ್ತು ಕ್ರಿಯಾಶೀಲತೆಯನ್ನು ಉಪಯೋಗಿಸಿಕೊಂಡು ಹೆಚ್ಚಿನ ಶ್ರಮದಿಂದ ರಾಜ್ಯದ ಏಳ್ಗೆಗೆ ಶ್ರಮಿಸಬೇಕು. ವಿದ್ಯಾರ್ಥಿಗಳು ವಿವೇಚನೆಯಿಂದ ತಮ್ಮ ಸಮಯವನ್ನು ಸದ್ಭಳಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಯಶಸ್ಸಿನ ಬದುಕು ಕಟ್ಟಿಕೊಳ್ಳಬಹುದು ಎಂದು ಕಿವಿ ಮಾತು ಹೇಳಿದರು.

ಯೂತ್‌ ಕಾಂಕ್ಲೇವ್‌ 2020 ಕಾರ್ಯಕ್ರಮದಲ್ಲಿ ರಾಜ್ಯದ ಸುಮೂರು 100 ಕಾಲೇಜುಗಳು ಸೇರಿದಂತೆ 4 ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉದ್ಯಮ, ಕೃಷಿಗೆ ಸಂಬಂಧಿಸಿದ ಸ್ಟಾರ್ಟ್‌-ಅಪ್‌ಗಳು, ಪ್ರವಾಸೋದ್ಯಮ ಮತ್ತು ಸ್ವಂತ ಉದ್ಯಮಗಳನ್ನು ಸ್ಥಾಪಿಸಿಕೊಳ್ಳಬಹುದಾದ ವಿಭಾಗಗಳ ಬಗ್ಗೆ ತಜ್ಞರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜನವರಿ 19ಕ್ಕೆ ಆರಂಭಗೊಂಡ ಮೂರು ದಿನಗಳ ಕಾರ್ಯಕ್ರಮ ಇಂದು ಅಂತ್ಯಗೊಳ್ಳಲಿದೆ.

ಪೌರತ್ವ ಹೋರಾಟ ಬೆಂಬಲಿಸಿ ವಿದ್ಯಾರ್ಥಿಗಳಿಗೆ ಅಸ್ಸಾಂನ ಗ್ರಾಮಸ್ಥರಿಂದ ಮನೆಗೆ 4 ಕೆಜಿ ಭತ್ತ ದಾನ



ಯುವ ಸಮ್ಮೇಳನದಲ್ಲಿ ಪಡೆದ ಜ್ಞಾನವನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಗ್ರಾಮ, ಪಟ್ಟಣಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಕ್ರಾಂತಿ ಸೃಷ್ಟಿಸಿ ಎಂದು ವಿದ್ಯಾರ್ಥಿಗಳಿಗೆ ಸರ್ಬಾನಂದ ಸೋನೊವಾಲ ಹೇಳಿದರು.

ಯಶಸ್ಸು ಗಳಿಸಲು ವಿದ್ಯಾರ್ಥಿಗಳು ದಿನಕ್ಕೆ 10 ಗಂಟೆಗಳ ಕಾಲ ಓದಬೇಕು. ಇಚ್ಛಾಶಕ್ತಿ, ಪ್ರಾಮಾಣಿಕತೆ, ಆತ್ಮವಿಶ್ವಾಸ ಮತ್ತು ನಂಬಿಕೆ - ಇವುಗಳೇ ಯಶಸ್ಸಿನ ಮೂಲ ಮಂತ್ರಗಳು ಎಂದು ಸೋನೊವಾಲ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಪೌರತ್ವ ಕಾಯಿದೆಗೆ ವಿರೋಧ; ಸುಳ್ಳಿನ ಸೋಗಿನಲ್ಲಿ ಹಿಂಸಾಚಾರ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌, ತಮ್ಮ ಸಿನಿಮಾ ಬದುಕಿನ ಆರಂಭ ಮತ್ತು ಸವಾಲುಗಳ ಬಗ್ಗೆ ಸುವಿಸ್ತಾರವಾಗಿ ತಿಳಿಸಿದರು. 2004ರಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ಸುನಾಮಿ ಸಂದರ್ಭ ತಾವು ತೊಡಗಿಸಿಕೊಂಡ ಸಾಮಾಜಿಕ ಕೆಲಸಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಾಮಾಜಿಕ ಅಭಿವೃದ್ಧಿ ಮಂಡಳಿಯ ಮುಖ್ಯಸ್ಥ ಕೃಷ್ಣ ದಾಸ್‌, ಸಲಹಾ ಸಮಿತಿಯ ಸದಸ್ಯ ಲಖ್ಯಾ ಕೊನ್ವರ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ