ಆ್ಯಪ್ನಗರ

ಪ್ರವಾಹದಲ್ಲಿ ಸಿಲುಕಿದ ಜನರಿಗೆ ನೆರವಾದ ಬಿಜೆಪಿ ಶಾಸಕನಿಗೆ ಜನರಿಂದ ಶ್ಲಾಘನೆ

ಅಸ್ಸಾಂನಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿದ್ದು, ಮನೆಮಠಗಳು ಮುಳುಗಿ ಹೋಗಿವೆ. ಇದೇ ವೇಳೆ ಅಸ್ಸಾಂನ ಬಿಜೆಪಿ ಶಾಸಕ ಮೃಣಾಲ್ ಸೈಕಿಯಾ ಖುದ್ದಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿ ಜನರ ನೆರವಿಗೆ ಧಾವಿಸಿದ್ದಾರೆ. ಸದ್ಯ ಮೃಣಾಲ್ ಅವರು ಪ್ರವಾಹದಲ್ಲಿ ಸಿಲುಕಿದ್ದ ಮಗುವೊಂದನ್ನು ಎತ್ತಿಕೊಂಡು ಬರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

TIMESOFINDIA.COM 15 Jul 2020, 8:43 pm
ಅಸ್ಸಾಂ: ಕಳೆದ ಒಂದು ವಾರದಿಂದ ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಭೀಕರ ನೆರೆಗೆ ಜನರು ಮನೆಮಠ ಕಳೆದುಕೊಂಡು ಗಂಜಿಕೇಂದ್ರಗಳ ಆಶ್ರಯ ಪಡೆಯುತ್ತಿದ್ದಾರೆ. ಈಗಾಗಲೇ 80 ಜನರು ಪ್ರವಾಹದಿಂದಾಗಿ ಸಾವನ್ನಪ್ಪಿದ್ದಾರೆ. ಜಾನುವಾರುಗಳು ಕೂಡ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣ ಕಳೆದುಕೊಂಡಿವೆ. ಸಾವಿರಾರು ಸ್ವಯಂ ಸೇವಕರು ನಿರಾಶ್ರಿತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನೆರವಿಗೆ ಧಾವಿಸುತ್ತಿದ್ದಾರೆ. ಈ ಮಧ್ಯೆ ಅಸ್ಸಾಂನ ಬಿಜೆಪಿ ಶಾಸಕರೊಬ್ಬರು ಮಾಡಿದ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
Vijaya Karnataka Web Assam MLA


ಬಂಗಾಳದಲ್ಲಿ ಮುಂದುವರೆದ ರಾಜಕೀಯ ವೈಷಮ್ಯ: ಟಿಎಂಸಿ ನಾಯಕನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

ಅಸ್ಸಾಂನಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿದ್ದು, ಮನೆಮಠಗಳು ಮುಳುಗಿ ಹೋಗಿವೆ. ಇದೇ ವೇಳೆ ಅಸ್ಸಾಂನ ಬಿಜೆಪಿ ಶಾಸಕ ಮೃಣಾಲ್ ಸೈಕಿಯಾ ಖುದ್ದಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿ ಜನರ ನೆರವಿಗೆ ಧಾವಿಸಿದ್ದಾರೆ. ಸದ್ಯ ಮೃಣಾಲ್ ಅವರು ಪ್ರವಾಹದಲ್ಲಿ ಸಿಲುಕಿದ್ದ ಮಗುವೊಂದನ್ನು ಎತ್ತಿಕೊಂಡು ಬರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಫೇಸ್‌ಬುಕ್‌ ಅಷ್ಟೊಂದು ಪ್ರಿಯವಾದರೆ ರಾಜೀನಾಮೆ ನೀಡಿ - ಸೇನಾಧಿಕಾರಿ ಕೋರ್ಟ್‌ ತರಾಟೆ

ಜನರ ರಕ್ಷಣೆಗೆ ಸಂಬಂಧಿಸಿದಂತೆ ಸ್ವತಃ ಮೃಣಾಲ್ ಅವರೇ ಕೆಲವೊಂದು ವಿಡಿಯೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು ಅವರ ಸಾಮಾಜಿಕ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನನ್ನ ಕ್ಷೇತ್ರದ ಜನರು ನೆರೆಯಲ್ಲಿ ಸಿಲುಕಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸುವ ಕೆಲಸ ಮಾಡ್ತಿದ್ದೇನೆ ಎಂದಿದ್ದಾರೆ.



ಬ್ರಹ್ಮಪುತ್ರ ಆರ್ಭಟಕ್ಕೆ ಅಸ್ಸಾಂ ತತ್ತರ..! ಭೀಕರ ಪ್ರವಾಹಕ್ಕೆ 61 ಜನ ಸಾವು; ಕಾಜಿರಂಗ್‌ ಬಹುತೇಕ

ಅಸ್ಸಾಂನ ಬಹುತೇಕ ಭಾಗಗಳಲ್ಲಿ ಭಾರೀ ನೆರೆ ಉಂಟಾಗಿದ್ದು, ರಾಜ್ಯದ 27 ಜಿಲ್ಲೆಗಳಲ್ಲಿ 22 ಲಕ್ಷಕ್ಕೂ ಅಧಿಕ ಜನರು ನೆರೆಗೆ ಬಾಧಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ