ಆ್ಯಪ್ನಗರ

ದಿಗಂತದಲ್ಲಿ ಐದು ವರ್ಷ ಪೂರೈಸಿದ ಭಾರತದ ಆಸ್ಟ್ರೋಸ್ಯಾಟ್: ಇಸ್ರೋ ಸಂಭ್ರಮಾಚರಣೆ!

ಭಾರತದ ಮೊಟ್ಟ ಮೊದಲ ಬಹು-ತರಂಗಾಂತರ ಉಪಗ್ರಹವಾದ ಆಸ್ಟ್ರೋಸ್ಯಾಟ್, ಬಾಹ್ಯಾಕಾಶದಲ್ಲಿ ಐದು ವರ್ಷಗಳನ್ನು ಪೂರೈಸಿದ ಸಾಧನೆ ಮಾಡಿದೆ.ಹೊಸ ಆಕಾಶಕಾಯಗಳು, ನಕ್ಷತ್ರಗಳು ಹಾಗೂ ಗ್ಯಾಲಕ್ಸಿಗಳನ್ನು ಪತ್ತೆ ಮಾಡುವುದರಲ್ಲಿ ಆಸ್ಟ್ರೋಸ್ಯಾಟ್ ಮಹತ್ವದ ಕೊಡುಗೆ ನೀಡಿದೆ .

Vijaya Karnataka Web 28 Sep 2020, 11:36 pm
ಹೊಸದಿಲ್ಲಿ: ಭಾರತದ ಮೊಟ್ಟ ಮೊದಲ ಬಹು-ತರಂಗಾಂತರ ಉಪಗ್ರಹವಾದ ಆಸ್ಟ್ರೋಸ್ಯಾಟ್, ಬಾಹ್ಯಾಕಾಶದಲ್ಲಿ ಐದು ವರ್ಷಗಳನ್ನು ಪೂರೈಸಿದ ಸಾಧನೆ ಮಾಡಿದೆ.
Vijaya Karnataka Web The image from AstroSat. The team included scientists from India, Switzerland, France, USA, Japan
ಸಂಗ್ರಹ ಚಿತ್ರ


ಈ ಕುರಿತು ಮಾಹಿತಿ ನೀಡಿರುವ ಭಾರತದ ಖಗೋಳ ಸಂಸ್ಥೆ ಇಸ್ರೋ, ಹೊಸ ಆಕಾಶಕಾಯಗಳು, ನಕ್ಷತ್ರಗಳು ಹಾಗೂ ಗ್ಯಾಲಕ್ಸಿಗಳನ್ನು ಪತ್ತೆ ಮಾಡುವುದರಲ್ಲಿ ಆಸ್ಟ್ರೋಸ್ಯಾಟ್ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದೆ.

ಸೆಪ್ಟೆಂಬರ್ 28, 2015 ರಂದು ಕಾರ್ಯಾಚರಣೆ ಆರಂಭಿಸಿದ್ದ ಆಸ್ಟ್ರೋಸ್ಯಾಟ್, ಇದುವರೆಗೂ 800 ಹೊಸ ಆಕಾಶಕಾಯಗಳನ್ನೂ ಹಾಗೂ 1,166 ಅವಲೋಕನಗಳನ್ನು ಪೂರೈಸಿದ ಕೀರ್ತಿಗೆ ಭಾಜನವಾಗಿದೆ.

9 ಬಿಲಿಯನ್ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿಯ ನೆರಳಾತೀತ ಬೆಳಕು ಪತ್ತೆ ಹಚ್ಚಿದ ಭಾರತೀಯ ಉಪಗ್ರಹ!

ಆಸ್ಟ್ರೋಸ್ಯಾಟ್ ಹೊಸ ನಕ್ಷತ್ರಗಳು, ಗ್ಯಾಲಕ್ಸಿಗಳು, ನಮ್ಮ ಹಾಲು ಹಾದಿ ನಕ್ಷತ್ರಪುಂಜದ ಮ್ಯಾಪಿಂಗ್ ಮಾಡಿದ್ದು, ಇದರ ಉನ್ನತ ಪ್ರಾದೇಶಿಕ ರೆಸಲ್ಯೂಶನ್ ಸಾಮರ್ಥ್ಯ ನಕ್ಷತ್ರಪುಂಜಗಳಲ್ಲಿ ನಕ್ಷತ್ರ ರಚನೆಯ ಕುರಿತಾದ ಜ್ಞಾನವನ್ನು ವೃದ್ಧಿ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ.

ಇತ್ತೀಚಿಗೆ ಭೂಮಿಯಿಂದ 9.3 ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ ನಕ್ಷತ್ರಪುಂಜದ ನೆರಳಾತೀತ ಬೆಳಕನ್ನು(ಯುವಿ ಲೈಟ್) ಸೆರೆಹಿಡಿಯುವಲ್ಲಿ ಆಸ್ಟ್ರೋಸ್ಯಾಟ್ ಯಶಸ್ವಿಯಾಗಿತ್ತು.

ಅಸ್ಟ್ರೋಸ್ಯಾಟ್‌ನಿಂದ 3 ಹೊಸ ನಕ್ಷತ್ರ ಪುಂಜ ಪತ್ತೆ: ಇಸ್ರೋ ಹೊಸ ಸಾಧನೆ

ಆಸ್ಟ್ರೋಸ್ಯಾಟ್ ದೂರದ ನೇರಳಾತೀತದಿಂದ ಹಾರ್ಡ್ ಎಕ್ಸರೆ ಬ್ಯಾಂಡ್‌ವರೆಗೆ ಹಲವಾರು ತರಂಗಾಂತರಗಳ ಮೇಲೆ ಏಕಕಾಲದಲ್ಲಿ ಅವಲೋಕನಗಳನ್ನು ನಡೆಸುವ ಸಾಮರ್ಥ್ಯ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ