ಆ್ಯಪ್ನಗರ

'ಅಪ್ಪ ಸಿಗರೇಟ್‌ ಬಿಡು' ಎಂದ 12ರ ಬಾಲೆ ಈಗ ರಾಯಭಾರಿ

ಸಿಗರೇಟು ಬಿಡುವಂತೆ ತಂದೆಗೆ ಪತ್ರ ಬರೆದಿದ್ದ 12 ವರ್ಷದ ಬಾಲಕಿ ಕಾಶಿಶ್‌ ರಾಜಸ್ಥಾನದ ತಂಬಾಕು ವಿರೋಧಿ ಆಂದೋಲನದ ರಾಯಭಾರಿ.

ಟೈಮ್ಸ್ ಆಫ್ ಇಂಡಿಯಾ 4 Mar 2017, 2:20 pm
ಜೈಪುರ: 'ಅಪ್ಪ ನೀನಂದ್ರೆ ನನಗೆ ಇಷ್ಟ, ಪ್ಲೀಸ್‌ ಸಿಗರೇಟು ಬಿಟ್ಟುಬಿಡು' ಎಂದು ಪತ್ರ ಬರೆದಿದ್ದ 12 ವರ್ಷದ ಬಾಲಕಿ ಕಾಶಿಶ್‌ ರಾಜಸ್ಥಾನದ ತಂಬಾಕು ವಿರೋಧಿ ಆಂದೋಲನದ ರಾಯಭಾರಿ.
Vijaya Karnataka Web at 12 shes brand ambassador of anti tobacco drive in rajasthan
'ಅಪ್ಪ ಸಿಗರೇಟ್‌ ಬಿಡು' ಎಂದ 12ರ ಬಾಲೆ ಈಗ ರಾಯಭಾರಿ


ರಾಜಸ್ಥಾನದ ಹನುಮಂತಗಢದ ಆರೋಗ್ಯ ಇಲಾಖೆ ಕಾಶಿಶ್‌ಳನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಿದೆ.

'ತಂಬಾಕು ಸೇವನೆ ಬಿಡುವಂತೆ ಮನವಿ ಮಾಡಿ 12 ವರ್ಷದ ಬಾಲಕಿ ಕಾಶಿಶ್‌ ತಂದೆಗೆ ಬರೆದ ಭಾವನಾತ್ಮಕ ಪತ್ರ' ಗಮನಕ್ಕೆ ಬಂದ ನಂತರ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಕಳೆದ ಫೆಬ್ರವರಿಯಲ್ಲಿ ತಂದೆಗೆ ಬಾಲಕಿ ಪತ್ರ ಬರೆದಿದ್ದಳು. ಹನುಮಂತಗಢದ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಬಾಲಕಿಯ ನೆರಯಮನೆಯವರು ಈ ವಿಷಯವನ್ನು ಇಲಾಖೆಯ ಗಮನಕ್ಕೆ ತಂದಿದ್ದರು.

'ಮುಜೆ ಐಸಾ ಲಗ್ತಾ ಹೇ ಜಬ್‌ ಮೇ ಆಪ್ಕೆ ಸಪ್ನೆ ಪುರೇ ಕರ್‌ ರಹಿ ಹೋಂಗಿ ತಬ್‌ ಆಪ್‌ ಮೇರೆ ಸಾತ್‌ ನಹೀ ಹೋಂಗಿ. ಮುಜೆ ಪತಾ ಹೆ. ಜೋ ಲೋಗ್‌ ಸಿಗರೇಟ್‌ ಪೀತೆ ಹೇ, ಟೊಬ್ಯಾಕೊ ಖಾತಾ ಹೇ, ವೋ ಬಹುತ್‌ ಜಲ್ದಿ ಮರ್‌ ಜಾತಾ ಹೇ' (ನಿಮ್ಮ ಆಕಾಂಕ್ಷೆಗಳನ್ನು ಪೂರೈಸುವ ಹೊತ್ತಿನಲ್ಲಿ ನೀವು ನನ್ನ ಜತೆ ಇರುವುದಿಲ್ಲ ಎನಿಸುತ್ತಿದೆ. ತಂಬಾಕು ಸೇವಿಸುವವರು, ಸಿಗರೇಟ್‌ ಸೇದುವವರು ಬೇಗ ಸಾಯುತ್ತಾರೆ ಎಂದು ನನಗೆ ಗೊತ್ತಿದೆ)

'ಐ ಲವ್‌ ಯು ಪಾಪಾ ವೆರಿ ಮಚ್‌. ನೀವು ನನ್ನನ್ನು ಪ್ರೀತಿಸುತ್ತೀರಿ ಎಂದು ತಿಳಿದಿದೆ. ದಯವಿಟ್ಟು ತಂಬಾಕು ಬಿಟ್ಟುಬಿಡಿ, ನನ್ನ ಮೇಲೆ ಆಣೆ ಮಾಡಿ,' ಎಂದು ಬಾಲಕಿ ಬರೆದಿದ್ದಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ