ಆ್ಯಪ್ನಗರ

ಬಿಹಾರದಲ್ಲಿ ಭಾರಿ ಮಳೆಗೆ ಬಲಿಯಾದವರ ಸಂಖ್ಯೆ 42ಕ್ಕೆ

ಪಟನಾ, ಭೋಜ್‌ಪುರ, ಭಾಗಲ್‌ಪುರ, ಖಗಾರಿಯಾ, ಸಮಷ್ಟಿಪುರ, ಬೇಗುಸರಾಯ್‌, ದರ್ಭಂಗಾ, ಮಿಥಿಲಾ ಜಿಲ್ಲೆಗಳಲ್ಲಿಒಟ್ಟು 17.09 ಲಕ್ಷ ಮಂದಿ ಮಳೆಯಿಂದಾಗಿ ನಿರಾಶ್ರಿತರಾಗಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಪಟನಾದಲ್ಲಾಗಿರುವ ಮಳೆ ಹಾನಿ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಸಿಎಂ ನಿತೀಶ್‌ ಕುಮಾರ್‌ ಪರಿಶೀಲಿಸಿ­ದರು.

PTI 3 Oct 2019, 5:00 am
ಪಟನಾ: ಕಳೆದ ಐದು ದಿನಗಳಿಂದ ಸುರಿ­ಯುತ್ತಿರುವ ಧಾರಾಕಾರ ಮಳೆಗೆ ಬಿಹಾರದಲ್ಲಿಸಂಭವಿಸಿದ ದುರಂತಗಳಲ್ಲಿಬಲಿಯಾದವರ ಸಂಖ್ಯೆ 42ಕ್ಕೆ ಏರಿಕೆಯಾ­ಗಿದೆ. ಬುಧವಾರ ಕೂಡ ರಾಜ್ಯದ ಕೆಲವೆಡೆ ಮಳೆಯಾಗಿದ್ದು, ಇನ್ನೂ ಎರಡು ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಟನಾ, ಭೋಜ್‌ಪುರ, ಭಾಗಲ್‌ಪುರ, ಖಗಾರಿಯಾ, ಸಮಷ್ಟಿಪುರ, ಬೇಗುಸರಾಯ್‌, ದರ್ಭಂಗಾ, ಮಿಥಿಲಾ ಜಿಲ್ಲೆಗಳಲ್ಲಿಒಟ್ಟು 17.09 ಲಕ್ಷ ಮಂದಿ ಮಳೆಯಿಂದಾಗಿ ನಿರಾಶ್ರಿತರಾಗಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಪಟನಾದಲ್ಲಾಗಿರುವ ಮಳೆ ಹಾನಿ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಸಿಎಂ ನಿತೀಶ್‌ ಕುಮಾರ್‌ ಪರಿಶೀಲಿಸಿ­ದರು.
Vijaya Karnataka Web rain


ಅಮೆರಿಕದಲ್ಲೂನೆರೆ ಬಂದಿಲ್ಲವೆ?: ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲಎನ್ನುವ ಆರೋಪಗಳ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಅಸಮಾಧಾನಗೊಂಡ ಸಿಎಂ, ''ಭಾರಿ ಮಳೆಗೆ ಕೇವಲ ಪಟನಾ ಮಾತ್ರ ಮುಳುಗಿ ಹೋಗಿರುವಂತೆ ಬೊಬ್ಬೆ ಇಡುತ್ತಿದ್ದೀರಿ. ದೇಶದ ಹಲವು ಭಾಗಗಲ್ಲಿಪ್ರವಾಹ ಎದುರಾಗಿಲ್ಲವೇ? ಯಾಕೆ ಮುಂಬಯಿ, ಅಮೆರಿಕದಲ್ಲಿಇದೇ ಮಾದರಿ ಪ್ರವಾಹ ಬಂದಿರಲಿಲ್ಲವೇ?, '' ಎಂದು ಹರಿಹಾಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ