ಆ್ಯಪ್ನಗರ

ಸೈಬರ್‌ ದಾಳಿ: ದೇಶದ ಶೇ.70ಕ್ಕೂ ಅಧಿಕ ATMಗೂ ಕುತ್ತು ?

ಭಾರತ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ನಡೆದ ಸೈಬರ್‌ ದಾಳಿ ದೇಶದ ಎಟಿಎಂ ಸೆಂಟರ್‌ಗಳ ಮೇಲೂ ಪರಿಣಾಮ ಬೀರಲಾರಂಭಿಸಿದೆ.

ಟೈಮ್ಸ್ ಆಫ್ ಇಂಡಿಯಾ 14 May 2017, 11:36 am
ಹೊಸದಿಲ್ಲಿ: ಭಾರತ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ನಡೆದ ಸೈಬರ್‌ ದಾಳಿ ದೇಶದ ಎಟಿಎಂ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
Vijaya Karnataka Web atms in india easy prey for cyberattacker
ಸೈಬರ್‌ ದಾಳಿ: ದೇಶದ ಶೇ.70ಕ್ಕೂ ಅಧಿಕ ATMಗೂ ಕುತ್ತು ?


ಶುಕ್ರವಾರ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯಿಂದ ಕದ್ದ ರಾನ್ಸಮ್‌ವೇರ್‌ಗಳನ್ನು ಬಳಸಿ ಈ ದಾಳಿ ನಡೆಸಲಾಗಿತ್ತು. ತಜ್ಞರ ಪ್ರಕಾರ ಈ ವೈರಸ್‌ ಟೂಲ್‌ ಬಳಸಿ ದೇಶ ಶೇ.70ರಷ್ಟು ಎಟಿಎಂಗಳನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದು. ಕಾರಣ, ಈ ವೈರಸ್‌ ಟೂಲ್‌ಅನ್ನು ಸುಲಭವಾಗಿ ವಿಂಡೋಸ್‌ ಎಕ್ಸ್‌ಪಿಗೆ ಇಂಜಕ್ಟ್‌ ಮಾಡಬಹುದಾಗಿದೆ. ಅಲ್ಲದೇ ಈ ಆಪರೇಟಿಂಗ್‌ ಸಿಸ್ಟಮ್‌(ಒಎಸ್‌)ಗೆ 2014ರಿಂದಲೇ ಮೈಕ್ರೋಸಾಫ್ಟ್‌ ಸರ್ವೀಸ್‌ ಸ್ಥಗಿತಗೊಳಿಸಿದೆ.

ಈ ಮಧ್ಯೆ, ಮೈಕ್ರೋಸಾಫ್ಟ್‌ ತನ್ನೆಲ್ಲಾ ಹಳೆಯ ಒಎಸ್‌ಗಳಿಗೆ ಮತ್ತೆ ಸೆಕ್ಯೂರಿಟಿ ಸರ್ವಿಸ್‌ ನೀಡುವುದಾಗಿ ಹೇಳಿಕೊಂಡಿದೆ. 'ನಮ್ಮ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಹಾಗೂ ವೈರಸ್‌ನಿಂದ ಭದ್ರತೆ ನೀಡುವ ಉದ್ದೇಶದಿಂದ ವಿಂಡೋಸ್‌ ಎಕ್ಸ್‌ಪಿ ಹಾಗೂ ವಿಂಡೋಸ್‌ 8 ಒಎಸ್‌ಗಳಿಗೆ ಸೆಕ್ಯೂರಿಟಿ ಸರ್ವಿಸ್‌ನ್ನು ಅಪ್‌ಡೇಟ್‌ ಮಾಡಲಾಗಿದೆ' ಎಂದು ಮೈಕ್ರೋಸಾಫ್ಟ್‌ ಹೇಳಿಕೊಂಡಿದೆ.

ನಿಸ್ಸಾನ್‌, ಆಂದ್ರ ಪೊಲೀಸರ ಕಂಪ್ಯೂಟರ್ ಹ್ಯಾಕ್‌ ಸೈಬರ್ ದಾಳಿ ಆಂಧ್ರ ಪೊಲೀಸರ ಮೇಲೂ ಪರಿಣಾಮ ಬೀರಿದ್ದು, ಆಂಧ್ರಪ್ರದೇಶ ಪೊಲೀಸರು ಬಳಸುತ್ತಿದ್ದ ಶೇ.25ರಷ್ಟು ಕಂಪ್ಯೂಟರ್ ನೆಟ್ ವರ್ಕ್ ಹಾಳಾಗಿದೆ.

ಸೈಬರ್ ದಾಳಿಯನ್ನು ಖಚಿತಪಡಿಸಿರುವ ಆಂಧ್ರಪ್ರದೇಶ ಪೊಲೀಸ್ ಮಹಾ ನಿರ್ದೇಶಕ(ತಂತ್ರಜ್ಞಾನ ಸೇವೆ) ಇ ದಾಮೋದರ್ ಅವರು, 'ಪೊಲೀಸರು ಬಳಸುತ್ತಿದ್ದ ವಿಶೇಷ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಸಂಪೂರ್ಣ ಸ್ಥಗಿತಗೊಂಡಿದೆ,' ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಕಾರು ತಯಾರಕ ಕಂಪನಿ ನಿಸ್ಸಾನ್‌ನ ಕಂಪ್ಯೂಟರ್‌ಗಳೂ ಈ ದಾಳಿಗೆ ತುತ್ತಾಗಿದ್ದು, ಆದರೆ ಈ ಕುರಿತು ಸಂಸ್ಥೆ ಮಾತ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಷ್ಟ್ರೀಯ ಸೈಬರ್‌ ಭದ್ರತಾ ಇಲಾಖೆ ಅಧಿಕಾರಿಗಳು ಈಗಾಗಲೇ 100ಕ್ಕೂ ಅಧಿಕ ಸೈಬರ್‌ ದಾಳಿಗೆ ತುತ್ತಾಗಿದ್ದ ಕಂಪ್ಯೂಟರ್‌ಗಳನ್ನು ಸರಿಪಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ