ಆ್ಯಪ್ನಗರ

ಲಖನೌನಲ್ಲಿ ಕಾಶ್ಮೀರಿಗಳ ಮೇಲೆ ಹಲ್ಲೆ: ನಾಲ್ವರ ಬಂಧನ

ಪುಲ್ವಾಮಾ ದಾಳಿ ನಂತರ ದೇಶದ ಹಲವು ಕಡೆ ಕಾಶ್ಮೀರಿಗಳ ವಿರುದ್ಧ ಹಲ್ಲೆ, ಥಳಿತದಂತಹ ಪ್ರಕರಣಗಳು ನಡೆದಿದ್ದವು.

Vijaya Karnataka 8 Mar 2019, 5:00 am
ಲಖನೌ: ಉತ್ತರ ಪ್ರದೇಶದ ಲಖನೌದಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದ ಇಬ್ಬರು ಕಾಶ್ಮೀರಿ ಯುವಕರ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪುಲ್ವಾಮಾ ದಾಳಿ ನಂತರ ದೇಶದ ಹಲವು ಕಡೆ ಕಾಶ್ಮೀರಿಗಳ ವಿರುದ್ಧ ಹಲ್ಲೆ, ಥಳಿತದಂತಹ ಪ್ರಕರಣಗಳು ನಡೆದಿದ್ದವು. ಲಖನೌದ ಢಾಲಿಂಗಜ್‌ ಸೇತುವೆ ಸಮೀಪ ಹಣ್ಣಿನ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್‌, ಅಫ್ಜಲ್‌ ಎಂಬ ಕಾಶ್ಮೀರಿ ಯುವಕರನ್ನು ಸ್ಥಳೀಯ ಗುಂಪೊಂದು ''ನೀವು ನಮ್ಮ ಭದ್ರತಾ ಪಡೆಗಳ ಮೇಲೆ ಕಲ್ಲು ತೂರುವ ದೇಶದ್ರೋಹಿಗಳು,'' ಎಂದು ಕಿಡಿಕಾರಿ ಹಲ್ಲೆ ನಡೆಸಿತ್ತು. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಇದನ್ನು ವಿಡಿಯೊ ಮಾಡಿದ್ದ. ಸಾಮಾಜಿಕ ಮಾಧ್ಯಮಗಳ ಮೂಲಕ ಘಟನೆ ಬೆಳಕಿಗೆ ಬಂದಿತ್ತು. ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Vijaya Karnataka Web 0703BN0328ARREST




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ