ಆ್ಯಪ್ನಗರ

ನಾಯಿ ಮೂಲಕ ಬದುಕಿನ ಮೌಲ್ಯಗಳ ಕುರಿತು ತಿಳಿಸಲಿರುವ ಸುಧಾಮೂರ್ತಿ

'ದ ಗೋಪಿ ಡೈರೀಸ್‌' ಎಂಬ ಮೂರು ಪುಸ್ತಕಗಳ ಸರಣಿಯನ್ನು ಹಾರ್ಪರ್‌ ಕಾಲಿನ್ಸ್‌ ಇಂಡಿಯಾ ಪ್ರಕಟಿಸಲಿದೆ. ಪುಸ್ತಕ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಇರಲಿದೆ. ''ಇದು ನಾಯಿಯ ದೃಷ್ಟಿಕೋನದಲ್ಲಿ ಒಂದು ಕುಟುಂಬ ಮತ್ತು ಜಗತ್ತನ್ನು ನೋಡುವ ಶೈಲಿಯಲ್ಲಿರಲಿದೆ. ಗೋಪಿ ಮನೆಗೆ ಬರುವುದರಿಂದ ಕತೆ ಆರಂಭವಾಗುತ್ತದೆ.

PTI 14 Jul 2019, 5:00 am
ಹೊಸದಿಲ್ಲಿ: ಖ್ಯಾತ ಬರಹಗಾರ್ತಿ, ಇನ್ಫೋಸಿಸ್‌ ಫೌಂಡೇಷನ್‌ನ ಮುಖ್ಯಸ್ಥೆ ಸುಧಾಮೂರ್ತಿ ಅವರು ತಮ್ಮ ಮುದ್ದಿನ ನಾಯಿ ಗೋಪಿ ಮೂಲಕ ಮೌಲ್ಯಗಳ ಕಥೆ ಹೇಳಲಿದ್ದಾರೆ. 'ದ ಗೋಪಿ ಡೈರೀಸ್‌' ಎಂಬ ಮೂರು ಪುಸ್ತಕಗಳ ಸರಣಿಯನ್ನು ಹಾರ್ಪರ್‌ ಕಾಲಿನ್ಸ್‌ ಇಂಡಿಯಾ ಪ್ರಕಟಿಸಲಿದೆ. ಪುಸ್ತಕ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಇರಲಿದೆ. ''ಇದು ನಾಯಿಯ ದೃಷ್ಟಿಕೋನದಲ್ಲಿ ಒಂದು ಕುಟುಂಬ ಮತ್ತು ಜಗತ್ತನ್ನು ನೋಡುವ ಶೈಲಿಯಲ್ಲಿರಲಿದೆ. ಗೋಪಿ ಮನೆಗೆ ಬರುವುದರಿಂದ ಕತೆ ಆರಂಭವಾಗುತ್ತದೆ. ಆ ಮನೆಯಲ್ಲಿ ತನ್ನ ಪ್ರೀತಿ ಪಾತ್ರರ ಜತೆ ಹೇಗೆ ಬಾಳುತ್ತದೆ, ತನ್ನ ಸುತ್ತಲಿನ ಜಗತ್ತನ್ನು ಗೋಪಿ ಹೇಗೆ ನೋಡುತ್ತಾರೆ ಮತ್ತು ತನ್ನ ಸುತ್ತಲಿನ ಜನರನ್ನು ಅದು ನೋಡುವ ರೀತಿಯ ಕಾಲ್ಪನಿಕ ಕಥಾನಕಗಳು ಇಲ್ಲಿರುತ್ತವೆ,'' ಎಂದು ಪ್ರಕಾಶನ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸುಧಾ ಮೂರ್ತಿ ಅವರ ಎಂದಿನ ಸರಳ ಶೈಲಿಯಲ್ಲಿ ಈ ಪುಸ್ತಕ ಇರಲಿದ್ದು, ಮೂಲ ಮೌಲ್ಯಗಳನ್ನು ನಾಯಿಯ ದೃಷ್ಟಿಕೋನದ ಮೂಲಕ ಹೇಳುವುದಾಗಿದೆ.''ಇದು ತರುಣ ಜನಾಂಗಕ್ಕೆ ನಾನು ಬರೆಯುತ್ತಿರುವ ಮೊದಲ ಪುಸ್ತಕ. ಅದರಲ್ಲೂ ಪ್ರಾಣಿಗಳನ್ನು ಪ್ರೀತಿಸುವ ಮಕ್ಕಳಿಗೆ. ನನ್ನ ಪಾಲಿನ ಸಂತೋಷವಾಗಿರುವ ನಾಯಿ ಗೋಪಿಯನ್ನು ಕುರಿತಾದದ್ದು ಈ ಪುಸ್ತಕ,'' ಎಂದಿದ್ದಾರೆ ಸುಧಾಮೂರ್ತಿ.
Vijaya Karnataka Web sudhamurthy

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ