ಆ್ಯಪ್ನಗರ

ವಕೀಲರಿಗೆ ಬೆದರಿಕೆ ಕರೆ ಕಳವಳಕಾರಿ ಎಂದ ಸುಪ್ರೀಂ

''ಇಂತಹ ವರ್ತನೆಗಳು ಒಳ್ಳೆಯ ಬೆಳವಣಿಗೆಯಲ್ಲ. ನಾವೆಲ್ಲರೂ ವಾದದ ಮನಸ್ಥಿತಿಯಲ್ಲಿದ್ದೇವೆ,'' ಎಂದು ನ್ಯಾಯಪೀಠ ಅಯೋಧ್ಯೆ ಪ್ರಕರಣದ 22ನೇ ದಿನದ ವಿಚಾರಣೆ ವೇಳೆ ಗುರುವಾರ ಹೇಳಿತು.

PTI 13 Sep 2019, 5:00 am
ಹೊಸದಿಲ್ಲಿ: ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ಒಡೆತನ ಪ್ರಕರಣದಲ್ಲಿಮುಸ್ಲಿಂ ಕಕ್ಷಿದಾರರನ್ನು ಪ್ರತಿನಿಧಿಸುತ್ತಿರುವ ವಕೀಲರೊಬ್ಬರಿಗೆ ಬೆದರಿಕೆ ಕರೆಗಳು ಬಂದಿರುವುದು ಕಳವಳಕಾರಿ ಸಂಗತಿ ಎಂದು ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಪೀಠ ಹೇಳಿದೆ. ''ಇಂತಹ ವರ್ತನೆಗಳು ಒಳ್ಳೆಯ ಬೆಳವಣಿಗೆಯಲ್ಲ. ನಾವೆಲ್ಲರೂ ವಾದದ ಮನಸ್ಥಿತಿಯಲ್ಲಿದ್ದೇವೆ,'' ಎಂದು ನ್ಯಾಯಪೀಠ ಅಯೋಧ್ಯೆ ಪ್ರಕರಣದ 22ನೇ ದಿನದ ವಿಚಾರಣೆ ವೇಳೆ ಗುರುವಾರ ಹೇಳಿತು. ''ಫೇಸ್‌ಬುಕ್‌ನಲ್ಲಿನನಗೆ ಬೆದರಿಕೆ ಸಂದೇಶಗಳು ಬರುತ್ತಿವೆ. ಅಲ್ಲದೇ ಕೋರ್ಟ್‌ ಆವರಣದಲ್ಲಿಯೇ ಬುಧವಾರ ನನ್ನ ಸಹೋದ್ಯೋಗಿಯೊಬ್ಬರನ್ನು ಥಳಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು,'' ಎಂದು ಸುನ್ನಿ ವಕ್ಫ್ ಬೋರ್ಡ್‌ ಪರ ವಾದಿಸುತ್ತಿರುವ ಹಿರಿಯ ವಕೀಲ ರಾಜೀವ್‌ ಧವನ್‌ ನ್ಯಾಯಾಲಯದ ಗಮನ ಸೆಳೆದಿದ್ದರು.
Vijaya Karnataka Web supreme-court

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ