ಆ್ಯಪ್ನಗರ

ಅಯೋಧ್ಯೆಯಲ್ಲಿ ಸಿಕ್ಕ ಗೋಡೆ, ಕಂಬಗಳು ಮಂದಿರದ ಅವಶೇಷ: 'ರಾಮನ ಪರ ವಕೀಲ'ರ ವಾದ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಉತ್ಖನನ ವೇಳೆ ಸಿಕ್ಕ ಕಂಬಗಳು, ಗೋಡೆಗಳು ರಾಮಮಂದಿರದ ಅವಶೇಷಗಳು ಎಂದು 'ರಾಮ್‌ ಲಲ್ಲಾ' ಪರ ವಕೀಲ ವೈದ್ಯನಾಥನ್ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂದಿಸಿದ್ದಾರೆ. ವಿವಾದಿತ ಸ್ಥಳ ಸಾರ್ವಜನಿಕ ಆಸ್ತಿಯಾಗಿತ್ತು ಎಂದು ರಾಮನ ಪರ ವಕೀಲರು ಪ್ರತಿಪಾದಿಸಿದ್ದಾರೆ.

Vijaya Karnataka 3 Oct 2019, 10:34 pm
ಹೊಸ ದಿಲ್ಲಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ವಿವಾದ ಪ್ರಕರಣದ ಸಂಬಂಧ ಗುರುವಾರ ನಡೆದ 36ನೇ ದಿನದ ಸರಣಿ ವಿಚಾರಣೆ ವೇಳೆ ರಾಮ್‌ ಲಲ್ಲಾ ಪರ ವಾದಿಸಿದ ವಕೀಲ ವೈದ್ಯನಾಥನ್‌, ಈಗಾಗಲೇ ಉತ್ಖನನ ವೇಳೆ ಸಿಕ್ಕಂತಹ ಕಂಬಗಳು, ಗೋಡೆಗಳ ಅವಶೇಷಗಳಿಂದ ಈ ಮುಂಚೆ ಮಂದಿರ ಇತ್ತು ಎಂಬುದು ಸಾಬೀತಾಗಿದೆ. ಅವಶೇಷಗಳೇ ಮಂದಿರ ಇತ್ತು ಎನ್ನುವುದಕ್ಕೆ ಪುರಾವೆಯಾಗಿದೆ. ಹಾಗಾಗಿ ಮುಸ್ಲಿಂ ಸಂಘಟನೆಗಳ ವಾದದಲ್ಲಿ ಹುರುಳಿಲ್ಲ ಎಂದಿದ್ದಾರೆ.
Vijaya Karnataka Web ayodhya supreme court


ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ನಡೆಸಿದ ವಿಚಾರಣೆ ವೇಳೆ ವಾದ ಮಂಡಿಸಿದ ವೈದ್ಯನಾಥನ್‌, ವಿವಾದಿತ ಸ್ಥಳದಲ್ಲಿ ಈ ಮುನ್ನ ಯಾವುದೇ ಕಟ್ಟಡ ಇರಲಿಲ್ಲ ಎಂದು ಮುಸ್ಲಿಂ ಸಂಘಟನೆಗಳು ವಾದಿಸಿದ್ದವು. ಬಳಿಕ ಅಲ್ಲಿ ಸಿಕ್ಕ ಅವಶೇಷಗಳು ಇಸ್ಲಾಮಿಕ್‌ ಕಟ್ಟಡವೊಂದಕ್ಕೆ ಸೇರಿದ್ದವು ಎಂದು ವಾದಿಸಿವೆ. ಆದರೆ, ಅವಶೇಷಗಳು ಮಂದಿರವನ್ನು ಪ್ರತಿನಿಧಿಸುತ್ತಿವೆ ಎಂದು ನಾವು ಹೇಳುತ್ತಿದ್ದೇವೆ. ಸ್ಪಷ್ಟವಾಗಿ ಮಂದಿರದ್ದೇ ಭಾಗಗಳೆಂದು ನೋಡಿದಾಗ ಹೇಳಬಹುದಾಗಿದೆ. ಮಂದಿರವನ್ನು ಕೆಡವಲಾಗಿತ್ತು. ಭಾರಿ ಗಾತ್ರದ ಗೋಡೆಯೊಂದು ಸಿಕ್ಕಿದ್ದು, ವಿವಾದಿತ ಸ್ಥಳ ಸಾರ್ವಜನಿಕ ಆಸ್ತಿಯಾಗಿತ್ತು ಎಂದು ಸಾಬೀತುಪಡಿಸಿದೆ ಎಂದು ವೈದ್ಯನಾಥನ್ ವಿವರಿಸಿದ್ದಾರೆ.

ಇದಕ್ಕೆ ಪ್ರತಿವಾದ ಮಂಡಿಸಿದ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್‌ ಧವನ್‌, ಭಾರತೀಯ ಪುರಾತತ್ವ ಶಾಸ್ತ್ರ ಇಲಾಖೆ ವರದಿಯಂತೆ ವಿವಾದಿತ ಸ್ಥಳದಲ್ಲಿ ಮಂದಿರವನ್ನು ಕೆಡವಲಾದ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದರು.

ಯುದ್ಧೋನ್ಮಾದಿ ಪಾಕ್ ಸೇನೆಗೇ ತಟ್ಟಿದ ಆರ್ಥಿಕ ಕುಸಿತ!: ನಯಾಪೈಸೆ ಏರಿಕೆ ಕಂಡಿಲ್ಲ ರಕ್ಷಣಾ ಬಜೆಟ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ