ಆ್ಯಪ್ನಗರ

ಭಾರತೀಯರ ಆರು ಪವಿತ್ರ ಕ್ಷೇತ್ರಗಳಲ್ಲಿ ಅಯೋಧ್ಯೆ ಪ್ರಮುಖ!

ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಅಯೋಧ್ಯೆಗೆ ಮಹತ್ವದ ಸ್ಥಾನ. ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮ ಇಲ್ಲಿನ ಮಹಾರಾಜ ದಶರಥ- ಕೌಸಲ್ಯೆಯರ ಪುತ್ರನಾಗಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯಲಾಗುತ್ತದೆ. ಶ್ರೀರಾಮ ಹುಟ್ಟಿ ಬೆಳೆದು ರಾಜ್ಯಭಾರ ಮಾಡಿದ ಕೋಸಲ ರಾಜ್ಯದ ರಾಜಧಾನಿ ಅಯೋಧ್ಯೆ. ಕ್ರಿ.ಪೂ. 1450ರ ಆಸುಪಾಸಿನಲ್ಲಿ ಅಂದರೆ ಇಂದಿಗೆ 3500 ವರ್ಷಗಳ ಹಿಂದೆ ರಾಮಾಯಣ ನಡೆದಿದೆ ಎಂದು ಅಂದಾಜಿಸಲಾಗಿದೆ.

Vijaya Karnataka Web 5 Aug 2020, 9:48 am
ಅಯೋಧ್ಯೆ: ಭಾರತದ ಪ್ರಾಚೀನ ನಗರಗಳಲ್ಲಿ ಒಂದಾದ ಅಯೋಧ್ಯೆ ಉತ್ತರ ಪ್ರದೇಶದ ಅಯೋಧ್ಯಾ ಜಲ್ಲೆಯ (ಹಿಂದಿನ ಫೈಜಾಬಾದ್‌ ಜಿಲ್ಲೆ) ಸರಯೂ ನದಿ ತೀರದಲ್ಲಿದೆ. 'ಅಯೋಧ್ಯೆ' ಎಂದರೆ ಅಜೇಯ ಅಥವಾ ಅಭೇದ್ಯ ಎಂದರ್ಥ. ದಿಲ್ಲಿಯಿಂದ 555 ಕಿ.ಮೀ. ದೂರ, ಲಖನೌಗೆ 135 ಕಿ.ಮೀ. ದೂರದಲ್ಲಿರುವ ಈ ನಗರವು ಹಿಂದೂಗಳ ಶ್ರದ್ಧಾ ಭಕ್ತಿಯ ಸಂಕೇತ.
Vijaya Karnataka Web ayodhya_gets_worlds_tallest_statue_but_employment_healthcare_sanitation_missing_from_land_of_ram_1564474190

ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಅಯೋಧ್ಯೆಗೆ ಮಹತ್ವದ ಸ್ಥಾನ. ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮ ಇಲ್ಲಿನ ಮಹಾರಾಜ ದಶರಥ- ಕೌಸಲ್ಯೆಯರ ಪುತ್ರನಾಗಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯಲಾಗುತ್ತದೆ. ಶ್ರೀರಾಮ ಹುಟ್ಟಿ ಬೆಳೆದು ರಾಜ್ಯಭಾರ ಮಾಡಿದ ಕೋಸಲ ರಾಜ್ಯದ ರಾಜಧಾನಿ ಅಯೋಧ್ಯೆ. ಕ್ರಿ.ಪೂ. 1450ರ ಆಸುಪಾಸಿನಲ್ಲಿ ಅಂದರೆ ಇಂದಿಗೆ 3500 ವರ್ಷಗಳ ಹಿಂದೆ ರಾಮಾಯಣ ನಡೆದಿದೆ ಎಂದು ಅಂದಾಜಿಸಲಾಗಿದೆ.

ಆಗ ಇದರ ವಿಸ್ತೀರ್ಣ 12 ಯೋಜನ, ಅಂದರೆ ಸುಮಾರು 80ರಿಂದ 100 ಮೈಲುಗಳ ಸುತ್ತಳತೆ ಇತ್ತು ಎಂದು ರಾಮಾಯಣದಲ್ಲಿ ಉಲ್ಲೇಖವಿದೆ. ಈ ನಗರವನ್ನು ಸೂರ್ಯವಂಶದ ರಾಜರು ಹಲವಾರು ಶತಮಾನ ಆಳಿದರು. ಮುಂದೆ ಬೌದ್ಧರ ಕಾಲದಲ್ಲಿ ಕೋಸಲ ದೇಶದ ರಾಜಧಾನಿಯಾಗಿ ಸಾಕೇತ ಪ್ರಸಿದ್ಧಿಯಾಯಿತು. ಗೌತಮ ಬುದ್ಧನ ಕಾಲದಲ್ಲಿಈ ನಗರವು ಅಜೋಜ್ಹಾ (ಪಾಲಿ) ಎಂದು ಹೆಸರಾಗಿತ್ತು.

ಅಯೋಧ್ಯೆಯತ್ತ ಹೊರಟ ಪ್ರಧಾನಿ: ಕೇಲವೇ ಕ್ಷಣಗಳಲ್ಲಿ ರಾಮ ರಾಜ್ಯಕ್ಕೆ ಮೋದಿ!

ಇಲ್ಲಿ ಜೈನ, ಬೌದ್ಧ, ಸಿಖ್‌, ಇಸ್ಲಾಮ್‌ ಧರ್ಮಗಳೂ ಸಮೃದ್ಧವಾಗಿ ಬೆಳೆದಿವೆ. ನಂತರ ದಿಲ್ಲಿಯ ಸುಲ್ತಾನರ ಕಾಲದಲ್ಲಿಇದು ಅವಧ್‌ ಪ್ರದೇಶದ ಆಡಳಿತ ಕೇಂದ್ರವಾಗಿದ್ದು, 18ನೆಯ ಶತಮಾನದಲ್ಲಿಅವಧ್‌ನ ನವಾಬರ ರಾಜಧಾನಿಯಾಗಿತ್ತು. 1765ರಲ್ಲಿ ಶುಜಾ ಉದ್‌ ದೌಲನು ಫೈಜಾಬಾದನ್ನು ತನ್ನ ಆಡಳಿತ ಕೇಂದ್ರವನ್ನಾಗಿಸಿಕೊಂಡ ನಂತರ ಅಯೋಧ್ಯೆಯು ಧಾರ್ಮಿಕ ಕ್ಷೇತ್ರವಾಗಿಯಷ್ಟೇ ಉಳಿಯಿತು. ಪ್ರಸ್ತುತ ರಾಮ ಜನ್ಮ ಭೂಮಿಯು ಶ್ರೀರಾಮನ ಜನ್ಮಸ್ಥಳವಾದ 'ರಾಮ ಚಬೂತರ್‌', ಸೀತೆ ಅಡುಗೆ ಮಾಡಿದ್ದ ಸ್ಥಳ 'ಸೀತಾ ಕೀರಸೋಯಿ' ಹಾಗೂ ಹನುಮಾನ್‌ ಮಂದಿರಗಳಿಂದ ಕೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ