ಆ್ಯಪ್ನಗರ

ಅಯೋಧ್ಯೆ ಸಂಧಾನ ಮೊದಲ ಸುತ್ತು ಆರಂಭ

ಹೊರಗಿನವರ ಪ್ರವೇಶಕ್ಕೆ ಆಸ್ಪದವಿಲ್ಲದೇ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಅಯೋಧ್ಯೆಯ ಅವಧ್‌ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಂಧಾನ ಪ್ರಕ್ರಿಯೆಗಳು ನಡೆದವು.

Vijaya Karnataka 14 Mar 2019, 8:00 am
ಅಯೋಧ್ಯೆ: ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಇತ್ಯರ್ಥ ಸಂಬಂಧ ಸುಪ್ರೀಂ ಕೋರ್ಟ್‌ ನೇಮಿಸಿರುವ ತ್ರಿ ಸದಸ್ಯರ ಸಂಧಾನ ಸಮಿತಿಯು ಬುಧವಾರ ಮೊದಲ ಸಭೆ ನಡೆಸಿದ್ದು, 25 ಕಕ್ಷಿದಾರರ ಜತೆ ಮಾತುಕತೆ ನಡೆಸಿದೆ.
Vijaya Karnataka Web Rama Mandir


ಹೊರಗಿನವರ ಪ್ರವೇಶಕ್ಕೆ ಆಸ್ಪದವಿಲ್ಲದೇ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಅಯೋಧ್ಯೆಯ ಅವಧ್‌ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಂಧಾನ ಪ್ರಕ್ರಿಯೆಗಳು ನಡೆದವು. ಸಂಧಾನ ಸಮಿತಿ ಸದಸ್ಯರಾಗಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ, ಹಿರಿಯ ವಕೀಲ ಶ್ರೀರಾಮ್‌ ಪಂಚು ಮತ್ತು ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಅವರು ಕಕ್ಷಿದಾರರ ಜತೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಧಾನ ನಡೆಸಿದರು. ಆದರೆ ಇದರ ವಿವರಗಳು ಬಿದ್ದಿಲ್ಲ. ಸಮಿತಿಯ ಅಧಿಕೃತ ಕಾರ್ಯಸೂಚಿಯಂತೆ ಮೂರು ದಿನಗಳ ಕಾಲ ಸಂಧಾನಕಾರರು ಅಯೋಧ್ಯೆಯಲ್ಲಿ ಉಳಿದು ಹಲವು ಸುತ್ತಿನ ಸಂಧಾನ ನಡೆಸಲಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ