ಆ್ಯಪ್ನಗರ

ಭೂಮಿ ಪೂಜೆಯ ಈ 32 ಸೆಕೆಂಡ್‌ಗಳ ಶುಭ ಘಳಿಗೆ ಬಗ್ಗೆ ನಿಮಗೆಷ್ಟು ಗೊತ್ತು?‌

'ಅಭಿಜಿನ್‌' ಮುಹೂರ್ತದಲ್ಲಿ ಭೂಮಿ ಪೂಜೆ ನಡೆಯಲಿದೆ. ಆದರೆ ಈ ಶುಭ ಮುಹೂರ್ತವು ಕೇವಲ 32 ಸೆಕೆಂಡ್‌ ಕಾಲ ಮಾತ್ರ ಇರಲಿದ್ದು, ಅಷ್ಟರಲ್ಲಿ ಶಿಲಾನ್ಯಾಸ ನೆರವೇರ ಬೇಕಿದೆ. ಭೂಮಿ ಪೂಜೆ ನೆರವೇರಿಲಿದೆ ಎಂದು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳಲಿರುವ ಅರ್ಚಕರು ಹೇಳಿದ್ದಾರೆ.

Vijaya Karnataka Web 5 Aug 2020, 12:32 pm
ಅಯೋಧ್ಯೆ: ವಿಘ್ನ ನಿವಾರಣೆಗೆ ಹೆಸರಾದ 'ಅಭಿಜಿನ್‌' ಮುಹೂರ್ತದಲ್ಲಿ ಭೂಮಿ ಪೂಜೆ ನಡೆಯಲಿದೆ. ಆದರೆ ಈ ಶುಭ ಮುಹೂರ್ತವು ಕೇವಲ 32 ಸೆಕೆಂಡ್‌ ಕಾಲ ಮಾತ್ರ ಇರಲಿದ್ದು, ಅಷ್ಟರಲ್ಲಿ ಶಿಲಾನ್ಯಾಸ ನೆರವೇರ ಬೇಕಿದೆ. ಭೂಮಿ ಪೂಜೆ ನೆರವೇರಿಲಿದೆ ಎಂದು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳಲಿರುವ ಅರ್ಚಕರು ಹೇಳಿದ್ದಾರೆ.
Vijaya Karnataka Web Eeo0kg6U8AAS9Yt


ಸರಿಯಾಗಿ 11.40ರ ಬಳಿ ಇರುವ 32 ಸೆಕೆಂಡ್‌ಗಳ ಈ ಸಮಯ ಅತ್ಯಂತ ಪ್ರಮುಖವಾಗಿದೆ. ಅತೀ ಶುದ್ದ ಹಾಗೂ ಶುಭ ಮುಹೂರ್ತವಾಗಿದೆ. ಎಲ್ಲಾ ಶುಭ ಮುಹೂರ್ತಗಳಲ್ಲಿ ಹದಿನಾದರು ಭಾಗ ಇರುತ್ತೆ. ಈ ಹದಿನಾರು ಭಾಗಗಳಲ್ಲಿ ಹದಿನೈದು ಭಾಗ ಅತ್ಯಂತ ಶುದ್ದ ಹಾಗೂ ಶುಭವಾಗಿದೆ.

ಇದೀಗ ಇಂತಹ ಶುಭ ಮಹೂರ್ತದಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯುತ್ತಿದೆ. ಮಂದಿರ ನಿರ್ಮಾಣಕ್ಕೆ ಯಾವುದೇ ರೀತಿಯ ವಿಘ್ನ ಒದಗಬಾರದು ಎನ್ನುವುದು ಕೂಡ ಈ ಮುಹೂರ್ತದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಮುಹೂರ್ತಕ್ಕೂ ಮುನ್ನ ಪೂಜೆ ಕೂಡ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ