ಆ್ಯಪ್ನಗರ

ಜಾಗತಿಕ ಭಯೋತ್ಪಾದಕ ಪಟ್ಟಿಗೆ ಮಸೂದ್‌ ಅಜರ್‌: ಭಾರತದ ಪ್ರಯತ್ನ ಮುಂದುವರಿಕೆ

ಮೊನ್ನೆಯಷ್ಟೇ ಫ್ರಾನ್ಸ್‌, ಅಮೆರಿಕ ಮತ್ತು ಯುಕೆಗಳು ಅಜರ್‌ ವಿರುದ್ಧ ಮಂಡಿಸಿದ್ದ ಪ್ರಸ್ತಾವಕ್ಕೆ ಚೀನಾ ಮತ್ತೆ ತಡೆಯೊಡ್ಡಿತ್ತು. ಕೆಲವು ದಿನಗಳಿಂದ ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ನೆಪವನ್ನೂ ಚೀನಾ ಮುಂದಿಟ್ಟಿತ್ತು.

Vijaya Karnataka Web 16 Mar 2019, 2:58 pm
ಹೊಸದಿಲ್ಲಿ: ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಭಾರತ ಸಹನೆಯಿಂದಿದ್ದು ಪ್ರಯತ್ನ ಮುಂದುವರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Vijaya Karnataka Web Masood Azar


ಮೊನ್ನೆಯಷ್ಟೇ ಫ್ರಾನ್ಸ್‌, ಅಮೆರಿಕ ಮತ್ತು ಯುಕೆಗಳು ಅಜರ್‌ ವಿರುದ್ಧ ಮಂಡಿಸಿದ್ದ ಪ್ರಸ್ತಾವಕ್ಕೆ ಚೀನಾ ಮತ್ತೆ ತಡೆಯೊಡ್ಡಿತ್ತು. ಕೆಲವು ದಿನಗಳಿಂದ ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ನೆಪವನ್ನೂ ಚೀನಾ ಮುಂದಿಟ್ಟಿತ್ತು.

ʼಜೈಷೆ ಮೊಹಮ್ಮದ್‌ ಮುಖ್ಯಸ್ಥ ಮಸೂದ್ ಅಜರ್‌ನನ್ನು ಭದ್ರತಾ ಮಂಡಳಿಯ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಭಾರತ ಮುಂದುವರಿಸಲಿದೆʼ ಎಂದು ಅಧಿಕೃತ ಮೂಲಗಳು ಹೇಳಿವೆ.

ʼಭಯೋತ್ಪಾದನೆ ಎಂಬುದು ಚೀನಾಕ್ಕೂ ಬಹುದೊಡ್ಡ ಸವಾಲಾಗಿದೆ. ಪಾಕಿಸ್ತಾನದೊಳಗೆ ಕಾರ್ಯ ನಿರ್ವಹಿಸುತ್ತಿರುವ ಉಗ್ರ ಸಂಘಟನೆಗಳ ಬಗ್ಗೆ ಚೀನಾಗೆ ಸಂಪೂರ್ಣ ಮಾಹಿತಿಯಿದೆʼ ಎಂದು ಮೂಲಗಳು ತಿಳಿಸಿವೆ.

ಚೀನಾ ಅಡ್ಡಿಪಡಿಸಿದರೂ ಭಾರತ ಸಹನೆಯಿಂದ ತನ್ನ ಪ್ರಯತ್ನ ಮುಂದುವರಿಸುತ್ತದೆ. ಚೀನಾ ತನ್ನದೇ ಹಿತಾಸಕ್ತಿಗಳಿಗಾಗಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂದು ಮೂಲಗಳು ಹೇಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ