ಆ್ಯಪ್ನಗರ

ಬಾಬಾ ಅಮ್ಟೆ ಮೊಮ್ಮಗಳು ಡಾ. ಶೀತಲ್ ಅಮ್ಟೆ ಆತ್ಮಹತ್ಯೆ! ಕಾರಣ ನಿಗೂಢ!

ಸಮಾಜ ಸೇವೆಯಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಬಾಬಾ ಅಮ್ಟೆ ಅವರ ಮೊಮ್ಮಗಳು ಡಾ. ಶೀತಲ್‌ ವಿಕಾಸ್‌ ಆಮ್ಟೆ ಕಾರಜಿಗಿ ಅವರು ಸೋಮವಾರ (ನ.30) ಚಂದ್ರಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka Web 30 Nov 2020, 8:19 pm
ಚಂದ್ರಾಪುರ: ಸಮಾಜ ಸೇವೆಯಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಬಾಬಾ ಅಮ್ಟೆ ಅವರ ಮೊಮ್ಮಗಳು ಡಾ. ಶೀತಲ್‌ ವಿಕಾಸ್‌ ಆಮ್ಟೆ ಕಾರಜಿಗಿ ಅವರು ಸೋಮವಾರ (ನ.30) ಚಂದ್ರಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web Dr Sheetal Amte


ಶೀತಲ್‌ ವಿಕಾಸ್‌ ಅವರು ಪ್ರಸ್ತುತ ಆನಂದ ವನದಲ್ಲಿರುವ 'ಮಹಾರೋಗಿ ಸೇವಾ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದರು. ಅಲ್ಲದೆ ಹೆಸರಾಂತ ವೈದ್ಯೆ ಎನಿಸಿದ್ದರು. ಆದರೆ, ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಕಾರಣ ಏನೆಂಬುದು ತಿಳಿದುಬಂದಿಲ್ಲ.

ವರೋರಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದು, ಶೀತಲ್‌ ವಿಕಾಸ್ ಅವರು ವಿಷದ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರೆಂದು ವೈದ್ಯರು ಘೋಷಿಸಿರುವುದಾಗಿ ವರದಿಗಳು ತಿಳಿಸಿವೆ.

ಬೈಲಹೊಂಗಲ ಪಟ್ಟಣದ ಶೆಟಗಾರ ಚಾಳದಲ್ಲಿ ಒಂದೇ ಮನೆಯ ಇಬ್ಬರು ನೇಣಿಗೆ ಶರಣು

ಡಾ.ಶೀತಲ್ ಇತ್ತೀಚೆಗೆ ಮಹಾರೋಗಿ ಸೇವಾ ಸಮಿತಿಯ ಅಕ್ರಮಗಳ ಬಗ್ಗೆ ಆರೋಪಿಸಿದ್ದರು. ಟ್ರಸ್ಟ್ ಮ್ಯಾನೇಜ್‌ಮೆಂಟ್ ಮತ್ತು ಕುಟುಂಬವನ್ನು ದೂಷಿಸಿದ್ದರು. ಆರೋಪ ಹೊರಿದ್ದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳ ವೈಯಕ್ತಿಕ ಖಾತೆಗಳಲ್ಲಿ ಪೋಸ್ಟ್ ಮಾಡಿ, ನಂತರ ಅದನ್ನು ಎರಡು ಗಂಟೆಗಳಲ್ಲಿ ತೆಗೆದುಹಾಕಲಾಗಿತ್ತು.

ಸಿಎಂ ಬಿಎಸ್‌ವೈ ಪಿಎ ಸಂತೋಷ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌, ಕೊನೆಗೂ ಆತ್ಮಹತ್ಯೆ ಯತ್ನದ ಸತ್ಯ ರಿವೀಲ್‌; ಏನು ಹೇಳಿದ್ರು?

ಆದರೆ, ಡಾ. ಶೀತಲ್ ಅವರ ತಂದೆ ಡಾ. ವಿಕಾಸ್ ಅಮ್ಟೆ ಮತ್ತು ಅವರ ಸಹೋದರ ಡಾ.ಪ್ರಕಾಶ್ ಅಮ್ಟೆ ನವೆಂಬರ್ 22 ರಂದು ಜಂಟಿ ಹೇಳಿಕೆ ನೀಡಿ, ಶೀತಲ್‌ ಅವರ ಆರೋಪಗಳನ್ನು ನಿರಾಕರಿಸಿದ್ದರು. ನ.24ರಂದು ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ಡಾ.ವಿಕಾಸ್ ಅಮ್ಟೆ, ಅವರ ಪತ್ನಿ ಡಾ.ಭಾರತಿ, ಡಾ.ಪ್ರಕಾಶ್ ಅಮ್ಟೆ ಮತ್ತು ಅವರ ಪತ್ನಿ ಡಾ.ಮಂದಾಕಿನಿ ಅಮ್ಟೆ ಅವರ ಸಹಿ ಇತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ