ಆ್ಯಪ್ನಗರ

ಇದೇ ಮೊದಲ ಬಾರಿಗೆ ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಾಂಗ್ಲಾದೇಶ ಸೇನೆ ಭಾಗಿ!

ಬಾಂಗ್ಲಾದೇಶ 50ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಜತೆಗೆ ಬಾಂಗ್ಲಾ ರಾಷ್ಟ್ರಪಿತ ಬಂಗಬಂಧು ಶೇಖ್‌ ಮುಜಿಬುರ್‌ ರಹಮಾನ್‌ ಅವರ ಜಯಂತಿಯ ಶತಮಾನೋತ್ಸವ ಸಂಭ್ರಮದಲ್ಲಿದೆ. ಈ ಅವಧಿಯಲ್ಲೇ ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಸುದೈವ ಎಂದು ಅಲ್ಲಿನ ಸೇನಾಧಿಕಾರಿ ತಿಳಿಸಿದರು.

Vijaya Karnataka Web 25 Jan 2021, 9:55 am
ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಾಂಗ್ಲಾದೇಶದ ಸೈನಿಕರು ಪಾಲ್ಗೊಳ್ಳಲಿದ್ದಾರೆ. ಭಾರತದ ಸಶಸ್ತ್ರ ಪಡೆಗಳ ಜತೆ ಬಾಂಗ್ಲಾದ ಸೈನಿಕರು ಪಥಸಂಚಲನ ತಾಲೀಮು ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಬಾಂಗ್ಲಾದೇಶ ಪಡೆಯ ನೇತೃತ್ವ ವಹಿಸಿರುವ ಮೊಹತ್ಸಿಮ್‌ ಹೈದರ್‌ ಚೌಧರಿ ''ಭಾರತದ 72ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನಮ್ಮ ಸೇನೆಗೆ ಸಂದಾಯವಾದ ದೊಡ್ಡ ಗೌರವ. ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ಬಹುತೇಕ ಸೈನಿಕರು 1971ರ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಸ್ಥಾಪನೆಯಾದ ಸೇನಾ ಪಡೆಗೆ ಸೇರಿದವರು,'' ಎಂದರು.
Vijaya Karnataka Web Full dress rehearsal for the Republic Day parade in New Delhi
Indian Border Security Force (BSF) soldiers ride their camels during the full dress rehearsal for the Republic Day parade in New Delhi, India, January 23, 2021. REUTERS/Adnan Abidi


''ಬಾಂಗ್ಲಾದೇಶ 50ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಜತೆಗೆ ಬಾಂಗ್ಲಾ ರಾಷ್ಟ್ರಪಿತ ಬಂಗಬಂಧು ಶೇಖ್‌ ಮುಜಿಬುರ್‌ ರಹಮಾನ್‌ ಅವರ ಜಯಂತಿಯ ಶತಮಾನೋತ್ಸವ ಸಂಭ್ರಮದಲ್ಲಿದೆ. ಈ ಅವಧಿಯಲ್ಲೇ ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಸುದೈವ,'' ಎಂದು ಅವರು ಹೇಳಿದರು. ಬಾಂಗ್ಲಾದೇಶವು ಭಾರತೀಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ಮೂರನೇ ದೇಶವಾಗಿದ್ದು, ಈ ಹಿಂದೆ 2016ರಲ್ಲಿ ಫ್ರಾನ್ಸ್‌ ಹಾಗೂ 2017ರಲ್ಲಿಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ಸೇನೆ ಭಾಗವಹಿಸಿತ್ತು.

ಭಾರತದ ತೇಜಸ್‌ ಯುದ್ಧ ವಿಮಾನಗಳ‌ ಖರೀದಿಗೆ ಹಲವು ರಾಷ್ಟ್ರಗಳ ಉಮೇದು, ಶೀಘ್ರದಲ್ಲೇ ರಫ್ತು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ