ಆ್ಯಪ್ನಗರ

ಬಾಂಗ್ಲಾ ಅಕ್ರಮ ನುಸುಳುಕೋರರ ಬಂಧನ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಗಾಜಿಯಾಬಾದ್‌ನಲ್ಲಿ ವಾಸಿಸುತ್ತಿದ್ದ ಮೂವರು ಬಾಂಗ್ಲಾ ದೇಶದ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ.

Navbharat Times 30 May 2018, 6:53 pm
ಗಾಜಿಯಾಬಾದ್‌: ನಕಲಿ ದಾಖಲೆಗಳನ್ನು ಸೃಷ್ಟಿಸಿ ಗಾಜಿಯಾಬಾದ್‌ನಲ್ಲಿ ವಾಸಿಸುತ್ತಿದ್ದ ಮೂವರು ಬಾಂಗ್ಲಾ ದೇಶದ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web arrested


ಅಲಂ ಸೇಯಿಖ್‌, ನಾಜುರುಲ್ ಇಸ್ಕಾಂ, ಇಮಾನ್‌ ಹುಸೇನ್‌ ಬಂಧಿತರು.

ಅಲಂ ಸೇಯಿಖ್‌ ಅಮ್ರಪಲ್ಲಿ ಸೊಸೈಟಿಯ ಇಂದಿರಪುರಂನಲ್ಲಿ ವಾಸಿಸುತ್ತಿದ್ದು, ಕರ್ನಾಟಕದ ವಿಳಾಸ ಹೊಂದಿರುವ ಗುರುತು ಚೀಟಿ ಹೊಂದಿದ್ದಾನೆ. ಕಳೆ 17 ವರ್ಷದಿಂದ ದೇಶದಲ್ಲಿ ವಾಸವಿರುವ ಅಲಂ, ರಿಯಲ್‌ ಎಸ್ಟೇಟ್‌ ವ್ಯವಹಾರಗಳನ್ನು ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಮೂವರು ಬಾಂಗ್ಲಾದಿಂದ ಬರುವ ಜನರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರಿಗೆ ಭಾರತೀಯರನ್ನಾಗಿಸಿ, ಗುರುತು ಚೀಟಿಗಳನ್ನು ಕೊಡಿಸುತ್ತಿದ್ದರು. ಮೂವರು ಪಶ್ಚಿಮ ಬಂಗಾಳದ ಮೂಲಕ, ಶಿಕ್ಷಣ ಪಡೆಯುವ ನೆಪದಲ್ಲಿ ಭಾರತಕ್ಕೆ ನುಸುಳಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಆರ್‌ಟಿಒ ಬಳಿ ಅನುಮಾನಾಸ್ಪದವಾಗಿ ಕಂಡು ಬಂದ ಮೂವರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಂಧಿಸಿ ತನಿಖೆ ನಡೆಸಿದಾಗ ಸತ್ಯಾಂಶ ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ