ಆ್ಯಪ್ನಗರ

3ನೇ ಮಗುವಿನಿಂದ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಕತ್ತರಿ

ಮೂರನೇ ಮಗು ಆದ ಕಾರಣಕ್ಕೆ ವಸಾಯ್‌ನಲ್ಲಿರುವ ಕೋ-ಆಪರೇಟಿವ್‌ ಬ್ಯಾಂಕ್‌ನ ಅಧ್ಯಕ್ಷರ ಸ್ಥಾನಕ್ಕೆ ಕುತ್ತು ಬಂದಿದೆ.

Vijaya Karnataka Web 27 Nov 2017, 12:16 pm
ಮುಂಬಯಿ: ಮೂರನೇ ಮಗು ಆದ ಕಾರಣಕ್ಕೆ ವಸಾಯ್‌ನಲ್ಲಿರುವ ಕೋ-ಆಪರೇಟಿವ್‌ ಬ್ಯಾಂಕ್‌ನ ಅಧ್ಯಕ್ಷರ ಸ್ಥಾನಕ್ಕೆ ಕುತ್ತು ಬಂದಿದೆ. ಸೆಕ್ಷನ್‌ 73CA ಆಫ್‌ ಮಹಾರಾಷ್ಟ್ರ ಕೋ ಆಪರೇಟಿವ್‌ ಸೊಸೈಟಿಸ್‌ ಆ್ಯಕ್ಟ್‌ ಪ್ರಕಾರ ಸಂಸ್ಥೆಯಲ್ಲಿ ನಿರ್ದೇಶಕ, ಅಧ್ಯಕ್ಷರಾದವರು ಮೂರನೇ ಮಗು ಮಾಡಿಕೊಳ್ಳುವಂತಿಲ್ಲ.
Vijaya Karnataka Web bank chairman disqualified for breaking two child rule
3ನೇ ಮಗುವಿನಿಂದ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಕತ್ತರಿ


ಸಚಿನ್‌ ಪಿರೇರಾ ಅವರನ್ನು ಬಸೈನ್‌ ಕ್ಯಾಥೊಲಿಕ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಎಸ್‌. ಸಂಕ್ಲೇಚ ಆದೇಶ ಪ್ರಕಟಿಸಿದ್ದಾರೆ. ಸಂಸ್ಥೆಯ ಸದಸ್ಯರಾಗಿ ಚುನಾವಣೆಯ ಶಾಸನಬದ್ಧ ನಿಯಮಗಳನ್ನು ಮೀರಿದ್ದರಿಂದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ.

ಸಚಿನ್‌ ಪಿರೇರಾ ಅವರು 2015ರ ಜೂನ್‌ನಲ್ಲಿ ಐದು ವರ್ಷಗಳ ಅವಧಿಗೆ ಸೊಸೈಟಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಬಳಿಕ ಅಧ್ಯಕ್ಷರಾಗಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಅವರಿಗೆ ಮೂರನೇ ಮಗುವಾಗಿದೆ. ಇದು ಸೊಸೈಟಿ ನಿಯಮಕ್ಕೆ ವಿರುದ್ಧವಾಗಿದೆ. ಹೀಗಾಗಿ ಅವರಿಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಷೋಕಾಸ್‌ ನೋಟಿಸ್‌ ನೀಡಲಾಗಿತ್ತು. ಅವರನ್ನು ಸ್ಥಾನದಿಂದ ಅನರ್ಹಗೊಳಿಸುವಂತೆ ಮಾರ್ಚ್‌ನಲ್ಲಿ ಹೈಕೋರ್ಟ್‌ ಸೂಚಿಸಿತ್ತು, ಆದರೆ ಅವರು ಇದನ್ನು ಪ್ರಶ್ನಿಸಿ ಸಹಕಾರ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆದರೆ ಏನೂ ಪ್ರಯೋಜನವಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ