ಆ್ಯಪ್ನಗರ

ಬನ್ಸಾಲ್‌ ಮನೆಯಲ್ಲಿತ್ತೇ 2.4 ಕೋಟಿ ರೂ.?

ಕಾರ್ಪೊರೆಟ್‌ ವ್ಯವಹಾರಗಳ ಮಹಾ ನಿರ್ದೇಶಕ ಬಿ. ಕೆ ಬನ್ಸಾಲ್‌ ಆತ್ಮಹತ್ಯೆ ಶರಣಾದ ಹಿಂದಿನ ದಿನ, ಅವರ ಮಗ ಯೊಗೇಶ್‌ ತಮ್ಮ ಬಳಿ 2.4 ಕೋಟಿ ಕಪ್ಪುಹಣವಿದೆ ಎಂದು ತೆರಿಗೆ ಅಧಿಕಾರಿಗಳಿಗೆ ತಿಳಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

Vijaya Karnataka Web 5 Oct 2016, 4:00 am

*ಕುಟುಂಬ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

ಹೊಸದಿಲ್ಲಿ: ಕಾರ್ಪೊರೆಟ್‌ ವ್ಯವಹಾರಗಳ ಮಹಾ ನಿರ್ದೇಶಕ ಬಿ. ಕೆ ಬನ್ಸಾಲ್‌ ಆತ್ಮಹತ್ಯೆ ಶರಣಾದ ಹಿಂದಿನ ದಿನ, ಅವರ ಮಗ ಯೊಗೇಶ್‌ ತಮ್ಮ ಬಳಿ 2.4 ಕೋಟಿ ಕಪ್ಪುಹಣವಿದೆ ಎಂದು ತೆರಿಗೆ ಅಧಿಕಾರಿಗಳಿಗೆ ತಿಳಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಯೊಗೇಶ್‌ ಮತ್ತು ಬನ್ಸಾಲ್‌ ಸೆ.27 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಜುಲೈನಲ್ಲಿ ಔಷಧಿ ಕಂಪನಿಯಿಂದ ಲಂಚ ಪಡೆದ ಆರೋಪದ ಮೇರೆಗೆ ಬನ್ಸಾಲರನ್ನು ಬಂಧಿಸಿದಾಗ ಅವರ ಪತ್ನಿ ಮತ್ತು ಮಗಳು ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಒಟ್ಟಾರೆ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದ್ದು, ಸಾಯುವ ಮುನ್ನ ಬನ್ಸಾಲ್‌ ಆರೋಪಿಸಿದಂತೆ ಕುಟುಂಬಕ್ಕೆ ಸಿಬಿಐ ಅಧಿಕಾರಿಗಳು ಕಿರುಕುಳ ನೀಡಿದ್ದರೆ ಎಂದು ತನಿಖೆ ನಡೆಯುತ್ತಿದೆ.

ಯೊಗೇಶ್‌ರ ತೆರಿಗೆ ದಾಖಲೆಗಳ ಪ್ರಕಾರ, ಕುಟುಂಬದ ಅಘೋಷಿತ ಆಸ್ತಿಯ ಮೇಲೆ ಸುಮಾರು ಒಂದು ಕೋಟಿ ರೂಪಾಯಿ ತೆರಿಗೆ ಪಾವತಿ ಬಾಕಿ ಇತ್ತು. ಈ ಘಟನೆ ಏನಾದರೂ ಕುಟುಂಬದ ಆತ್ಮಹತ್ಯೆಗೆ ಕಾರಣವೇ ಎಂದು ತನಿಖೆ ನಡೆಸಲಾಗುತ್ತಿದೆ. ಬನ್ಸಾಲ್‌ ತಮ್ಮ ಕುಟುಂಬದ ಹೆಣ್ಣು ಮಕ್ಕಳು ನೇಣಿಗೆ ಶರಣಾಗಲು ತನಿಖಾಧಿಕಾರಿಗಳ ಕಿರುಕುಳವೇ ಕಾರಣ ಎಂದು ಐದು ಜನ ಸಿಬಿಐ ಅಧಿಕಾರಿಗಳನ್ನು ಹೆಸರಿಸಿದ್ದರು.

ಸಿಬಿಐ ಬನ್ಸಾಲ್‌ರ ಬಂಧನದ ಮಾರನೆ ದಿನ ಯೊಗೇಶ್‌ ಮತ್ತು ಅವರ ತಾಯಿ ಬ್ಯಾಂಕ್‌ ಲಾಕರ್‌ಗಳನ್ನು ಬಳಸಿದ್ದ ಸಿಸಿಟಿವಿ ಫೂಟೇಜ್‌ಗಳನ್ನು ಗಮನಿಸುತ್ತಿದೆ. ಈ ಫೂಟೇಜ್‌ಗಳಿಂದ ಬನ್ಸಾಲ್‌ ಕುಟುಂಬದ ಬಳಿ ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯಿದೆ ಎಂದು ತಿಳಿದು ಬಂದು ಅವರ ಮನೆಯ ಮೇಲೆ ಎರಡನೇ ಬಾರಿ ಐಟಿ ದಾಳಿ ನಡೆದಿತ್ತು. ಒಟ್ಟಾರೆ 30 ಬ್ಯಾಂಕ್‌ ಲಾಕರ್‌ಗಳಲ್ಲಿ 19 ಲಾಕರ್‌ಗಳನ್ನು ಯೊಗೇಂದ್ರ ಮತ್ತು ಅವರ ತಾಯಿ ಬಳಸಿದ್ದರು.

ಆತ್ಮಹತ್ಯೆಗೆ ಶರಣಾಗುವ ಮುನ್ನ ತಾವು ಅಘೋಷಿತ ಆಸ್ತಿಯ ಮೇಲೆ ಸುಮಾರು ಒಂದು ಕೋಟಿ ತೆರಿಗೆ ಪಾವತಿಸುವುದು ಬಾಕಿ ಇದೆ ಎಂದು ಯೊಗೇಶ್‌ ತಿಳಿಸಿದ್ದ, ಅದಲ್ಲದೆ ಕಪ್ಪು ಹಣವನ್ನು ಅಡಗಿಸಿಟ್ಟ ಜಾಗದ ಸುಳಿವನ್ನು ಸಿಬಿಐಗೆ ತಿಳಿಸಿದ್ದ ಎಂದು ಶಂಕಿಸಲಾಗಿದೆ.

ಒಟ್ಟಾರೆ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಕೆರೆಳಿಸುತ್ತಿದ್ದು, ಪ್ರಕರಣದ ತನಿಖೆಯನ್ನು ಜಂಟಿ ನಿರ್ದೇಶಕ ಜೆ.ಪಿ ಅಗರ್‌ವಾಲ್‌ ಅವರಿಗೆ ವಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ