ಆ್ಯಪ್ನಗರ

ಅಪಾಯಕ್ಕೆ ಸಿದ್ಧರಾಗಿದ್ದ ವಾಜಪೇಯಿ

ಸಿನ್ಹಾ ಅವರು ಸೋಮವಾರ ಲೋಕಾರ್ಪಣೆಗೊಳ್ಳಲಿರುವ ತಮ್ಮ ಆತ್ಮಚರಿತ್ರೆ 'ರಿಲೆಂಟ್‌ಲೆಸ್‌'ನಲ್ಲಿ ವಾಜಪೇಯಿ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದು, ಆ ಅಧ್ಯಾಯದಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ.

PTI 15 Jul 2019, 5:00 am
ಹೊಸದಿಲ್ಲಿ: ಪೋಖ್ರಣ್‌ನಲ್ಲಿ ಅಣ್ವಸ್ತ್ರ ಪರೀಕ್ಷೆಗೂ ಮುನ್ನ ಬಲಿಷ್ಠ ರಾಷ್ಟ್ರಗಳಿಂದ ಆರ್ಥಿಕ ನಿರ್ಬಂಧದಂತಹ ಪರಿಣಾಮಗಳಿಗೆ ಸಿದ್ಧರಾಗಿರುವಂತೆ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹಣಕಾಸು ಸಚಿವರಾಗಿದ್ದ ಯಶವಂತ್‌ ಸಿನ್ಹಾ ಅವರಿಗೆ ಕಿವಿಮಾತು ಹೇಳಿದ್ದರು. ಸಿನ್ಹಾ ಅವರು ಸೋಮವಾರ ಲೋಕಾರ್ಪಣೆಗೊಳ್ಳಲಿರುವ ತಮ್ಮ ಆತ್ಮಚರಿತ್ರೆ 'ರಿಲೆಂಟ್‌ಲೆಸ್‌'ನಲ್ಲಿ ವಾಜಪೇಯಿ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದು, ಆ ಅಧ್ಯಾಯದಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ. ''1998ರ ಮೇ ಆರಂಭದಲ್ಲಿ ಒಂದು ದಿನ ಬೆಳಗ್ಗೆಯೇ ವಾಜಪೇಯಿ ಅವರು ತಮ್ಮ ನಿವಾಸಕ್ಕೆ ನನ್ನನ್ನು ತುರ್ತಾಗಿ ಬರಹೇಳಿದ್ದರು. ಅವರ ಖಾಸಗಿ ಕೋಣೆಯಲ್ಲಿದ್ದರು. ಆಗಲೇ ಇದ್ಯಾವುದೋ ರಹಸ್ಯ ವಿಚಾರವೇ ಇರಬೇಕು ಎಂದು ತೀರ್ಮಾನಿಸಿದ್ದೆ. ವಾಜಪೇಯಿ ಅವರು ಅಣ್ವಸ್ತ್ರ ಪರೀಕ್ಷೆ ಬಗ್ಗೆ ಹೇಳಿದ ಮಾತು ಕೇಳಿ ನನಗೆ ಒಂದು ಕಡೆ ನಡುಕ ಮತ್ತೊಂದು ಕಡೆ ಹೆಮ್ಮೆಯಾಗಿತ್ತು,'' ಎಂದು ಸಿನ್ಹಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ