ಆ್ಯಪ್ನಗರ

ಸ್ವಚ್ಛ ರೈಲ್ವೆ ನಿಲ್ದಾಣ: ವಿಶಾಖಪಟ್ಟಣಂ ನಂ.1, ಬೆಂಗಳೂರಿಗೆ 10ನೇ ಸ್ಥಾನ

ರೈಲ್ವೆ ಇಲಾಖೆ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯನ್ನು ಪ್ರಕಟಿಸಿದ್ದು, ರಾಜಧಾನಿ ಬೆಂಗಳೂರು ರೈಲು ನಿಲ್ದಾಣ ದೇಶದ 10ನೇ ಸ್ವಚ್ಛ ರೈಲು ನಿಲ್ದಾಣ ಎಂಬ ಖ್ಯಾತಿ ಪಡೆದುಕೊಂಡಿದೆ.

ಟೈಮ್ಸ್ ಆಫ್ ಇಂಡಿಯಾ 18 May 2017, 12:56 pm
ಹೊಸದಿಲ್ಲಿ: ರೈಲ್ವೆ ಸಚಿವಾಲಯ ಹೆಚ್ಚು ಜನಜಂಗುಳಿ ಇರುವ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿ ಪ್ರಕಟಿಸಿದ್ದು, ವಿಶಾಖಪಟ್ಟಣಂಗೆ ಮೊದಲ ಸ್ಥಾನ ಸಿಕ್ಕರೆ, ನಮ್ಮ ಬೆಂಗಳೂರು 10ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾಗಿದೆ.
Vijaya Karnataka Web beas vizag cleanest railway stations in india
ಸ್ವಚ್ಛ ರೈಲ್ವೆ ನಿಲ್ದಾಣ: ವಿಶಾಖಪಟ್ಟಣಂ ನಂ.1, ಬೆಂಗಳೂರಿಗೆ 10ನೇ ಸ್ಥಾನ


ದೇಶದ 407 ರೈಲು ನಿಲ್ದಾಣಗಳ ಪೈಕಿ ಅತ್ಯಂತ ಹೆಚ್ಚು ಕಾರ್ಯನಿರ್ವಹಿಸುವ, ಜನಜಂಗುಳಿ ಇರುವ 75 ರೈಲು ನಿಲ್ದಾಣಗಳಲ್ಲಿ ವಿಶಾಖಪಟ್ಟಣಂ ಮತ್ತು ಖಮ್ಮಮ್ ರೈಲು ನಿಲ್ದಾಣ ದೇಶದ ಅತ್ಯಂತ ಸ್ವಚ್ಛ ರೈಲು ನಿಲ್ದಾಣ ಎಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಖಂದರಾಬಾದ್ 2ನೇ ಹಾಗೂ ಜಮ್ಮು ಕಾಶ್ಮೀರ ರೈಲು ನಿಲ್ದಾಣಕ್ಕೆ ಮೂರನೇ ಸ್ಥಾನ ಲಭಿಸಿದೆ. ಬಿಹಾರದ ದರ್ಭಂಗ ಅತ್ಯಂತ ಕೊಳಕು ರೈಲು ನಿಲ್ದಾಣ ಎಂಬ ಅಪಖ್ಯಾತಿಗೆ ಗುರಿಯಾಗಿದೆ.

ಈ ಸ್ವಚ್ಛತಾ ಪಟ್ಟಿಯಲ್ಲಿ ರಾಷ್ಟ್ರರಾಜಧಾನಿ ಹೊಸದಿಲ್ಲಿ 39ನೇ ಸ್ಥಾನ, ಹೈದರಾಬಾದ್ 16ನೇ ಸ್ಥಾನ, ಮುಂಬಯಿ ಸೆಂಟ್ರಲ್ 27ನೇ ಸ್ಥಾನ ಹಾಗೂ ಚೆನ್ನೈ ಸೆಂಟ್ರಲ್ 29ನೇ ಸ್ಥಾನ ಪಡೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ವಾರಾಣಾಸಿಯ ರೈಲು ನಿಲ್ದಾಣ 14ನೇ ಸ್ಥಾನ ಪಡೆದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಪ್ರತಿನಿಧಿಸುವ ಗೋರಖ್‌ಪುರ್ ರೈಲು ನಿಲ್ದಾಣ 12ನೇ ಸ್ಥಾನ ಪಡೆದುಕೊಂಡಿದೆ.

ರೈಲು ನಿಲ್ದಾಣಗಳ ಶೌಚಾಲಯ, ರೈಲು ಹಳಿಗಳ ಸ್ವಚ್ಛತೆ ಸೇರಿದಂತೆ ನಿಲ್ದಾಣಗಳಲ್ಲಿರುವ ಕಸದ ಬುಟ್ಟಿಯ ಶುಚಿತ್ವದ ಆಧಾರದ ಮೇಲೆ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಸಮೀಕ್ಷೆ ನಡೆಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ