ಆ್ಯಪ್ನಗರ

ದಕ್ಷಿಣೇಶ್ವರದಲ್ಲಿ ಅಂತ್ಯ ಕಾಣಲಿದೆ ಶತಮಾನದ ದೋಣಿ ಸಂಚಾರ!

ಇತಿಹಾಸ ಪ್ರಸಿದ್ಧ ದಕ್ಷಿಣೇಶ್ವರ ದೇವಾಲಯ ಮತ್ತು ಬೇಲೂರು ಪಟ್ಟಣದ ನಡುವೆ ಸುಮಾರು ಶತಮಾನಗಳಿಗೂ ಹಿಂದಿನಿಂದ ಸಂಬಂಧ ಕಲ್ಪಿಸುತ್ತಿದ್ದ ದೋಣಿ ಸೇವೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲು ಕೋಲ್ಕೊತ್ತ ಸರಕಾರ ನಿರ್ಧರಿಸಿದೆ.

ಈ ಸಮಯ್, ಬಂಗಾಳಿ 13 Nov 2017, 10:50 pm
ಕೋಲ್ಕತ್ತ: ಇತಿಹಾಸ ಪ್ರಸಿದ್ಧ ದಕ್ಷಿಣೇಶ್ವರ ದೇವಾಲಯ ಮತ್ತು ಬೇಲೂರು ಪಟ್ಟಣದ ನಡುವೆ ಸುಮಾರು ಶತಮಾನಗಳಿಗೂ ಹಿಂದಿನಿಂದ ಸಂಬಂಧ ಕಲ್ಪಿಸುತ್ತಿದ್ದ ದೋಣಿ ಸೇವೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲು ಕೋಲ್ಕೊತ್ತ ಸರಕಾರ ನಿರ್ಧರಿಸಿದೆ.
Vijaya Karnataka Web belur dakshineswar boat servive
ದಕ್ಷಿಣೇಶ್ವರದಲ್ಲಿ ಅಂತ್ಯ ಕಾಣಲಿದೆ ಶತಮಾನದ ದೋಣಿ ಸಂಚಾರ!


ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಮತ್ತು ಶಾರದಾ ದೇವಿ ಅಂದಿನ ಕಾಲದಲ್ಲಿ ಸಂಚಾರಕ್ಕೆ ನಿರ್ಮಿಸಲ್ಪಟ್ಟಿರುವ ಶತಮಾನ ಹಳೆಯ ದೋಣಿ ಮಾರ್ಗವನ್ನು ಇದೀಗ ಸ್ಥಗಿತಗೊಳಿಸುವ ಚಿಂತನೆ ಸರಕಾರ ನಡೆಸಿದ್ದು, 1939ರಲ್ಲಿ ನಿರ್ಮಿತವಾಗಿರುವ ದಿ ವಿಲ್ಲಿಂಗ್ಟನ್‌ ಬ್ರಿಡ್ಜ್‌ನ್ನು ವಿವೇಕಾನಂದ ಬ್ರಿಡ್ಜ್‌ ಎಂದು ಮರುನಾಮಕರಣ ಮಾಡಿ ಅಲ್ಲಿಂದಲೇ ಬೇಲೂರು ಮತ್ತು ದಕ್ಷಿಣೇಶ್ವರಕ್ಕೆ ಸಂಪರ್ಕ ಕಲ್ಪಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸುಬೇಂದು ಅಧಿಕಾರಿ ತಿಳಿಸಿದ್ದಾರೆ.


ಈ ಯೋಜನೆ ಆರಂಭಿಸಲು ನಿರ್ಧರಿಸಿರುವ ಸರಕಾರ, ಪ್ರಸಕ್ತ ದೋಣಿ ಮಾರ್ಗದಲ್ಲಿರುವ 40 ದೋಣಿಯ ಅಂಬಿಗರಿಗೆ ಸರಕಾರಿ ಉದ್ಯೋಗ ನೀಡಲು ಮುಂದಾಗಿದೆ. ಆದರೆ ಒಂದು ದೋಣಿಯಿಂದ ಕೇವಲ ಒಬ್ಬನಿಗೆ ಮಾತ್ರ ಸರಕಾರಿ ಕೆಲಸ ದೊರೆಯುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಬೇಲೂರು ಮತ್ತು ದಕ್ಷಿಣೇಶ್ವರನನ್ನು ತಲುಪಲು ಗಂಗಾ ನದಿಯನ್ನು ದಾಟಬೇಕಿದೆ. ಈ ದೋಣಿ ಮಾರ್ಗವು ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತದೆ. ಆದರೆ ಇದು ಹೆಚ್ಚು ಸುರಕ್ಷಿತ ಪ್ರಯಾಣಕ್ಕಾಗಿ ಲಾಂಜ್‌ ಸೇವೆಯನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ.

ಸರಕಾರ ಈ ಕ್ರಮದಿಂದ ಅಂಬಿಗರೂ ಸಂತಸ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ