ಆ್ಯಪ್ನಗರ

ಕಣ್ಮುಂದಿನ ಅನ್ಯಾಯ ವಿರೋಧಿಸದೆ ಇರುವವರು ದ್ರೋಹಿಗಳು: ಸೋನಿಯಾ, ಪ್ರಿಯಾಂಕ ಗಾಂಧಿ

ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಎಲ್ಲರೂ ಹೋರಾಡ ಬೇಕಿದೆ. ಕಣ್ಣ ಮುಂದೆ ಅನ್ಯಾಯ ನಡೆಯುತ್ತಿದ್ದರೂ ನ್ಯಾಯಕ್ಕಾಗಿ ಹೋರಡದೆ ಇರುವವರು ದ್ರೋಹಿಗಳು ಎಂದು ಭಾರತ್‌ ಬಚಾವೋ ರ್ಯಾಲಿಯಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Vijaya Karnataka Web 14 Dec 2019, 4:57 pm
ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಕೊನೆಯುಸಿರು ಇರುವವರೆಗೂ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಉಳಿಸಲು ಹೋರಾಡುತ್ತೆವೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು. ರಾಮ್‌ ಲೀಲಾ ಮೈದಾನದಲ್ಲಿ ಶನಿವಾರ ನಡೆದ 'ಭಾರತ್‌ ಬಚಾವೋ' ರ್ಯಾಲಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಪ್ರಜಾ ಪ್ರಭುತ್ವ ಉಳಿಸಲು ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಕರೆ ನೀಡಿದರು.
Vijaya Karnataka Web Soniya Priyanka


ಭಾರತದ ಇಂದಿನ ಪರಿಸ್ಥಿತಿ 'ಅಂಧೇರ್‌ ನಗರಿ ಚೌಪತ್‌ ರಾಜ' (ಗೊಂದಲದಲ್ಲಿರುವ ರಾಜ, ಗಲಿಬಿಲಿಗೊಂಡ ರಾಜ್ಯ) ಎಂಬಂತಿದೆ. ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಎಲ್ಲಿದೆ ಎಂದು ಸಂಪೂರ್ಣ ರಾಷ್ಟ್ರ ಪ್ರಶ್ನಿಸುತ್ತಿದೆ. ಅನ್ಯಾಯವನ್ನು ಸಹಿಸಿಕೊಂಡಿರುವುದು ಅತಿದೊಡ್ಡ ಅಪರಾಧ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕಾದ ಸಮಯ ಬಂದಿದೆ. ಇದಕ್ಕಾಗಿ ಎಲ್ಲರೂ ಕಠಿಣ ಪರಿಶ್ರಮ ಪಡಬೇಕಿದೆ ಎಂದರು.

ಮೋದಿ-ಶಾ ಸರಕಾರ ಸಂವಿಧಾನ ಮತ್ತು ವ್ಯವಸ್ಥೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅವರ ಮೂಲ ಉದ್ದೇಶ ರಾಷ್ಟ್ರದ ಮುಂದಿರುವ ಪ್ರಸ್ತುತ ಸಮಸ್ಯೆಗಳನ್ನು ಮರೆಮಾಚುವುದು ಮತ್ತು ರಾಷ್ಟ್ರದ ಪ್ರಜೆಗಳನ್ನು ಹೋರಾಟದಲ್ಲಿರಿಸುವುದಾಗಿದೆ. ಪ್ರತಿದಿನ ಸಂವಿಧಾನದ ಮೇಲೆ ಹಲ್ಲೆ ನಡೆಸುತ್ತಿದೆ. ಇದರ ಜತೆಗೆ ಸಂವಿಧಾನ ದಿನವನ್ನು ಆಚರಿಸುತ್ತಿದೆ ಎಂದು ಸೋನಿಯಾ ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದರು.

'ಕ್ಷಮೆ ಕೇಳಲು ನಾನು ರಾಹುಲ್‌ ಸಾವರ್ಕರ್‌ ಅಲ್ಲ, ರಾಹುಲ್‌ ಗಾಂಧಿ'; ಬಿಜೆಪಿಗರಿಗೆ ತಿರುಗೇಟು

ರಾಷ್ಟ್ರದಲ್ಲಿನ ಅನ್ಯಾಯದ ವಿರುದ್ಧ ಹೋರಾಡದೆ ಇರುವವರು ದ್ರೋಹಿಗಳು: ಪ್ರಿಯಾಂಕ ಗಾಂಧಿ
ರಾಷ್ಟ್ರದಲ್ಲಿ ಕಣ್ಣ ಮುಂದೆಯೇ ಅನ್ಯಾಯ ನಡೆಯುತ್ತಿದ್ದರೂ ನ್ಯಾಯಕ್ಕಾಗಿ ಹೋರಾಡದೆ ಇರುವವರು ದ್ರೋಹಿಗಳು ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಮ್‌ ಲೀಲಾ ಮೈದಾನದಲ್ಲಿ ಶನಿವಾರ ನಡೆದ 'ಭಾರತ್‌ ಬಚಾವೋ' ರ್ಯಾಲಿಯಲ್ಲಿ ಪ್ರಿಯಾಂಕ ಗಾಂಧಿ ಕೇಂದ್ರ ಸರಕಾರದ ದೋರಣೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಪೌರತ್ವ ವಿಧೇಯಕ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಗೆ ಜೈರಾಮ್‌ ರಮೇಶ್‌ ಅರ್ಜಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ