ಆ್ಯಪ್ನಗರ

ಪೆಟ್ರೋಲ್‌ ದರ ಏರಿಕೆ ಖಂಡಿಸಿ ಫೆ.26ಕ್ಕೆ ಭಾರತ್‌ ಬಂದ್: 40,000 ಸಂಘಟನೆಗಳಿಂದ ಬೆಂಬಲ

ಪೆಟ್ರೋಲ್‌, ಡೀಸೆಲ್ ಬೆಲ ಏರಿಕೆ, ಹೊಸ ಇ-ಬಿಲ್‌ ಹಾಗೂ ಜಿಎಸ್‌ಟಿ ವಿರೋಧಿಸಿ ಫೆಬ್ರವರಿ 26 ರಂದು ಭಾರತ್‌ ಬಂದ್‌ಗೆ ವ್ಯಾಪಾರಿ ಸಂಘಟನೆಗಳು ಕರೆ ಕೊಟ್ಟಿವೆ. ಇದರಿಂದ ಸಾಮಾನ್ಯ ಜನ ಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.

Vijaya Karnataka Web 25 Feb 2021, 1:26 pm

ಹೈಲೈಟ್ಸ್‌:

  • ದೇಶದ 40,000ಕ್ಕೂ ಹೆಚ್ಚು ವ್ಯಾಪಾರಿ ಸಂಘಟನೆಗಳಿಂದ ನಾಳೆ ಭಾರತ್‌ ಬಂದ್‌
  • ಪೆಟ್ರೋಲ್‌, ಡೀಸೆಲ್ ಬೆಲ ಏರಿಕೆ, ಹೊಸ ಇ-ಬಿಲ್‌ ಹಾಗೂ ಜಿಎಸ್‌ಟಿ ವಿರೋಧಿಸಿ ಮುಷ್ಕರ
  • ಖಾಸಗಿ ಸಾರಿಗೆ, ವಾಣಿಜ್ಯ ಮಾರುಕಟ್ಟೆ ಬಂದ್ ಆಗುವ ಸಾಧ್ಯತೆ ಇದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೊಸ ದಿಲ್ಲಿ: ಇಂಧನ ಬೆಲ ಏರಿಕೆ ವಿರೋಧಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಸಲು ಆಗ್ರಹಿಸಿಸಿ ಅಖಿಲ ಭಾರತ ವ್ಯಾಪಾರಿ ಮಹಾ ಒಕ್ಕೂಟ ಶುಕ್ರವಾರ (ಫೆಬ್ರವರಿ 26) ರಂದು ಭಾರತ್‌ ಬಂದ್‌ಗೆ ಕರೆ ಕೊಟ್ಟಿದೆ.
ವ್ಯಾಪಾರಿ ಮಹಾಸಭಾದ ಬಂದ್‌ ಕರೆಗೆ ಸುಮಾರು 40,000 ರಷ್ಟು ವ್ಯಾಪಾರಿ ಸಂಘಟನೆಗಳು ಬೆಂಬಲ ನೀಡಿದ್ದು, ದೇಶದ ಹಲವು ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ಥವಾಗುವ ಸಾಧ್ಯತೆ ಇದೆ.

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ, ಹೊಸ ಇ-ಬಿಲ್‌ ಹಾಗೂ ಜಿಎಸ್‌ಟಿ ವಿರೋಧಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ. ಸಾರಿಗೆ ಕಂಪನಿಗಳ ಅತೀ ದೊಡ್ಡ ಒಕ್ಕೂಟವಾದ ಅಖಿಲ ಭಾರತ ಸಾರಿಗೆ ಕಲ್ಯಾಣ ಒಕ್ಕೂಟ ದೇಶಾದ್ಯಂತ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವುದಾಗಿ ಹೇಳಿದೆ.

ಬೆಂಗಳೂರಿನಲ್ಲಿ ₹50 ಗಿಂತ ಕಡಿಮೆಗೆ ಪೆಟ್ರೋಲ್‌ ಸಿಗೋದಿಲ್ಲ: ಬಂಕ್‌ ಮಾಲಿಕರಿಂದ ಹೊಸ ನಿಯಮ
ಅಂತಾರಾಜ್ಯ ಸರಕು ಸಾಗಣಿಕೆಗೆ ಕೇಂದ್ರ ಸರ್ಕಾರ 2018ರಲ್ಲಿ ಈ ಬಿಲ್‌ ವ್ಯವಸ್ಥೆ ಜಾರಿಗೆ ತಂದಿತ್ತು. ಇದನ್ನು ರದ್ದು ಮಾಡಬೇಲು. ಇಲ್ಲದಿದ್ದರೇ ಅದರಲ್ಲಿರುವ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿ ಈ ಬಂದ್‌ಗೆ ಕರೆ ಕೊಟ್ಟಿದೆ. ಅಲ್ಲದೇ ಇಂಧನದ ಮೇಲೆ ವಿಧಿಸಲಾಗಿರುವ ಭಾರೀ ಪ್ರಮಾಣದ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ವ್ಯಾಪಾರಿ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಕೋರಿಕೊಂಡಿದೆ.

ಎಲ್ಲಾ ರಾಜ್ಯಗಳ ವ್ಯಾಪಾರಿ ಸಂಘಟನೆಗಳು ಈ ಬಂದ್‌ ಅನ್ನು ಬೆಂಬಲಿಸಿದ್ದು, ನಾಳೆ ಬೆಳಿಗ್ಗೆ 6 ರಿಂದ 8 ಗಂಟೆ ವರೆಗೆ ಎಲ್ಲಾ ಸಾರಿಗೆಗಳು ಕಾರ್ಯಾಚರಣೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿವೆ. ಎಲ್ಲಾ ಸಾರಿಗೆ ಗೋದಾಮುಗಳಲ್ಲಿ ಬ್ಯಾನರ್‌ ಪ್ರದರ್ಶಿಸಲಾಗುತ್ತದೆ ಎಂದು ಪ್ರತಿಭಟನಾಕಾರರು ಮಾಹಿತಿ ನೀಡಿದ್ದಾರೆ.

ಅಲ್ಲದೇ ಜಿಎಸ್‌ಟಿಯನ್ನು ಅತ್ಯಂತ ಕ್ಲಿಸ್ಟಕರ ತೆರಿಗೆ ವ್ಯವಸ್ಥೆ ಎಂದಿರುವ ಹೋರಾಟಗಾರರು, ಜಿಎಸ್‌ಟಿಯಡಿ ವಿಧಿಸುತ್ತಿರುವ ತೆರಿಗೆಗಳನ್ನು ಪುನರ್‌ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕ ಇಳಿಸಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆರ್‌ಬಿಐ ಸೂಚನೆ
ಬೆಳಿಗ್ಗೆ 6 ರಿಂದ 8 ಗಂಟೆ ವರೆಗೆ ಎಲ್ಲಾ ಸಾರಿಗೆಗಳು ಸ್ಥಬ್ದಗೊಳ್ಳುವ ಸಾಧ್ಯತೆ ಇರುವುದರಿಂದ ನಾಳೆ ಖಾಸಗಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಬಂದ್‌ ಆಗಲಿದೆ. ಸಾರಿಗೆ ಬುಕ್ಕಿಂಗ್‌ ಹಾಗೂ ಇ-ಬಿಲ್‌ ಆಧಾರಿತ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ದೇಶದ 1,500 ಸ್ಥಳಗಳಲ್ಲಿ ಧರಣಿ ನಡೆಯುವುದರಿಂದ ಸಮಾನ್ಯ ಜನ ಜೀವನ ಅಸ್ತವ್ಯಸ್ಥವಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ