Please enable javascript.Bharat Jodo Yatra,Bharat Jodo Yatra | ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಶ್ರೀರಾಮನ ಲಂಕಾ ಯಾತ್ರೆಗಿಂದ ದೊಡ್ಡದು: ಕಾಂಗ್ರೆಸ್‌ ನಾಯಕ - bharat jodo yatra rahul gandhi's bharat jodo yatra bigger than lord rama's padyatra rajasthan minister - Vijay Karnataka

Bharat Jodo Yatra | ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಶ್ರೀರಾಮನ ಲಂಕಾ ಯಾತ್ರೆಗಿಂದ ದೊಡ್ಡದು: ಕಾಂಗ್ರೆಸ್‌ ನಾಯಕ

Edited byಸಿನಾನ್\u200c ಇಂದಬೆಟ್ಟು | Vijaya Karnataka Web 18 Oct 2022, 5:12 pm
Subscribe

Rahul Gandhi's Bharat Jodo Yatra - ರಾಹುಲ್‌ ಗಾಂಧಿ ಅವರು ಮುನ್ನಡೆಸುತ್ತಿರುವ ಭಾರತ್‌ ಜೋಡೋ ಯಾತ್ರೆ ವಿಶಿಷ್ಟ ಹಾಗೂ ಐತಿಹಾಸಿಕ. ಈ ಯಾತ್ರೆಯು ರಾಮ ಆಯೋಧ್ಯೆಯಿಂದ ಶ್ರೀಲಂಕಾವರೆಗೆ ಮಾಡಿದ ಪಾದಯಾತ್ರೆಗಿಂದ ಭಾರಿ ದೊಡ್ಡದು. ರಾಮ ಅಯೋಧ್ಯೆಯಿಂದ ಶ್ರೀಲಂಕಾಗೆ ಪಾದಯಾತ್ರೆ ಮಾಡಿದ್ದ. ಈಗ ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದ ವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ' ಎಂದು ರಾಜಸ್ಥಾನದ ಆರೋಗ್ಯ ಸಚಿವ ಪ್ರಸಾದಿ ಲಾಲ್‌ ಮೀನಾ ಅವರು ಹೇಳಿದ್ದಾರೆ.

bharat jodo yatra rahul gandhis bharat jodo yatra bigger than lord ramas padyatra rajasthan minister
Bharat Jodo Yatra | ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಶ್ರೀರಾಮನ ಲಂಕಾ ಯಾತ್ರೆಗಿಂದ ದೊಡ್ಡದು: ಕಾಂಗ್ರೆಸ್‌ ನಾಯಕ
ಜೈಪುರ: ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆ 'ವಿಶಿಷ್ಟ ಹಾಗೂ ಐತಿಹಾಸಿಕ' ಎಂದು ಬಣ್ಣಿಸಿರುವ ರಾಜಸ್ಥಾನ ಆರೋಗ್ಯ ಸಚಿವ ಪ್ರಸಾದಿ ಲಾಲ್‌ ಮೀನಾ ಅವರು, ಇದು ರಾಮನ ಲಂಕಾ ಯಾತ್ರೆಗಿಂದ ದೊಡ್ಡದು ಎಂದು ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, 'ರಾಹುಲ್‌ ಗಾಂಧಿ ಅವರು ಮುನ್ನಡೆಸುತ್ತಿರುವ ಭಾರತ್‌ ಜೋಡೋ ಯಾತ್ರೆ ವಿಶಿಷ್ಟ ಹಾಗೂ ಐತಿಹಾಸಿಕ. ಈ ಯಾತ್ರೆಯು ರಾಮ ಆಯೋಧ್ಯೆಯಿಂದ ಶ್ರೀಲಂಕಾವರೆಗೆ ಮಾಡಿದ ಪಾದಯಾತ್ರೆಗಿಂದ ಭಾರಿ ದೊಡ್ಡದು' ಎಂದು ಹೇಳಿದ್ದಾರೆ.

Bharat Jodo Yatra: ಭಾರತ್ ಜೋಡೋ ಯಾತ್ರೆಯಲ್ಲಿ ಮಕ್ಕಳ ದುರ್ಬಳಕೆ: ಕಾಂಗ್ರೆಸ್ ವಿರುದ್ಧ ದೂರು

'ಶ್ರೀರಾಮ ಅಯೋಧ್ಯೆಯಿಂದ ಶ್ರೀಲಂಕಾಗೆ ಪಾದಯಾತ್ರೆ ಮಾಡಿದ್ದ. ಈಗ ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದ ವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ರಾಹುಲ್‌ ಗಾಂಧಿ ಪಾದಯತ್ರೆ
ಸೆಪ್ಪೆಂಬರ್‌ 30 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ಭಾರತ್‌ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶ ಮಾಡಿತ್ತು. 21 ದಿನಗಳ ಕಾಲ ಈ ಯಾತ್ರೆ ರಾಜ್ಯದಾದ್ಯಂತ 511 ಕಿಲೋ ಮೀಟರ್‌ ಸಂಚಾರ ಮಾಡಲಿದೆ. ಮೂರು ಹಂತಗಳಲ್ಲಿ 7 ಲೋಕಸಭಾ ಕ್ಷೇತ್ರಗಳು, 20 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ್ ಜೋಡೋ ಯಾತ್ರೆ ಸಂಚಾರ ಮಾಡಲಿದ್ದು, ಇದೀಗ ಬಳ್ಳಾರಿಗೆ ತಲುಪಿದೆ. ಅಕ್ಟೋಬರ್ 15 ರಂದು ಬಳ್ಳಾರಿಯಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ನಡೆದಿದೆ.

ಮೊದಲನೇ ಹಂತದ ಪಾದಯಾತ್ರೆ ತಮಿಳುನಾಡಿನಿಂದ ಗುಂಡ್ಲುಪೇಟೆ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಿದ್ದು, ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಸಂಚರಿಸಿದೆ. ನಂತರ ಮೇಲುಕೋಟೆಯಿಂದ ರಂಗನಾಥಪುರದ ಮೂಲಕ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡಿದೆ. ರಂಗನಾಥಪುರದಿಂದ ತುಮಕೂರಿನ ತುರುವೇಕೆರೆ, ಅಲ್ಲಿಂದ ಚಿಕ್ಕನಾಯಕನಹಳ್ಳಿ ಹುಳಿಯಾರ್ ಮೂಲಕ ಚಿತ್ರದುರ್ಗ ಹಿರಿಯೂರಿಗೆ ಪಾದಯಾತ್ರೆ ತೆರಳಿದ್ದು, ಹಿರಿಯೂರಿನಿಂದ ಚಳ್ಳಕೆರೆಗೆ, ಚಳ್ಳಕೆರೆಯಿಂದ ರಾಯಪುರಕ್ಕೆ ಯಾತ್ರೆ ತೆರಳಲಿದ್ದು, ಶನಿವಾರ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆದಿದೆ.

Rahul Gandhi: ಗುರು ರಾಯರ ದರ್ಶನಕ್ಕೆ ರಾಹುಲ್‌ ಉತ್ಸುಕ: ಗುರುವಾರ ಮಂತ್ರಾಲಯಕ್ಕೆ ಭೇಟಿ
ಮೂರನೇ ಹಂತದಲ್ಲಿ ಮಾಧವರಂ ಮೂಲಕ‌ ರಾಯಚೂರಿನ ಗಿಲ್ಲೆಸೂಗೂರು ಮೂಲಕ ಪಾದಯಾತ್ರೆ ತಂಡ ಪ್ರವೇಶ ಮಾಡಲಿದೆ. ಗಿಲ್ಲೆಸೂಗೂರು ನಿಂದ ಯರೇಗಾರಕ್ಕೆ ಪಾದಯಾತ್ರೆ ಸಂಚರಿಸಲಿದೆ. ಯರೇಗಾರ ಮೂಲಕ ರಾಯಚೂರು, ರಾಯಚೂರಿನಿಂದ ದೇವಸೂಗೂರುಗೆ ಭಾರತ್ ಜೋಡೋ ಯಾತ್ರೆ ತೆರಳಲಿದೆ. ದೇವಸೂಗೂರಿನಿಂದ ವಿಕಾರಬಾದ್ ಮೂಲಕ ತೆಲಂಗಾಣಕ್ಕೆ ಪ್ರವೇಶ ಮಾಡಲಿದೆ.

ರಾಹುಲ್ ಪಾದಯಾತ್ರೆಗೆ ಉತ್ತಮ ಜನಬೆಂಬಲವೂ ಸಿಗುತ್ತಿದ್ದು, ರಾಜಕೀಯವಾಗಿಯೂ ಪಾದಯಾತ್ರೆಯ ಲಾಭ ಪಡೆಯುವ ಪ್ರಯತ್ನ ಕಾಂಗ್ರೆಸ್ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ರಾಹುಲ್ ಪಾದಯಾತ್ರೆಯನ್ನು ಬಿಜೆಪಿ ಟೀಕಿಸುತ್ತಿದ್ದು, ನಿರಂತರ ವಾಗ್ದಾಳಿಯನ್ನು ನಡೆಸುತ್ತಿದೆ. ಇವೆಲ್ಲದರ ನಡುವೆ ಪಾದಯಾತ್ರೆ ಬಿರುಸಿನಿಂದ ಸಾಗುತ್ತಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ