ಆ್ಯಪ್ನಗರ

ಪ್ರಣಬ್‌, ನಾನಾಜಿ ಮತ್ತು ಭೂಪೇನ್‌ಗೆ ಭಾರತ ರತ್ನ

ಕೇಂದ್ರ ಸರಕಾರ ನಾಲ್ಕು ವರ್ಷಗಳ ಬಳಿಕ ಭಾರತ ರತ್ನ ಪ್ರಶಸ್ತಿ ಪ್ರಕಟಿಸಿದ್ದು, ದೇಶ್‌ಮುಖ್‌ ಮತ್ತು ಹಜಾರಿಕಾ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ. ಇದುವರೆಗೆ ಭಾರತ ರತ್ನ ಗೌರವ ಪಡೆದವರ ಸಂಖ್ಯೆ 48ಕ್ಕೇರಿದೆ.

Vijaya Karnataka 26 Jan 2019, 8:05 am
ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಭಾರತೀಯ ಜನಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ನಾನಾಜಿ ದೇಶ್‌ಮುಖ್‌ ಮತ್ತು ಅಸ್ಸಾಮ್‌ನ ಅಮರ ಗಾಯಕ, ಸಾಹಿತಿ ಭೂಪೇನ್‌ ಹಜಾರಿಕಾ ಅವರಿಗೆ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನ ನೀಡಲಾಗಿದೆ.

ಇದೇ ವೇಳೆ, ಪದ್ಮವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನೂ ಪ್ರಕಟಿಸಲಾಗಿದ್ದು, ಕರ್ನಾಟಕದ ಐವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾಲ್ಕು ವರ್ಷಗಳ ಬಳಿಕ: ಕೇಂದ್ರ ಸರಕಾರ ನಾಲ್ಕು ವರ್ಷಗಳ ಬಳಿಕ ಭಾರತ ರತ್ನ ಪ್ರಶಸ್ತಿ ಪ್ರಕಟಿಸಿದ್ದು, ದೇಶ್‌ಮುಖ್‌ ಮತ್ತು ಹಜಾರಿಕಾ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ. ಇದುವರೆಗೆ ಭಾರತ ರತ್ನ ಗೌರವ ಪಡೆದವರ ಸಂಖ್ಯೆ 48ಕ್ಕೇರಿದೆ.

ಪ್ರಣಬ್‌ ಮುಖರ್ಜಿ ಅವರು ಸಮಕಾಲೀನ ಶ್ರೇಷ್ಠ ಮುತ್ಸದ್ಧಿಯಾಗಿದ್ದು, ಅದೆಷ್ಟೋ ದಶಕಗಳಿಂದ ನಿಸ್ವಾರ್ಥವಾಗಿ, ಅವಿಶ್ರಾಂತವಾಗಿ ದೇಶದ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಅವರಿಗೆ ಭಾರತ ರತ್ನ ನೀಡಿದ್ದು ಖುಷಿಯಾಗಿದೆ.
ನರೇಂದ್ರ ಮೋದಿ, ಪ್ರಧಾನಿ

ಸಿದ್ಧಗಂಗಾ ಶ್ರೀಗಳಿಗೆ ಸಿಗದ ಗೌರವ
ಜನವರಿ 21ರಂದು ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಈ ಬಾರಿಯಾದರೂ 'ಭಾರತ ರತ್ನ' ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಅವರಿಗೆ ದೇಶದ ಅತ್ಯುನ್ನತ ಗೌರವ ನೀಡಬೇಕೆಂಬ ಬೇಡಿಕೆ ಕಳೆದ ಕೆಲವು ವರ್ಷಗಳಿಂದ ತೀವ್ರವಾಗಿದ್ದರೂ ಸರಕಾರ ಪರಿಗಣಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ