ಆ್ಯಪ್ನಗರ

ಜಯಾಗೆ ಭಾರತ ರತ್ನ: ಪಿಐಎಲ್‌ ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್‌

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಭಾರತ ರತ್ನಪ್ರಶಸ್ತಿ ನೀಡಬೇಕೆಂಬ ಕೋರಿಕೆಯನ್ನು ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿದೆ.

ಟೈಮ್ಸ್ ಆಫ್ ಇಂಡಿಯಾ 6 Jan 2017, 2:52 pm
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಭಾರತ ರತ್ನಪ್ರಶಸ್ತಿ ನೀಡಬೇಕೆಂಬ ಕೋರಿಕೆಯನ್ನು ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿದೆ.
Vijaya Karnataka Web bharat ratna for jayalalithaa madras hc trashes plea says wont dictate central government
ಜಯಾಗೆ ಭಾರತ ರತ್ನ: ಪಿಐಎಲ್‌ ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್‌


ಮುಖ್ಯ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಮತ್ತು ಜಸ್ಟಿಸ್‌ ಎಂ ಸುಂದರ್‌ ಅವರ ನ್ಯಾಯಪೀಠ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವವನ್ನು ಯಾರಿಗೆ ನೀಡಬೇಕೆಂದು ನಿರ್ಧರಿಸುವ ಕೇಂದ್ರ ಸರಕಾರದ ಅಧಿಕಾರದ ಮೇಲೆ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದೆ.

ಕೆ.ಕೆ ರಮೇಶ್‌ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಂತಹ ಅತ್ಯುನ್ನತ ಪ್ರಶಸ್ತಿಗಳನ್ನು ಯಾರಿಗೆ ನೀಡಬೇಕೆಂದು ನಿರ್ಧರಿಸುವ ವಿವೇಚನೆ ಸರಕಾರಕ್ಕೆ ಸೇರಿದ್ದು. ಅದರ ಮೇಲೆ ನ್ಯಾಯಾಲಯಗಳು ಪ್ರಭಾವ ಬೀರುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದಕ್ಕೆ ಮೊದಲು ನೇತಾಜಿ ಸುಭಾಶ್ಚಂದ್ರ ಬೋಸ್‌ ಪ್ರಶಸ್ತಿ ನೀಡುವಂತೆ ಆದೇಶ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಕೆಳಗಿನ ನ್ಯಾಯಾಲಯ ವಿಚಾರಣೆಗೆ ಎತ್ತಿಕೊಂಡಿದ್ದನ್ನು ರಮೇಶ್‌ ಉಲ್ಲೇಖಿಸಿದ್ದರು.

ಈ ಮೊದಲು ತಮಿಳುನಾಡು ಸಚಿವ ಸಂಪುಟ, ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಅವರಿಗೆ 'ಭಾರತ ರತ್ನ' ನೀಡುವಂತೆ ಶಿಫಾರಸು ಮಾಡುವ ನಿರ್ಣಯ ಅಂಗೀಕರಿಸಿತ್ತು. ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಸರಕಾರದ ಶಿಫಾರಸು ಪತ್ರವನ್ನು ಸಲ್ಲಿಸಿದ್ದರು. ಜೊತೆಗೆ ಸಂಸ್‌ತ ಭವನದ ಮುಂದೆ ಜಯಲಲಿತಾರ ಕಂಚಿನ ಪುತ್ಥಳಿ ಸ್ಥಾಪಿಸುವಂತೆಯೂ ಕೋರಿದ್ದರು.

Bharat Ratna for Jayalalithaa: Madras HC trashes plea, says won't dictate Central government

CHENNAI: The Madras High Court today rejected the petition seeking Bharat Ratna for the late former Tamil Nadu Chief Minister Jayalalithaa.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ