ಆ್ಯಪ್ನಗರ

ಭೀಮ್‌ ಆ್ಯಪ್‌ ವಹಿವಾಟು ಮಿತಿ ಹೆಚ್ಚಳಕ್ಕೆ ಚಿಂತನೆ: ಪ್ರಧಾನಿ

ನಗದು ರಹಿತ ವಹಿವಾಟನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತ ಸರಕಾರ ಹೊರತಂದಿರುವ ಭೀಮ್‌ (ಭಾರತ್‌ ಇಂಟರ್‌ಫೇಸ್‌ ಫಾರ್‌ ಮನಿ) ಆ್ಯಪ್‌ನ ವಹಿವಾಟು ಮಿತಿಯನ್ನು ಶೀಘ್ರದಲ್ಲೆ ಹೆಚ್ಚಿಸಲಾಗುವುದು ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿಕೆ ನೀಡಿದ್ದಾರೆ.

Vijaya Karnataka Web 10 Jan 2017, 10:31 am

ಹೊಸದಿಲ್ಲಿ: ನಗದು ರಹಿತ ವಹಿವಾಟನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತ ಸರಕಾರ ಹೊರತಂದಿರುವ ಭೀಮ್‌ (ಭಾರತ್‌ ಇಂಟರ್‌ಫೇಸ್‌ ಫಾರ್‌ ಮನಿ) ಆ್ಯಪ್‌ನ ವಹಿವಾಟು ಮಿತಿಯನ್ನು ಶೀಘ್ರದಲ್ಲೆ ಹೆಚ್ಚಿಸಲಾಗುವುದು ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿಕೆ ನೀಡಿದ್ದಾರೆ.

'ಪ್ರತಿದಿನಕ್ಕೆ ಗರಿಷ್ಠ ವಹಿವಾಟು ಮಿತಿ 20 ಸಾವಿರ ರೂಗಳಾಗಿದ್ದು, ರಾಷ್ಟ್ರೀಯ ಪಾವತಿ ಕಾರ್ಪೊರೇಷನ್‌ (ಎನ್‌ಪಿಸಿಐ), ಮಿತಿಯನ್ನು ಹೆಚ್ಚಿಸಲು ಯೋಚಿಸುತ್ತಿದೆ,' ಎಂದು ಮೋದಿ ಟ್ವಿಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

' ಬಿಡುಗಡೆಗೊಂಡು ಕೇವಲ 10 ದಿನಗಳ ಅವಧಿಯಲ್ಲಿ ಭೀಮ್‌ ಆ್ಯಪ್‌ನ್ನು 1ಕೋಟಿ ಜನರು ಅಳವಡಿಸಿಕೊಂಡಿದ್ದಾರೆ. ಈಗಾಗಲೆ 20 ಲಕ್ಷ ಜನರು ಅದರ ಮೂಲಕ ವಹಿವಾಟು ನಡೆಸುತ್ತಿದ್ದಾರೆ,' ಎಂದು ಮೋದಿ ತಿಳಿಸಿದ್ದಾರೆ.

ಸಧ್ಯಕ್ಕೆ ದೇಶಾದ್ಯಂತ ಕಾರ್ಯನಿರ್ವಹಿಸುವ 35 ಬ್ಯಾಂಕ್‌ಗಳ ಗ್ರಾಹಕರು ಭೀಮ್‌ ಆ್ಯಪ್‌ನ್ನು ಬಳಸಬಹುದು. ಮುಂದಿನ ಕೆಲವು ವಾರಗಳಲ್ಲಿ ಮತ್ತಷ್ಟು ಬ್ಯಾಂಕ್‌ಗಳನ್ನು ಜೋಡಿಸಲು ಯೋಚಿಸಲಾಗುತ್ತಿದೆ. ಸದ್ಯಕ್ಕೆ 'ಭೀಮ್‌'ನಲ್ಲಿ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಭಾಷೆಗಳು ಮಾತ್ರ ಲಭ್ಯವಿದ್ದು, ಇತರೆ ಹತ್ತು ಭಾರತೀಯ ಭಾಷೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ.

ಬಳಕೆಯ ವಿಷಯದಲ್ಲಿ ಭೀಮ್‌ ಆ್ಯಪ್‌, ವೇಗವಾಗಿ ಅಭಿವೃದ್ದಿಗೊಳ್ಳುತ್ತಿದೆ. ಕೇವಲ 2 ಎಂ.ಬಿ ಸ್ಥಳವನ್ನು ಆಕ್ರಮಿಸಿಕೊಳ್ಳುವ ಈ ಆ್ಯಪ್‌, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹೆಚ್ಚು ಅಂಕಗಳನ್ನು ಪಡೆದಿದೆ. ನೇರವಾಗಿ ಬ್ಯಾಂಕ್‌ ಜತೆಗೆ ವಹಿವಾಟು ನಡೆಸುವ ಅವಕಾಶವಿದ್ದು, ಇದು ಅತ್ಯಂತ ಸುಲಭದ ಆ್ಯಪ್‌ ಆಗಿದೆ. ಅಲ್ಲದೆ ಬಳಕೆದಾರರು ಯಾವಾಗಬೇಕಾದರು ತಮ್ಮ ಖಾತೆಯ ಕುರಿತು ಮಾಹಿತಿ ಪಡೆಯಬಹುದು, ಒಂದಕ್ಕಿಂತಲೂ ಹೆಚ್ಚು ಖಾತೆ ಹೊಂದಿರುವವರು ಸುಲಭವಾಗಿ ವಹಿವಾಟು ನಡೆಸಬಹುದು.

Vijaya Karnataka Web bhim transaction limit to be extended pm
ಭೀಮ್‌ ಆ್ಯಪ್‌ ವಹಿವಾಟು ಮಿತಿ ಹೆಚ್ಚಳಕ್ಕೆ ಚಿಂತನೆ: ಪ್ರಧಾನಿ


ಮೊಬೈಲ್ ವ್ಯಾಲೆಟ್ ಬಳಕೆ ವೇಳೆ ಎಚ್ಚರಿಸಬೇಕಾದ ಕ್ರಮಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ