ಆ್ಯಪ್ನಗರ

ಸಿಜೆಐ ವಿರುದ್ಧ 'ದುರ್ನಡತೆ' ಆರೋಪ ಹೊರಿಸಿದ ಪ್ರಶಾಂತ್ ಭೂಷಣ್‌

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧ 'ಗಂಭೀರ ದುರ್ನಡತೆ' ಆರೋಪದಲ್ಲಿ ತನಿಖೆ ನಡೆಸಬೇಕೆಂದು ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ಆಗ್ರಹಿಸಿದ್ದಾರೆ.

Vijaya Karnataka Web 17 Jan 2018, 11:39 am
ಹೊಸದಿಲ್ಲಿ: ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧ 'ಗಂಭೀರ ದುರ್ನಡತೆ' ಆರೋಪದಲ್ಲಿ ತನಿಖೆ ನಡೆಸಬೇಕೆಂದು ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ಆಗ್ರಹಿಸಿದ್ದಾರೆ.
Vijaya Karnataka Web bhushan seeks probe against cji for serious misconduct
ಸಿಜೆಐ ವಿರುದ್ಧ 'ದುರ್ನಡತೆ' ಆರೋಪ ಹೊರಿಸಿದ ಪ್ರಶಾಂತ್ ಭೂಷಣ್‌


ತಮ್ಮ ಆಡಳಿತಾತ್ಮಕ ಅಧಿಕಾರ ಬಳಸಿ ಕೇಸುಗಳ ಮರುಹಂಚಿಕೆ ಮಾಡುವಾಗ ಸಿಜೆಐ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಭೂಷಣ್‌ ಆರೋಪಿಸಿದ್ದಾರೆ.

'ನ್ಯಾಯಾಂಗದ ಉತ್ತರದಾಯಿತ್ವ ಮತ್ತು ನ್ಯಾಯಾಂಗ ಸುಧಾರಣೆಗಾಗಿ ಆಂದೋಲನ'ದ (ಸಿಜೆಎಆರ್‌) ಮುಖ್ಯಸ್ಥರಾಗಿರುವ ಪ್ರಶಾಂತ್‌ ಭೂಷಣ್‌, 'ಸಿಜೆಐ ವಿರುದ್ಧ ದೂರುಗಳ ನಿರ್ವಹಣೆ ವಿಧಾನದ ಬಗ್ಗೆ ಮೌನವಾಗಿರುವುದು ಸರಿಯಲ್ಲ. ಅಂತಹ ದೂರುಗಳನ್ನು ಕೊಲೀಜಿಯಂನಲ್ಲಿ ಎರಡನೇ ಸ್ಥಾನದಲ್ಲಿರುವ ಹಿರಿಯ ನ್ಯಾಯಮೂರ್ತಿಗಳು ಪರಿಶೀಲಿಸುವಂತಿರಬೇಕು' ಎಂದು ಪ್ರತಿಪಾದಿಸಿದರು.

ಉತ್ತರ ಪ್ರದೇಶ ಮೆಡಿಕಲ್ ಕಾಲೇಜು ಹಗರಣದಲ್ಲಿ ಆರೋಪಿಗಳ ನಡುವಣ ಸಂಭಾಷಣೆಯ ಧ್ವನಿಮುದ್ರಿಕೆ ಲಿಖಿತ ಪ್ರತಿ ಸೋರಿಕೆಯಾದ ಪ್ರಕರಣದಲ್ಲಿ ಸಿಜೆಐ ವಿರುದ್ಧ ಭೂಷಣ್‌ ದೂರು ಸಲ್ಲಿಸಿದ್ದಾರೆ. ಸಿಜೆಐ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಮೇಲ್ನೋಟಕ್ಕೆ ಸಾಕ್ಷಿ ಇಲ್ಲವಾದರೂ ತನಿಖೆ ಅಗತ್ಯ ಎಂದು ಅವರು ಆಗ್ರಹಿಸಿದರು.

ಮೆಡಿಕಲ್‌ ಹಗರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿ, ದೂರುದಾರರಿಗೆ ಭಾರೀ ದಂಡ ವಿಧಿಸಿತ್ತು. ಅಲಹಾಬಾದ್‌ ಹೈಕೋರ್ಟಿನ ಹಾಲಿ ನ್ಯಾಯಾಧೀಶರೊಬ್ಬರ ವಿರುದ್ಧ ಸಿಬಿಐ ತನಿಖೆಗೆ ಸಿಜೆಐ ಅನುಮತಿ ನಿರಾಕರಿಸಿದ್ದಾರೆ. ಆದರೆ ಒರಿಸ್ಸಾ ಹೈಕೋರ್ಟಿನ ಮಾಜಿ ಜಜ್‌ ಐಎಂ ಖುದ್ದೂಸಿ ಹಾಗೂ ಉತ್ತರ ಪ್ರದೇಶ ಶಿಕ್ಷಣ ಸಂಸ್ಥೆಯ ಅಧಿಕಾರಿ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ ಎಂದು ಭೂಷಣ್‌ ಆರೋಪಿಸಿದರು.

ಲಖನೌ ಮೆಡಿಕಲ್‌ ಕಾಲೇಜಿಗೆ ನೆರವಾಗಲು ಹೈಕೋರ್ಟ್‌ ಜಜ್‌ ಲಂಚ ತೆಗೆದುಕೊಂಡಿರುವುದು 'ಸಾಬೀತಾಗಿದ್ದರೂ' ಎಫ್‌ಐಆರ್‌ ದಾಖಲಿಸಲು ಸಿಬಿಐಗೆ ಮುಖ್ಯ ನ್ಯಾಯಮೂರ್ತಿಗಳು ಅನುಮತಿ ನೀಡಿಲ್ಲ ಎಂದು ಭೂಷಣ್‌ ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ