ಆ್ಯಪ್ನಗರ

ಬಿಹಾರದಲ್ಲಿ ಎನ್‌ಡಿಎಗೆ ಶಾಕ್‌, ಮಹಾಘಟಬಂಧನ್‌ಗೆ ಮುನ್ನಡೆ: ಟೈಮ್ಸ್‌ನೌ-ಸಿ ವೋಟರ್‌ ಸಮೀಕ್ಷೆ

ಬಿಹಾರದಲ್ಲಿ ಅಧಿಕಾರದಲ್ಲಿರುವ ನಿತೀಶ್‌ ಕುಮಾರ್ ಈ ಬಾರಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳಲಿದ್ದು, ತೇಜಸ್ವಿ ಯಾದವ್‌ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಟೈಮ್ಸ್‌ ನೌ-ಸಿ ವೋಟರ್‌ ಮತದಾನೋತ್ತರ ಸಮೀಕ್ಷೆ ಹೇಳಿದೆ.

Agencies 7 Nov 2020, 8:18 pm
ಹೊಸದಿಲ್ಲಿ: ಬಿಹಾರದಲ್ಲಿ ಎನ್‌ಡಿಎ ಅಧಿಕಾರ ಕಳೆದುಕೊಳ್ಳಲಿದ್ದು, ಮುಖ್ಯಮಂತ್ರಿ ಕುರ್ಚಿ ಮಹಾಘಟಬಂಧನ್ ಪಾಲಾಗುವ ಸಾಧ್ಯತೆ ಇದೆ ಎಂದು ಟೈಮ್ಸ್‌ ನೌ-ಸಿ ವೋಟರ್‌ ಮತದಾನೋತ್ತರ ಸಮೀಕ್ಷೆ ಹೇಳಿದೆ.‌ ಆದರೆ ಮಹಾಘಟಬಂಧನ್ಗೆ ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆ ಉಂಟಾಗಲಿದೆ.
Vijaya Karnataka Web Tejashwi Yadav


ಸತತ 15 ವರ್ಷಗಳಿಂದ ಬಿಹಾರದಲ್ಲಿ ಅಧಿಕಾರದಲ್ಲಿರುವ ನಿತೀಶ್‌ ಕುಮಾರ್ (ಮಧ್ಯದಲ್ಲೊಮ್ಮೆ 1 ವರ್ಷ ಅಧಿಕಾರವನ್ನು ಜೀತನ್‌ ರಾಂ ಮಾಂಝಿಗೆ ಬಿಟ್ಟು ಕೊಟ್ಟಿದ್ದರು)‌ ಈ ಬಾರಿ ಅಧಿಕಾರ ಕಳೆದುಕೊಳ್ಳಲಿರುವುದಾಗಿ ಸಮೀಕ್ಷೆ ಹೇಳಿದ್ದು, ತೇಜಸ್ವಿ ಯಾದವ್‌ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.

ಟೈಮ್ಸ್‌ ನೌ - ಸಿ ವೋಟರ್‌ ಪ್ರಕಾರ ಬಿಹಾರದಲ್ಲಿ ಎನ್‌ಡಿಎ 116 ಸ್ಥಾನಗಳನ್ನು ಗೆಲ್ಲಲಿದ್ದರೆ, ಮಹಾಘಟಬಂಧನ್‌ 120 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಲ್‌ಜೆಪಿ 1 ಹಾಗೂ ಇತರರು 6 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿದ್ದು ಬಹುಮತಕ್ಕೆ 122 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಹೀಗಾಗಿ ಮಹಾಘಟಬಂಧನ್‌ಗೆ ಕೆಲವು ಸ್ಥಾನಗಳ ಕೊರತೆ ಉಂಟಾಗಲಿದೆ.

ಬಿಹಾರ ಚುನಾವಣೋತ್ತರ ಸಮೀಕ್ಷೆ

ಸಮೀಕ್ಷೆಯ ಪ್ರಕಾರ, ಎನ್‌ಡಿಎ ಶೇ. 37.70 ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. ಇನ್ನು ಯುಪಿಎ ಶೇ. 36.30, ಎಲ್‌ಜೆಪಿ ಶೇ. 8.50 ಹಾಗೂ ಇತರರು ಶೇ. 17.50 ಮತಗಳನ್ನು ಪಡೆದುಕೊಳ್ಳಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ಮಹಾಘಟಬಂಧನ್‌ಗಿಂತ ಹೆಚ್ಚಿನ ಮತಗಳನ್ನು ಪಡೆದುಕೊಳ್ಳಲಿದೆಯಾದರೂ ಹೆಚ್ಚಿನ ಸ್ಥಾನಗಳು ಯುಪಿಎ ಪಾಲಾಗಲಿವೆ ಎಂದು ಸಮೀಕ್ಷೆ ತಿಳಿಸಿದೆ.

ಎನ್‌ಡಿಎ, ಯುಪಿಎನಲ್ಲಿ ಯಾರಿಗೆ ಎಷ್ಟು?

ಎನ್‌ಡಿಎ ಮೈತ್ರಿಕೂಟದ 116 ಸ್ಥಾನಗಳಲ್ಲಿ ಬಿಜೆಪಿ 70, ಜೆಡಿಯು 42, ಎಚ್‌ಎಎಂ 2, ವಿಐಪಿ 2 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಮಹಾಘಟಬಂಧನ್‌ನ 120 ಸ್ಥಾನಗಳಲ್ಲಿ ಆರ್‌ಜೆಡಿ 85 ಸ್ಥಾನಗಳನ್ನು ಗೆಲ್ಲಲಿದ್ದರೆ, ಕಾಂಗ್ರೆಸ್‌ 25 ಹಾಗೂ ಎಡಪಕ್ಷಗಳು 10 ಸ್ಥಾನಗಳಲ್ಲಿ ಜಯ ಸಾಧಿಸಲಿವೆ ಎಂದು ಸಮೀಕ್ಷೆ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ