ಆ್ಯಪ್ನಗರ

ಬಿಹಾರ ಚುನಾವಣೆ: ಸಮೀಕ್ಷೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ, ಕುತೂಹಲ ಮೂಡಿಸಿದ ಜನಾಭಿಪ್ರಾಯ

ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ. ಭಾರೀ ಕುತೂಹಲ ಕೆರಳಿಸಿದ ಸಿ-ವೋಟರ್‌ ಸಮೀಕ್ಷೆ. ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದರೆ ಜೆಡಿಯುಗೆ ದೊಡ್ಡ ಹೊಡೆತ? ಎನ್‌ಡಿಎ ಭಾಗವಾದರು ಸಮಸ್ಯೆಗೆ ದಾರಿ? ಇಲ್ಲಿದೆ ಈ ಬಗ್ಗೆ ಮಾಹಿತಿ.

Vijaya Karnataka Web 14 Oct 2020, 7:40 am
ಬಿಹಾರ: ಬಿಹಾರದಲ್ಲಿ ಎನ್‌ಡಿಎ ನಿಚ್ಚಳ ಬಹುಮತ ಸಾಧಿಸಲಿದ್ದು, ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಟೈಮ್ಸ್‌ ನೌ- ಸಿ ವೋಟರ್‌ ಸಮೀಕ್ಷೆ ತಿಳಿಸಿದೆ. ಬಿಹಾರದ ಎಲ್ಲ 243 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾದ ಚುನಾವಣಾ ಪೂರ್ವ ಸಮೀಕ್ಷೆಯು ಜನಾಭಿಪ್ರಾಯ ಎನ್‌ಡಿಎ ಪರವಾಗಿ ಇರುವ ಸೂಚನೆ ನೀಡಿದೆ.
Vijaya Karnataka Web Bihar assembly elections 2020
A hoarding of PM Narendra Modi and Bihar CM Nitish Kumar in Patna on September 21 ahead of Bihar Assembly elections.


ನಿತೀಶ್‌ ನೇತೇತ್ವದಲ್ಲೇ ಚುನಾವಣೆ ಎಂದು ಬಿಜೆಪಿ ಘೋಷಿಸಿರುವುದರಿಂದ ಫಲಿತಾಂಶದ ಅದೇ ನಿಲುವಿಗೆ ಪಕ್ಷ ಬದ್ಧವಾಗಿರುತ್ತದೆಯೇ ಎನ್ನುವ ಕುತೂಹಲ ಮೂಡಿದೆ.

ಯಾರಿಗೆಷ್ಟು ಸ್ಥಾನ?


ಎನ್‌ಡಿಎ 160

(ಬಿಜೆಪಿ 85, ಜೆಡಿಯು 70, ಇತರರು 5)

ಮಹಾ ಘಟಬಂಧನ್‌ 76

(ಆರ್‌ಜೆಡಿ 56, ಕಾಂಗ್ರೆಸ್‌ 15,ಇತರರು 5)

ಇತರರು 7

ಒಟ್ಟು ಸ್ಥಾನ 243

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ