ಆ್ಯಪ್ನಗರ

ಪ್ಯಾಂಡಮಿಕ್‌ ಪಾಲಿಟಿಕ್ಸ್‌: ಚುನಾವಣೆ ಅಂಗಳಕ್ಕೂ ಕಾಲಿಟ್ಟ ಕೊರೊನಾ ಲಸಿಕೆ, ವಿವಾದಕ್ಕೆ ಸಿಲುಕಿದ ರಾಜಕೀಯ ಪಕ್ಷಗಳ ಹೇಳಿಕೆ

ಇಡೀ ಬಿಹಾರದ ಜನತೆಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

Vijaya Karnataka Web 23 Oct 2020, 10:46 am
ಹೊಸದಿಲ್ಲಿ: ಕೊರೊನಾ ಎಂಬ ಮಹಾಮಾರಿ ಈ ವಿಶ್ವದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿಯಾಗಿದೆ. ಈಗ ಚುನಾವಣೆ ಅಂಗಳದಲ್ಲೂ ಇದು ಕಾಲಿಟ್ಟಿದೆ. ಆದರೆ ಇಲ್ಲಿ ವೈರಸ್‌ ಸೃಷ್ಟಿ ಮಾಡಿದ್ದು ರಾಜಕೀಯ ಪಕ್ಷಗಳು.
Vijaya Karnataka Web ಬಿಜೆಪಿ ಪ್ರಣಾಳಿಕೆ
ಬಿಜೆಪಿ ಪ್ರಣಾಳಿಕೆ


ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ ಲಗ್ಗೆ ಇಟ್ಟಿದೆ.

ಇಡೀ ಬಿಹಾರದ ಜನತೆಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಬಿಹಾರದ ಬೆನ್ನಲ್ಲೇ ತಮಿಳುನಾಡು, ಮಧ್ಯಪ್ರದೇಶ ಹಾಗೂ ಕೆಲವು ರಾಜ್ಯಗಳಲ್ಲಿ ಕೂಡ ಕೊರೊನಾ ಲಸಿಕೆ ರಾಜಕೀಯ ಶುರುವಾಗಿದೆ.

'ಪ್ಯಾಂಡಮಿಕ್‌ ಪೊಲಿಟಿಸೈಝೇಷನ್‌' ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಂಕ್ರಾಮಿಕ ನಿಯಂತ್ರಣ ಮಾಡುವ ಬದಲು ಈ ರೀತಿಯ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಕೇಂದ್ರ ಸರಕಾರ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ.

ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳೇ ಲಸಿಕೆ ನೀಡುವ ವೇಳಾಪಟ್ಟಿಯಾಗಲಿದೆ. ಇದು ಕೇಂದ್ರ ಸರಕಾರದ ಕೋವಿಡ್‌ ಹೋರಾಟದ ಕಾರ್ಯತಂತ್ರ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.


ಈ ಸಂಬಂಧ ಟ್ವೀಟ್‌ ಮಾಡಿರುವ ರಹುಲ್‌, ಕೇಂದ್ರ ಸರಕಾರ ಈಗಷ್ಟೇ ಕೋವಿಡ್‌ ಹೋರಾಟದ ಕಾರ್ಯತಂತ್ರ ಘೋಷಣೆ ಮಾಡಿದೆ. ರಾಜ್ಯವಾರು ಚುನಾವಣೆ ವೇಳಾಪಟ್ಟಿ ನೋಡಿ ನಿಮಗೆ ತಿಳಿಯಲಿದೆ. ಜತೆಗೆ ಸುಳ್ಳು ಭರವಸೆಗಳು ಕೂಡ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಆದರೆ ಬಿಜೆಪಿಯ ಈ ಘೋಷಣೆಯನ್ನು ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥರಾದ ಅಮಿತ್‌ ಮಾಳವಿಯಾ ಸಮರ್ಥಿಸಿಕೊಂಡಿದ್ದಾರೆ.

ಈಗಾಗಲೇ ಕೆಲವು ಯೋಜನೆಗಳನ್ನು ಪ್ರಕಟಿಸಿದಂತೆ ಕೊರೊನಾ ಲಸಿಕೆ ಯೋಜನೆಯನ್ನು ಪ್ರಕಟಿಸಲಾಗಿದೆ. ಇದು ರಾಜ್ಯವಾರು ವಿಷಯವೂ ಆಗಿದೆ. ರಾಜ್ಯಗಳಲ್ಲಿ ಜನರ ಆರೋಗ್ಯ ಕಾಪಾಡುವುದು ಆಯಾ ಸರಕಾರಗಳಿಗೆ ಬಿಟ್ಟಿದ್ದು, ಬಿಹಾರ ಬಿಜೆಪಿ ಘಟಕ ಉಚಿತವಾಗಿ ಕೊರೊನಾ ಲಸಿಕೆ ನೀಡುವ ಭರವಸೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಖಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ತನ್ನ ಪಕ್ಷದ ಬೊಕ್ಕಸದಿಂದ ಕೊರೊನಾ ಲಸಿಕೆ ಹಾಕುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಸಿಪಿಎಂ ನಾಯಕ ಸೀತಾರಾಮ್‌ ಯೆಚೂರಿ ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ