ಆ್ಯಪ್ನಗರ

ಬಿಹಾರ ಚುನಾವಣೆ: ಮತ್ತೆ ಜೆಡಿಯು ಕಡೆ ಮುಖ ಮಾಡಿದ ಹಿರಿಯ ನಾಯಕ ಶರದ್‌ ಯಾದವ್‌..!

ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಎಲ್ಲ ಪಕ್ಷಗಳೂ ಪ್ರಚಾರವನ್ನು ಜೋರಾಗಿಯೇ ಆರಂಭಿಸಿವೆ. ಈ ಸಂದರ್ಭದಲ್ಲಿ ನಾಯಕರ ಪಕ್ಷಗಳ ವಲಸೆ ಪರ್ವವೂ ಜೋರಾಗಿದೆ. 2018ರಲ್ಲಿ ಜೆಡಿಯು ತೊರೆದು ಎಲ್‌ಜೆಡಿ ಸ್ಥಾಪಿಸಿದ್ದ ಹಿರಿಯ ನಾಯಕ ಶರದ್‌ ಯಾದವ್‌ ಮತ್ತೆ ಜೆಡಿಯು ಕಡೆ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Agencies 31 Aug 2020, 10:54 pm
ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ನಾಯಕರ ಪಕ್ಷಗಳ ವಲಸೆ ಪರ್ವವೂ ಜೋರಾಗಿದೆ. ಕಳೆದ 4 ವರ್ಷಗಳ ಹಿಂದೆ ಬಿಜೆಪಿ ಜೊತೆ ಮೈತ್ರಿ ವಿರೋಧಿಸಿ, ಜೆಡಿಯು ತೊರೆದಿದ್ದ ಜನತಾ ಪರಿವಾರದ ಹಿರಿಯ ನಾಯಕ ಶರದ್ ಯಾದವ್ ಈಗ ಮತ್ತೆ ಸಂಯುಕ್ತ ಜನತಾದಳದ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.
Vijaya Karnataka Web bihar polls former jdu chief sharad yadav to join hands with nitish kumar
ಬಿಹಾರ ಚುನಾವಣೆ: ಮತ್ತೆ ಜೆಡಿಯು ಕಡೆ ಮುಖ ಮಾಡಿದ ಹಿರಿಯ ನಾಯಕ ಶರದ್‌ ಯಾದವ್‌..!


2018ರಲ್ಲಿ ಜೆಡಿಯು ತೊರೆದು ಎಲ್‌ಜೆಡಿ ಸ್ಥಾಪಿಸಿದ್ದ ಶರದ್‌ ಯಾದವ್‌ ಮರಳಿ ಜೆಡಿಯುಗೆ ಬರಲು ಅಖಾಡ ಸಿದ್ಧಗೊಳಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಈಗಾಗಲೇ ಜೆಡಿಯುನ ಹಲವು ನಾಯಕರನ್ನು ಶರದ್‌ ಯಾದವ್‌ ಭೇಟಿ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಆದರೆ, ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಜೊತೆ ಶರದ್‌ ಯಾದವ್‌ ಇನ್ನು ಮಾತುಕತೆ ನಡೆಸಿಲ್ಲ ಎನ್ನಲಾಗಿದೆ.

ನಿತೀಶ್‌ ಕುಮಾರ್‌ ಜೊತೆಗಿನ ಸಭೆ ಬಳಿಕ ಶರದ್‌ ಯಾದವ್‌ ಜೆಡಿಯುಗೆ ಮರಳುವುದು ಖಚಿತ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಆದರೆ, ಶರದ್‌ ಯಾದವ್‌ ಆಪ್ತ ಅಜಿತ್‌ ಯಾದವ್‌ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ್ದು,ಶರದ್‌ ಯಾದವ್‌ ಅನಾರೋಗ್ಯದಿಂದ ದಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರ ಸುದ್ದಿಗೋಷ್ಠಿ ಕರೆದು ಎಲ್ಲ ಗೊಂದಲಗಳಿಗೆ ತೆರೆ ಎಳೆಯುವುದಾಗಿ ಹೇಳಿದ್ದಾರೆ.

ಇದರ ಮಧ್ಯೆಯೇ ಸೋಮವಾರ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಶರದ್‌ ಯಾದವ್‌ ಅವರಿಗೆ ಕರೆ ಮಾಡಿ ಮಾತನಾಡಿರುವುದು ಕುತೂಹಲ ಮೂಡಿಸಿದ್ದು, ಶರದ್‌ ಯಾದವ್‌ ಪಕ್ಷಕ್ಕೆ ಮರಳುವ ಬಗೆಗಿನ ಸುದ್ದಿಗೆ ಇಂಬು ನೀಡಿದಂತಾಗಿದೆ. ಆದರೆ, ಶರದ್‌ ಅವರ ಆರೋಗ್ಯ ವಿಚಾರಿಸಲು ನಿತೀಶ್‌ ಕುಮಾರ್‌ ಕರೆ ಮಾಡಿದ್ದರು ಎಂದು ಎಲ್‌ಜೆಡಿಯ ಕಾರ್ಯದರ್ಶಿ ಅರುಣ್‌ ಶ್ರೀವಾತ್ಸವ್‌ ಹೇಳಿದ್ದಾರೆ.

ಬಿಹಾರ ಚುನಾವಣೆ: ನಿತೀಶ್‌ ಕುಮಾರ್ ಅವರೇ‌ ಎನ್‌ಡಿಎ ಸಿಎಂ ಅಭ್ಯರ್ಥಿ: ಜೆ.ಪಿ.ನಡ್ಡಾ ಸ್ಪಷ್ಟನೆ

ಬಿಹಾರದಲ್ಲಿ ಚುನಾವಣಾ ಅಖಾಡ ರಂಗೇರುತ್ತಿದೆ. ಸೆಪ್ಟೆಂಬರ್ 2ನೇ ವಾರದಿಂದಲೇ ಬಿಜೆಪಿ ನಾಯಕರು ರಾಜ್ಯದಲ್ಲಿ ಚುನಾವಣಾ ಅಖಾಡಕ್ಕೆ ಧುಮುಕುತ್ತಿದ್ದು, ಜೆಡಿಯು ಸಹ ತನ್ನ ಹಳೆಯ ಸಂಗಾತಿಗಳನ್ನೆಲ್ಲಾ ಒಟ್ಟುಗೂಡಿಸುತ್ತಿದೆ ಎನ್ನಲಾಗಿದೆ. ಇದರ ಮುಂದುವರಿದ ಭಾಗವಾಗಿಯೇ ಶರದ್ ಜೆಡಿಯು ನಾಯಕರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಹಾರ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಶಾಕ್: ಮಹಾಘಟಬಂಧನ್‌ನಿಂದ ಹೊರಬಂದ ಮಾಂಜಿ ಪಕ್ಷ!

ಬಿಜೆಪಿ ಜತೆಗಿನ ದೋಸ್ತಿ ವಿರೋಧಿಸಿ ಜೆಡಿಯುನಿಂದ ಹೊರನಡೆದಿದ್ದ ಶರದ್ ಯಾದವ್, ಲಾಲೂ ಪ್ರಸಾದ್‌ರ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಆದರೆ, ಸದ್ಯದ ಸ್ಥಿತಿಗತಿ ಪ್ರಕಾರ ಆರ್‌ಜೆಡಿಯಲ್ಲಿ ಸೋದರರ ಕಲಹ ಜಾಸ್ತಿಯಾಗಿದ್ದು, ತೇಜಸ್ವಿ ಯಾದವ್ ತಮ್ಮ ಸಹೋದರ ತೇಜ್ ಪ್ರತಾಪ್ ಯಾದವ್ ಜೊತೆ ಜಿದ್ದಿಗೆ ಬಿದ್ದಿದ್ದಾರೆ. ಹೀಗಾಗಿ ಶರದ್ ಯಾದವ್ ಭವಿಷ್ಯದ ರಾಜಕಾರಣದ ದೃಷ್ಠಿಯಿಂದ ಮತ್ತೆ ಮಾತೃ ಪಕ್ಷಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

ಬಿಹಾರದಲ್ಲಿ ಅಮಿತ್ ಶಾ ವರ್ಚುವಲ್ ರ‍್ಯಾಲಿ ವಿರೋಧಿಸಿ ಆರ್‌ಜೆಡಿಯಿಂದ ಪ್ರತಿಭಟನೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ